/newsfirstlive-kannada/media/post_attachments/wp-content/uploads/2023/11/GOLD_SILVER.jpg)
ನವರಾತ್ರಿ ಎಂದ ಮೇಲೆ ಎಲ್ಲರೂ ಚಿನ್ನ ಖರೀದಿ ಮಾಡೋದು ಕಾಮನ್​​. ಇದಕ್ಕೆ ಕಾರಣ ಹಬ್ಬದಲ್ಲಿ ಚಿನ್ನ ಖರೀದಿ ಮಾಡುವುದು ಮಂಗಳಕರ ಎಂಬುದು. ಕೇವಲ ನವರಾತ್ರಿ ಮಾತ್ರವಲ್ಲ ಎಲ್ಲಾ ಹಬ್ಬಕ್ಕೂ ಜನ ಬಂಗಾರದ ಖರೀದಿಗೆ ಮುಗಿ ಬೀಳುತ್ತಾರೆ.
ದೀಪಾವಳಿ ಸೇರಿದಂತೆ ಅನೇಕ ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ಚಿನ್ನದ ಕಡೆ ಮುಖ ಮಾಡುವುದು ವಾಡಿಕೆ. ಅದರಲ್ಲೂ ದಸರಾ ಹಬ್ಬ ಬಂತು ಎಂದರೆ ಚಿನ್ನಾಭರಣ ಖರೀದಿ ಮಾಡುವುದು ಸಂಪ್ರದಾಯ. ಚಿನ್ನವನ್ನು ಸಂಪತ್ತು ಮತ್ತು ಸಮೃದ್ಧಿ ಸಂಕೇತ ಎಂದು ಕೂಡ ಹೇಳಲಾಗುತ್ತದೆ. ಹಾಗಾಗಿ ಯಾರಾದ್ರೂ ಚಿನ್ನ ಖರೀದಿ ಮಾಡಲು ಹೋದಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲದೆ ಹೋದಲ್ಲಿ ನೀವು ಮೋಸ ಹೋಗುವುದು ಗ್ಯಾರಂಟಿ.
ನೆನಪಿಡಬೇಕಾದ ವಿಷಯಗಳೇನು?
ಯಾವುದೇ ಕಾರಣಕ್ಕೂ ಹಾಲ್‌ಮಾರ್ಕ್‌ಗಳಿಲ್ಲದ ಬಂಗಾರದ ಖರೀದಿ ಮಾಡಲೇಬೇಡಿ. ಯಾರೇ ಆಗಲಿ ಚಿನ್ನ ಖರೀದಿ ಮಾಡುವಾಗ ಹಾಲ್‌ಮಾರ್ಕ್ ಚೆಕ್​ ಮಾಡಿಕೊಳ್ಳಲೇ ಬೇಕು. ಹಾಲ್‌ಮಾರ್ಕ್ ಈಗ ದೇಶಾದ್ಯಂತ ಕಡ್ಡಾಯ. ಚಿನ್ನ ಮಾರಾಟ ಮಾಡಲು ವ್ಯಾಪಾರಿಗಳು ಬಿಐಎಸ್ ಮಾನದಂಡಗಳನ್ನು ಫಾಲೋ ಮಾಡಲೇಬೇಕು. ಭಾರತದಲ್ಲಿ 14, 18 ಮತ್ತು 22 ಕ್ಯಾರೆಟ್ ಚಿನ್ನದ ಹಾಲ್‌ಮಾರ್ಕ್ ಆಭರಣಗಳನ್ನು ಮಾತ್ರ ಮಾರಾಟ ಮಾಡಲು ಅನುಮತಿಸಲಾಗಿದೆ. ಹಾಗಾಗಿ ಚಿನ್ನದ ಆಭರಣಗಳ ಮೇಲೆ ಬಿಐಎಸ್​​ನ ತ್ರಿಕೋನ ಹಾಲ್ಮಾರ್ಕ್ ಖಚಿತಪಡಿಸಿಕೊಳ್ಳಬೇಕು.
ಬಿಲ್ ಮರೆಯಬೇಡಿ
ಚಿನ್ನಾಭರಣ ಖರೀದಿಸುವಾಗ ಹಾಲ್‌ಮಾರ್ಕ್ ಎಷ್ಟು ಮುಖ್ಯವೋ ಬಿಲ್​ ತೆಗೆದುಕೊಳ್ಳುವುದು ಕೂಡ ಇಂಪಾರ್ಟೆಂಟ್​. ಬಂಗಾರದ ಖರೀದಿಗೆ ಅಧಿಕೃತ ಬಿಲ್ ಲಭ್ಯವಿದೆ. ಬಿಲ್ ಪ್ರತಿ ಐಟಂನ ವಿವರಗಳನ್ನು ಹೊಂದಿರಬೇಕು. ಲೋಹದ ಒಟ್ಟು ತೂಕ, ಕ್ಯಾರೆಟ್ ಶುದ್ಧತೆ ಮತ್ತು ಹಾಲ್ ಮಾರ್ಕಿಂಗ್ ಶುಲ್ಕಗಳು ಬಿಲ್​ನಲ್ಲಿ ಇರಲಿವೆ. ಬಿಲ್​ ತೆಗೆದುಕೊಂಡರೆ ಮೋಸ ಹೋಗುವುದನ್ನು ತಪ್ಪಿಸಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us