newsfirstkannada.com

‘ಒಬ್ಬ ಭ್ರಷ್ಟ, ಒಬ್ಬ ದುರಹಂಕಾರಿಯಿಂದ ಎಲ್ಲವೂ ಹಾಳು’- ಬೆಂಕಿ, ಬಿರುಗಾಳಿಯಾದ ವೆಂಕಟೇಶ್ ಪ್ರಸಾದ್

Share :

Published September 10, 2023 at 2:09pm

Update September 10, 2023 at 2:10pm

    ಟೀಮ್​ ಇಂಡಿಯಾದ ಮಾಜಿ ಬೌಲರ್ ಯಾವ ಸಂಸ್ಥೆ ಬಗ್ಗೆ ಹೇಳಿದ್ರು?

    ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ ಆ ಪೋಸ್ಟ್

    ಭ್ರಷ್ಟಾಚಾರ ಯಾವ ಕ್ಷೇತ್ರವನ್ನು ಬಿಟ್ಟಿಲ್ಲ, ಕ್ರಿಕೆಟ್​ ಸಂಸ್ಥೆಯಲ್ಲೂ ಇದೆಯಾ?

ಒಂದು ಸಂಸ್ಥೆಯ ಖ್ಯಾತಿಯನ್ನು ಸಂಪೂರ್ಣವಾಗಿ ಹಾಳು ಮಾಡಲು ಒಬ್ಬ ಭ್ರಷ್ಟ ವ್ಯಕ್ತಿ ಯಾವ ರೀತಿ ಪರಿಣಾಮ ಬೀರುತ್ತಾನೆ. ಹೀಗೆಂದು ಟೀಮ್ ಇಂಡಿಯಾದ ಮಾಜಿ ಬೌಲರ್ ವೆಂಕಟೇಶ್ ಪ್ರಸಾದ್ ಅವರು ಸೋಷಿಯಲ್ ಮೀಡಿಯಾದಲ್ಲಿ ಮಾಡಿರುವ ಒಂದು ಪೋಸ್ಟ್ ಸಂಚಲನ ಸೃಷ್ಟಿಸಿದೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ವೆಂಕಟೇಶ್ ಪ್ರಸಾದ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Asia Cup 2023: ಸೂಪರ್-4 ಪಂದ್ಯಕ್ಕೆ ಮಳೆ ಬಂದ್ರೂ ಚಿಂತೆ ಬಿಡಿ.. ಭಾರತ-ಪಾಕ್ ಕ್ರಿಕೆಟ್​ ಫ್ಯಾನ್ಸ್​ ಓದಲೇಬೇಕಾದ ಸ್ಟೋರಿ ಇದು

ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಸದಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುತ್ತಾರೆ. ಇತ್ತೀಚೆಗೆ ಏಷ್ಯಾ ಕಪ್‌ನ ಸೂಪರ್ 4ನ ಭಾರತ, ಪಾಕ್‌ ಪಂದ್ಯಕ್ಕೆ ರಿಸರ್ವ್‌ ಡೇ ಘೋಷಿಸಿದ್ದಕ್ಕೆ ಏಷ್ಯನ್ ಕ್ರಿಕೆಟ್ ಮಂಡಳಿಯನ್ನು ತೀವ್ರ ತರಾಟೆ ತೆಗೆದುಕೊಂಡಿದ್ದರು. ತಮ್ಮ ಅಧಿಕೃತ ಎಕ್ಸ್​ನಲ್ಲಿ ಒಂದು ಪೋಸ್ಟ್ ಮಾಡುವ ಮೂಲಕ ಸೋಷಿಯಲ್​ ಮೀಡಿಯಾಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದ್ದರು. ಇದೀಗ ಒಂದು ಸಂಸ್ಥೆಯ ಖ್ಯಾತಿಯನ್ನು ಸಂಪೂರ್ಣವಾಗಿ ಹಾಳು ಮಾಡಲು ಒಬ್ಬ ಭ್ರಷ್ಟ ವ್ಯಕ್ತಿ ಯಾವ ರೀತಿ ಪರಿಣಾಮ ಬೀರುತ್ತಾನೆ ಎಂದಿದ್ದಾರೆ.  ವೆಂಕಟೇಶ್ ಪ್ರಸಾದ್ ಅವರು ಯಾರನ್ನು ಗುರಿಯಾಗಿಸಿಕೊಂಡು ಈ ಪೋಸ್ಟ್ ಮಾಡಿದ್ದಾರೆ ಅನ್ನೋದು ಕುತೂಹಲಕಾರಿಯಾಗಿದೆ.

ಭ್ರಷ್ಟಚಾರದಿಂದ ಮುಕ್ತವಾಗಿ ಕಠಿಣ ಪರಿಶ್ರಮದಿಂದ ಖ್ಯಾತಿಯಾಗಿದ್ದ ಇಡೀ ಸಂಸ್ಥೆಯನ್ನು ಹಾಳು ಮಾಡಲು ಒಬ್ಬ ಭ್ರಷ್ಟ, ದುರಹಂಕಾರಿ ವ್ಯಕ್ತಿ ಯಾವ ರೀತಿ ಪರಿಣಾಮ ಬೀರುತ್ತಾನೆ. ರಾಜಕೀಯ, ಕ್ರೀಡೆ, ಪತ್ರಿಕೋದ್ಯಮ ಹಾಗೂ ಕಾರ್ಪೊರೇಟ್ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಈ ಭ್ರಷ್ಟಚಾರ ಇದೆ ಎಂದು ವೆಂಕಟೇಶ್ ಪ್ರಸಾದ್ ತಮ್ಮ ಎಕ್ಸ್​ನಲ್ಲಿ ಬರೆದು ಪೋಸ್ಟ್ ಮಾಡಿದ್ದರು. ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿದ್ದಂತೆ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ ಎಂದು ಹೇಳಲಾಗುತ್ತ್ತು. ಸದ್ಯ ವೆಂಕಟೇಶ್ ಪ್ರಸಾದ್ ಅವರು ಸ್ವಲ್ಪ ಬದಲಾಯಿಸಿ ರೀ ಪೋಸ್ಟ್ ಮಾಡಿದ್ದು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ಜೋರಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

‘ಒಬ್ಬ ಭ್ರಷ್ಟ, ಒಬ್ಬ ದುರಹಂಕಾರಿಯಿಂದ ಎಲ್ಲವೂ ಹಾಳು’- ಬೆಂಕಿ, ಬಿರುಗಾಳಿಯಾದ ವೆಂಕಟೇಶ್ ಪ್ರಸಾದ್

https://newsfirstlive.com/wp-content/uploads/2023/09/VENKATESH_PRASAD.jpg

Load More