ಮದ್ಯಪಾನ ಮಾಡಿದಾಗ ಕಾಡುವ ಹ್ಯಾಂಗೋವರ್ಗೆ ಇದೆ ಸರಳ ಮದ್ದು
ನಿಮ್ಮನ್ನು ಹ್ಯಾಂಗೋವರ್ನಿಂದ ಕಾಪಾಡುತ್ತೆ ಈ ಒಂದು ರಾಮಬಾಣ
ಅಮೆರಿಕಾದ ಸಂಗೀತ ನಿರ್ದೇಶಕ ನೀಡಿದ ಟಿಪ್ಸ್ನಲ್ಲಿ ನಿಜಕ್ಕೂ ಹುರುಳಿದ್ಯಾ?
ವೀಕೆಂಡ್ ಬಂದ್ರೆ ಸಾಕು, ಗೆಳೆಯರ ಬರ್ತ್ಡೇ ಬಂದ್ರೆ ಸಾಕು, ಲವ್ ಸಕ್ಸಸ್ ಆಗಲಿ, ಲವ್ ಫೆಲ್ಯೂವರ್ ಆಗಲಿ ಸರ್ವರೋಗಕ್ಕೂ, ಸರ್ವ ಸಂಭ್ರಮಕ್ಕೂ ಯುವ ಪೀಳಿಗೆ ಮದ್ಯದ ಮೊರೆ ಹೋಗ್ತಾರೆ. ಇತ್ತೀಚಿನ ದಿನಗಳಲ್ಲಿ ಲೇಟ್ ನೈಟ್ ಪಾರ್ಟಿಗಳು, ಬರ್ತ್ಡೇ ಪಾರ್ಟಿಗಳು ಹೊಸ ರಂಗು ಪಡೆಯುತ್ತಿವೆ. ಏನೇ ನಡೆದರು, ಯಾರೇ ಬಂದ್ರು ಬಾರದಿದ್ರು. ಎಣ್ಣೆಯಂತೂ ಕಡ್ಡಾಯವಾಗಿ ಇಂಥಹ ಪಾರ್ಟಿಗಳಲ್ಲಿ ಹಾಜರಿರುತ್ತೆ. ಗೆಳೆಯರು ಆಪ್ತರು ಸೇರಿದ್ರೆ ಕೇಳಬೇಕೇ, ಒಂದೆರೆಡು ಪೆಗ್ ಹೆಚ್ಚಾಗಿಯೇ ಗಂಟಲು ಬೇಡುತ್ತೆ. ಹೀಗಾಗಿ ನಿತ್ಯಕ್ಕಿಂತ ಜಾಸ್ತಿಯೇ ಮಧುವನ್ನು ಹೀರಿ ಅಮಲೇರಿ ಬೆಳಗ್ಗೆ ಹ್ಯಾಂಗೋವರ್ ಎಂಬುದು ಇಡೀ ದಿನ ಕಾಡುತ್ತಲೇ ಇರುತ್ತೆ. ಹ್ಯಾಂಗೋವರ್ ಕಡಿಮೆಗೊಳಿಸಲು ಅನೇಕ ಮಾತ್ರೆಗಳನ್ನು ಸಜೆಸ್ಟ್ ಮಾಡಲಾಗುತ್ತದೆ. ಆದ್ರೆ, ಅವು ಯಾವುವು ಅಷ್ಟೊಂದು ಪರಿಣಾಮಕಾರಿಯಲ್ಲ. ಅಂದುಕೊಂಡಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲ್ಲ. ಹ್ಯಾಂಗೋವರ್ ಆದಮೇಲೆ ಪರದಾಡೊದ್ಕಿಂತ. ಹ್ಯಾಂಗವೋರ್ ಆಗದಂತೆಯೇ ತಡೆಯುವ ಒಂದು ಔಷಧ ನಮ್ಮ ಅಂಗೈಯಲ್ಲಿಯೇ ಇದೆ.
