VIDEO: ಮದುವೆ ಮಾಡಿಸಲು ಬಂದಿದ್ದ ಪುರೋಹಿತರಿಗೆ ಭಾರೀ ಅವಮಾನ; ಅಸಲಿಗೆ ಆಗಿದ್ದೇನು?

author-image
Veena Gangani
VIDEO: ಮದುವೆ ಮಾಡಿಸಲು ಬಂದಿದ್ದ ಪುರೋಹಿತರಿಗೆ ಭಾರೀ ಅವಮಾನ; ಅಸಲಿಗೆ ಆಗಿದ್ದೇನು?
Advertisment
  • ಸಾವಿರಾರು ಮಂದಿ ಭಾಗಿಯಾಗಿದ್ದ ಮದುವೆಯಲ್ಲಿ ಪುರೋಹಿತರಿಗೆ ಮುಜುಗರ
  • ಮದುವೆ ಮಾಡಿಸ್ತಿದ್ದ ಪುರೋಹಿತರ ತಲೆ ಮೇಲೆ ಬ್ಯಾಗ್ ಹಾಕಿದ ಯುವಕರು
  • ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಪುರೋಹಿತರ ವಿಡಿಯೋ

ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಸಿಹಿಯಾದ ಕ್ಷಣ. ಜೀವಮಾನದವರೆಗೂ ಸ್ಮರಣೀಯವಾಗಿ ಉಳಿಯುವಂತೆ ಮಾಡಲು ವಧು-ವರ ಇಬ್ಬರು ಸಾಕಷ್ಟು ಪ್ಲಾನ್‌ಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ಪುರೋಹಿತರು ಇಲ್ಲದೆಯೇ ಮದುವೆ ಆಗುತ್ತಾ ಹೇಳಿ. ಆದರೆ ಇಲ್ಲಿ ಮದುವೆ ಶಾಸ್ತ್ರಗಳನ್ನು ಮಾಡಿಸಲು ಬಂದ ಪುರೋಹಿತರಿಗೆ ಯುವಕರು ಅವಮಾನ ಮಾಡಿದ್ದಾರೆ.

publive-image

ಇದನ್ನೂ ಓದಿ: RCBಯಿಂದ ನಾನು ಆಲ್​​ ಫಾರ್ಮೆಟ್​ ಪ್ಲೇಯರ್​ ಆದೆ -ಬೆಂಗಳೂರು ತಂಡದ ಬಗ್ಗೆ ಕನ್ನಡಿಗ KL ರಾಹುಲ್ ಅಭಿಮಾನ​

ಹೌದು, ಪುರೋಹಿತರು, ಅರ್ಚಕರು ಅಂದ್ರೆ ಗೌರವ ಇದ್ದೇ ಇರುತ್ತೆ. ಆದ್ರೆ, ಇಲ್ಲಿ ಕೆಲ ಯುವಕರು ಮದುವೆಗೆ ಬಂದಿದ್ದ ಪುರೋಹಿತರನ್ನು ಬಹಳ ಹೀನಾಯವಾಗಿ ಅವಮಾನ ಮಾಡಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ವೈರಲ್​ ಆದ ವಿಡಿಯೋದಲ್ಲಿ ಹೀಗೆ ಮದುವೆ ಮಾಡಿಸ್ತಿದ್ದ ಪುರೋಹಿತರ ತಲೆ ಮೇಲೆ ಕೆಲ ಯುವಕರು ಬ್ಯಾಗ್ ಹಾಕಿ ಅವಮಾನ ಮಾಡುತ್ತಾರೆ. ಏನೋ ಬಿಡು ಅಂತ ಪುರೋಹಿತರು ಸುಮನಾಗುತ್ತಾರೆ. ಆದರೆ, ಮೇಲಿಂದ ಮೇಲಿಂದ ಪುರೋಹಿತರಿಗೆ ಯುವಕರು ಅವಮಾನಿಸುತ್ತಾರೆ. ಸಾವಿರಾರು ಜನರು ಇದ್ದ ಮದುವೆ ಮಂಟಪದಲ್ಲಿ ಹೀಗೆ ಪುರೋಹಿತರಿಗೆ ಯುವಕರು ಕ್ವಾಟ್ಲೆ ಕೊಟ್ಟಿದ್ದಾರೆ. ಇದರಿಂದ ಸಿಟ್ಟಿಗೆದ್ದಿದ್ದ ಪುರೋಹಿತರು, ನಾನು ಯಾವ ಮದುವೆನೂ ಮಾಡಿಸಲ್ಲ ಅಂತ ಅಲ್ಲಿಂದ ಹೊರಟು ಹೋಗಿದ್ದಾರೆ.

ಆದರೆ ಇದೇ ವಿಡಿಯೋವನ್ನು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಪೂಜಾರಿಯೊಬ್ಬರಿಗೆ ಮಾಡಿದ ಈ ಅವಮಾನ ನೋಡಿ ಮನಸಿಗೆ ನೋವಾಗಿದೆ. ಅವರು ಶುಭ ಕಾರ್ಯವನ್ನು ಮಾಡುತ್ತಿರುವಾಗ ಜನರು ಹೇಗೆ ಮಾಡಿದ್ದಾರೆ ನೋಡಿ ಎಂದು ಬರೆದುಕೊಂಡಿದ್ದಾರೆ. ಇನ್ನು ಈ ವಿಡಿಯೋ ನೋಡಿದ ನೆಟ್ಟಿಗರು ಯುವಕರ ನಡೆಗೆ ಬೇಸರ ಹೊರ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment