ರಾಮಾಯಣ ಸೀರಿಯಲ್ ನೋಡುತ್ತಾ ಕೈ ಮುಗಿದ ವೃದ್ಧೆ
ನೋಡ ನೋಡುತ್ತಿದ್ದಂತೆ ಎದ್ದು ನಿಂತು ಟಿವಿಗೆ ಕೈಮುಗಿದ ಅಜ್ಜಿ
ರಾಮಾಯಣ ಕೇವಲ ಕತೆಯಲ್ಲ, ಅದೊಂದು ಎಮೋಷನ್
90ರ ದಶಕದಲ್ಲಿ ಬಂದಿದ್ದ ರಾಮಾಯಣ ಧಾರವಾಹಿ ಇವತ್ತಿಗೂ ಜನರ ಮನಸ್ಸಿಂದ ಮರೆಯಾಗಿಲ್ಲ. ಅವತ್ತು ಧಾರವಾಹಿ ಪ್ರಸಾರ ಆಗುತ್ತಿದ್ದ ವೇಳೆ ಜನ ಟಿವಿಗೆ ಆರತಿ ಎತ್ತಿ ಭಕ್ತಿಯಿಂದ ಪೂಜೆ ಮಾಡಿ ರಾಮಾಯಣ ಸೀರಿಯಲ್ ಅನ್ನು ಒಂದು ದಿನವೂ ಮಿಸ್ ಮಾಡದೇ ನೋಡುತ್ತಿದ್ದರು. ಅಷ್ಟರ ಮಟ್ಟಿಗೆ ರಾಮಾಯಣ ಸೀರಿಯಲ್ ಜನರ ಮನಸ್ಸಿನಲ್ಲಿ ಇಂದಿಗೂ ಸಹ ಹಚ್ಚ ಹಸಿರಾಗಿ ಉಳಿದುಕೊಂಡಿದೆ.
ಇದೀಗ ಮತ್ತೆ ವಿಶ್ವವಿಖ್ಯಾತ ಪೌರಾಣಿಕ ಧಾರಾವಾಹಿ ‘ರಾಮಾಯಣ’ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಹೀಗೆ ರಾಮಾಯಣ ಸೀರಿಯಲ್ನಲ್ಲಿ ರಾಮ ಹಾಗೂ ಸೀತೆಯ ವಿವಾಹ ಆಗುತ್ತಿತ್ತು. ಈ ವೇಳೆ ವೃದ್ಧೆಯೊಬ್ಬರು ಮನೆಯಲ್ಲಿ ರಾಮಾಯಣ ಸೀರಿಯಲ್ ನೋಡುತ್ತಿದ್ದರು. ಇದೇ ಸಮಯಲ್ಲಿ ಟಿವಿಗೆ ಕೈ ಮುಗಿದು ಅವರ ಭಕ್ತಿಯನ್ನು ತೋರಿಸಿದ್ದಾರೆ. ಆದರೆ ಈ ವಿಡಿಯೋ ಮಾಡುತ್ತಿರುವುದು ವೃದ್ಧೆಗೆ ತಿಳಿದಿಲ್ಲ. ಹಾಗೇ ಟಿವಿಯನ್ನು ನೋಡುತ್ತಾ ನೋಡುತ್ತಾ ಕೈ ಮುಗಿಯುತ್ತಾರೆ. ಹೀಗೆ ವೃದ್ಧೆ ನಿಂತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು, ಕೇವಲ ಅವರಷ್ಟೇ ಅಲ್ಲ ನಮ್ಮ ಕಣ್ಣಿನಲ್ಲು ಭಕ್ತಿಯಿಂದ ನೀರು ಬಂತು, ರಾಮಾಯಣ ಕೇವಲ ಕತೆಯಲ್ಲ, ಅದೊಂದು ಎಮೋಷನ್ ಎಂದು ಬಗೆ ಬಗೆಯಾಗಿ ಕಾಮೆಂಟ್ ಮಾಡಿದ್ದಾರೆ.
An emotion that changed the course of our History !! pic.twitter.com/QD247UdxZQ
— Lost Temples™ (@LostTemple7) August 18, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