ಇಂತಹದ್ದೊಂದು ಮನೆ ಮದ್ದಿನ ಬಗ್ಗೆ ಹೇಳಿದ್ದು ಅಮೆರಿಕಾದ ಖ್ಯಾತ ಸಂಗೀತ ನಿರ್ದೇಶಕ ಬೆನ್ನಿ ಬ್ಲ್ಯಾಂಕೋ. ಇತ್ತೀಚೆಗೆ ನಡೆದ ಒಂದು ಅವರ ಸಂದರ್ಶನದಲ್ಲಿ ಕುಡಿತದ ವಿಚಾರ ಪ್ರಸ್ತಾಪವಾದಾಗ ಹ್ಯಾಂಗೋವರ್ಗೆ ಒಂದು ರಾಮಬಾಣ ಔಷಧಿಯನ್ನು ಹೇಳಿದ್ದಾರೆ ಬೆನ್ನಿ ಬ್ಲ್ಯಾಂಕೋ. ಕುಡಿದಾದ ಮೇಲೆ ನರಳಾಡೋದಕ್ಕಿಂತ ಕುಡಿಯುವ ಮೊದಲೇ ಈ ಔಷಧಿಯನ್ನು ಸೇವಿಸಿದ್ರೆ ನಿಮಗೆ ಹ್ಯಾಂಗೋವರ್ ಅನ್ನೋದೆ ಆಗಲ್ಲ ಅಂತ ಹೇಳಿದ್ದಾರೆ
ಆಲೀವ್ ಆಯಿಲ್, ಮದ್ಯಪಾನ ಮಾಡುವ ಸ್ಪಲ್ಪ ಮೊದಲು ನೀವು ಆಲಿವ್ ಆಯಿಲನ್ನು ಸೇವನೆ ಮಾಡಿದ್ರೆ ಯಾವುದೇ ರೀತಿಯ ಹ್ಯಾಂಗೋವರ್ನಂತ ಸಮಸ್ಯೆ ಬೆಳಗ್ಗೆ ಕಾಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಬಿನ್ನಿಯ ಈ ಒಂದು ಹೇಳಿಕೆ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮದ್ಯಪಾನಕ್ಕೂ ಮುನ್ನ ಆಲೀವ್ ಆಯಿಲ್ ಕುಡಿದಲ್ಲಿ ಅದು ಹೊಟ್ಟೆಯ ಭಾಗದಲ್ಲಿ ತೆಳುವಾಗಿ ಅಂಟಿಕೊಳ್ಳುತ್ತೆ ಇದರಿಂದ ಜಠರ ಮದ್ಯವನ್ನು ಹೀರಿಕೊಳ್ಳುವ ವೇಗದಲ್ಲಿ ತಡೆಯುಂಟಾಗುತ್ತದೆ. ಇದಿರಿಂದಾಗಿ ಬೆಳಗ್ಗೆ ಯಾವುದೇ ರೀತಿಯ ಹ್ಯಾಂಗೋವರ್ನಂತ ಸಮಸ್ಯೆಗಳು ನಮ್ಮನ್ನು ಬಾಧಿಸುವುದಿಲ್ಲ ಎಂದು ಬಿನ್ನಿ ಹೇಳಿದ್ದಾರೆ.
ಬಿನ್ನಿ ಶೋ ಒಂದರಲ್ಲಿ ನೀಡಿದ ಈ ಹೇಳಿಕೆ ಈಗ ದೊಡ್ಡ ಸದ್ದು ಮಾಡುತ್ತಿದೆ. ಅದರ ಬಗ್ಗೆ ಸಾಮಾನ್ಯ ಜನರು ಇಂಟರ್ನೆಟ್ನಲ್ಲಿ ಸರ್ಚಿಂಗ್ ನಡೆಸಿದ್ದಾರೆ. ಆದ್ರೆ ಬಿನ್ನಿ ಹೇಳಿಕೆಯುವ ವೈಜ್ಞಾನಿಕವಾಗಿ ಎಷ್ಟು ಸತ್ಯ ಅನ್ನೋದು ಜನರಲ್ಲಿ ಚರ್ಚೆಯಾಗಿದೆ. ಫ್ಯಾಟ್ ಕಂಟೆಂಟ್ ಇರುವ ಯಾವುದೇ ತಿನ್ನುವ ಕುಡಿಯುವ ವಸ್ತುವನ್ನು ಕುಡಿತಕ್ಕೂ ಮೊದಲು ಸೇವಿಸಿದರೆ ಅದು ಹೊಟ್ಟೆಯಲ್ಲಿ ಕೆಲವು ಕ್ಷಣಗಳ ಕಾಲ ತೆಳುವಾದ ಒಂದು ಪದರವನ್ನು ಕಟ್ಟಿಕೊಳ್ಳುವುದು ಹಾಗೂ ಅದರಿಂದ ಆಲ್ಕೋಹಾಲ್ ಹೀರಿಕೆಯ ವೇಗ ಕಡಿಮೆಯಾಗುತ್ತೆ ಅನ್ನೋದು ನಿಜವೇ ಆದರೂ ಕೂಡ ಇದನ್ನು ಸಂಪೂರ್ಣವಾಗಿ ಸಮರ್ಥಿಸಲು ಆಗುವುದಿಲ್ಲ ಅನ್ನುತ್ತಾರೆ ವೈದ್ಯರು. ಆಲೀವ್ ಆಯಿಲ್ಗಿಂತಲೂ ಅನೇಕ ಸರಳ ಉಪಾಯಗಳಿಂದ ನಾವು ಹ್ಯಾಂಗೋವರ್, ಡಿಹೈಡ್ರೇಷನ್ (ನಿರ್ಜಲೀಕರಣ)ದಂತ ಸಮಸ್ಯೆಗಳಿಂದ ದೂರ ಉಳಿಯಬಹುದು.
