/newsfirstlive-kannada/media/post_attachments/wp-content/uploads/2024/06/PRATHAM.jpg)
ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ವಿಚ್ಛೇದನ ವಿಚಾರಕ್ಕೆ ಮಂಡ್ಯದಲ್ಲಿ ಒಳ್ಳೆ ಹುಡುಗ ಪ್ರಥಮ್ ಪ್ರತಿಕ್ರಿಯಿಸಿ.. ಅವರಿಬ್ಬರು ಬೇರ್ಪಟ್ಟ ಮಾತ್ರಕ್ಕೆ ಅವರಿಬ್ಬರೂ ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಆಗ್ತಾರಾ? ಎಂದು ಪ್ರಶ್ನೆ ಮಾಡಿದ್ದಾರೆ.
ಸುಂದರವಾಗಿರುವ ಜೀವನ ಮುಖ್ಯವಾಗಿದೆ. ಬೇರ್ಪಟ್ಟ ಮಾತ್ರಕ್ಕೆ ಅವರು ಜೀವನದ ಉತ್ತಂಗಕ್ಕೆ ಹೋಗೋದಿಲ್ಲ. ಒಂದು ಶೋ ಮುಖ್ಯಾನಾ? ಜೀವನ ಮುಖ್ಯಾನಾ? ನನ್ನ ಪ್ರಕಾರ ಜೀವನವೇ ಮುಖ್ಯ, ಚೆನ್ನಾಗಿ ಬದುಕಬೇಕು. ಬದುಕಿನ ಬಗ್ಗೆ ಯೋಚಿಸದೆ ಇಬ್ಬರು ಮದುವೆ ಆದ್ರಾ? ಎಲ್ಲವನ್ನು ಯೋಚಿಸಿಯೇ ಅವರು ಮದುವೆ ಆಗಿದ್ದಾರೆ. ಸುಂದರವಾದ ಬದುಕು, ಇಬ್ಬರು ಚೆನ್ನಾಗಿ ಬದುಕುಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಅಮ್ಮ ಸಾಯುವಾಗ ಹೇಳಿದ ಮಾತು ಜೀವನ ಬದಲಿಸಿತು -US ಗೆಲುವಿನ ಹೀರೋಗಳ ರೋಚಕ ಜರ್ನಿ
ಧ್ರುವ ಸರ್ಜಾ ಅವರ ಮಾತನ್ನು ಚಂದನ್ ಕೇಳ್ತಾರೆ. ನಿವೇದಿತಾ-ಚಂದನ್ ವಿಚ್ಛೇದನ ವಿಚಾರದಲ್ಲಿ ಧ್ರುವ ಸರ್ಜಾ ಮಧ್ಯಸ್ಥಿಕೆ ವಹಿಸಲಿ. ಪ್ರೀತಿ ಇದ್ದರೆ ಚಂದನ್ ಧ್ರುವ ಮಾತನ್ನು ಕೇಳ್ತಾರೆ. ಮಿಲನಾ ಸಿನಿಮಾದಲ್ಲಿ ವಿಚ್ಚೇದನ ಬಳಿಕವೂ ಒಂದಾಗಲ್ವಾ? ಇಚ್ಛಾಶಕ್ತಿ ಬೇರಾವುದೂ ದೊಡ್ಡದಲ್ಲ. ಮಿಲನಾ ಫಿಲ್ಮ್ ಕ್ಲೈಮ್ಯಾಕ್ಸ್ ಕಟ್ ಮಾಡಿ ಚಂದನ್‌ಗೆ ಕಳಿಸುತ್ತೇನೆ. ಅದನ್ನ ನೋಡಿಯಾದರೂ ಚಂದನ್ ಮನಸ್ಸು ಬದಲಾಗಲಿ. ನನ್ನ ಉದ್ದೇಶ ಸಂಸಾರ ಚೆನ್ನಾಗಿ ಮಾಡಲಿ ಎಂದಿದ್ದಾರೆ.
ಇದನ್ನೂ ಓದಿ:Accident: ಬೆಳ್ಳಂಬೆಳಗ್ಗೆ ಓಮ್ನಿ-ಕಾರು ಮಧ್ಯೆ ಭೀಕರ ಅಪಘಾತ.. ಓರ್ವ ಸಾವು
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us