ಇದನ್ನೂ ಓದಿ: ಕಡಿಮೆ ನಿದ್ದೆ ಮಾಡಿದ್ರೂ ಕಾಡಲಿದೆ ಮಾರಕ ಕ್ಯಾನ್ಸರ್.. ಬೆಚ್ಚಿ ಬೀಳಿಸೋ ವರದಿ ಬಹಿರಂಗ; ಏನದು?
ಚೆನ್ನಾಗಿ ನೀರು ಕುಡಿಯಬೇಕು:
ಮದ್ಯಪಾನ ಮಿತಿಗಿಂತ ಹೆಚ್ಚಾದಾಗ ಪ್ರಮುಖವಾಗಿ ಕಾಡುವ ಸಮಸ್ಯೆ ಅಂದ್ರೆ ಅದು ಡಿ-ಹೈಡ್ರೇಷನ್ ಅಂದ್ರೆ ನಿರ್ಜಲೀಕರಣ. ಹೀಗಾಗಿ ಕುಡಿಯಲು ಶುರು ಮಾಡೋದಕ್ಕೆ ಒಂದೆರಡು ಗಂಟೆ ಮೊದಲು ಚೆನ್ನಾಗಿ ನೀರು ಕುಡಿಯಬೇಕು. ಬಳಿಕ ಮದ್ಯಪಾನವನ್ನು ಆರಂಭಿಸಬೇಕು ಇದರಿಂದಲೂ ಕೂಡ ಹ್ಯಾಂಗವೋರ್ನಂತಹ ಡಿ ಹೈಡ್ರೇಷನ್ನಂತಹ ಸಮಸ್ಯೆಗಳನ್ನು ತಪ್ಪಿಸಬಹುದು.
ಪೌಷ್ಠಿಕ ಆಹಾರ ಸೇವನೆ:
ಕುಡಿಯುವುದಕ್ಕೂ ಮೊದಲು ನ್ಯೂಟ್ರಿಷನ್ ಹೊಂದಿರುವ ತಿಂಡಿಗಳನ್ನು ತಿಂದು ಬಳಿಕ ಮದ್ಯಪಾನ ಮಾಡಲು ಆರಂಭಿಸಿದ್ರೂ ಕೂಡ ಹ್ಯಾಂಗವೋರ್ನಂತಹ ಸಮಸ್ಯೆಗಳನ್ನು ತಡೆಯಬಹುದು. ಇದು ಆಲೀವ್ ಆಯಿಲ್ಗಿಂತಲೂ ಹೆಚ್ಚು ಹೊಟ್ಟೆ ಆಲ್ಕೋಹಾಲ್ ಹೀರುವಿಕೆಯನ್ನು ತಡೆಯುತ್ತದೆ.
ಇದನ್ನೂ ಓದಿ:ಪುರುಷರೇ ಹುಷಾರ್.. ಹೆಚ್ಚಾಗುತ್ತಿದೆ ಈ ಗಂಭೀರ ಸಮಸ್ಯೆ; ವೈದ್ಯರಿಂದ ಆಘಾತಕಾರಿ ಅಂಶ ಬಯಲು; ಏನದು?
ಮಿತಿಯಿರಲಿ: ಎಲ್ಲದಕ್ಕಿಂತಲೂ ಅತ್ಯಂತ ಸುಲಭವಾದ ಮಾರ್ಗ ಅಂದ್ರೆ ಅದು ಮಿತಿಯಲ್ಲಿ ಇರುವುದು. ನಿಮ್ಮ ಕುಡಿತದ ಮಿತಿ ಎಷ್ಟು ಇದೆಯೋ ಅಷ್ಟು ಮಾತ್ರ ಮದ್ಯ ಸೇವಿಸಿದ್ರೆ ಯಾವುದೇ ಸಮಸ್ಯೆ ಇರೋದಿಲ್ಲ. ಹ್ಯಾಂಗೋವರ್ ಸಮಸ್ಯೆ ಸೃಷ್ಟಿಯಾಗುವುದೇ ದೇಹ ತಡೆಯದಷ್ಟು ಮದ್ಯವನ್ನು ಸೇವನೆ ಮಾಡಿ ಸರಿಯಾಗಿ ನಿದ್ದೆ ಮಾಡದೆ ಇದ್ದಾಗ. ಹೀಗಾಗಿ ಕುಡಿಯುವ ಮೊದಲೇ ಇದಕ್ಕಿಂತ ಹೆಚ್ಚು ನಾನು ತೆಗೆದುಕೊಳ್ಳುವುದಿಲ್ಲ ಎಂದು ನಿರ್ಧರಿಸಿಯೇ ಕುಳಿತುಕೊಳ್ಳಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