ಇದು ಇಡೀ ವೈದ್ಯಕೀಯ ಲೋಕವೇ ಅಚ್ಚರಿಪಡೋ ಪ್ರಕರಣ
ಬೆಂಗಳೂರಿನ ಆಸ್ಟರ್ ಆರ್ವಿ ಆಸ್ಪತ್ರೆ ಸಿಬ್ಬಂದಿ ಹೊಸ ಸಾಧನೆ!
ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದಾರೆ ಎಂದ್ರೆ ನೀವು ನಂಬಲೇಬೇಕು
ಬೆಂಗಳೂರು: ಇಡೀ ವೈದ್ಯಕೀಯ ಲೋಕವೇ ಅಚ್ಚರಿಪಡೋ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅದು ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಎಂಬುದು ವಿಶೇಷ. ಬೆಂಗಳೂರಿನ ಆಸ್ಟರ್ ಆರ್ವಿ ಆಸ್ಪತ್ರೆ ಸಿಬ್ಬಂದಿ ಹೊಸ ಆವಿಷ್ಕಾರದ ಮೂಲಕ ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದಾರೆ ಎಂದು ನೀವು ನಂಬಲೇಬೇಕು.
ಹೌದು, ಆಸ್ಟರ್ ಆರ್ವಿ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆಯ ಮೂಲಕ ಗರ್ಭಾಶಯದಿಂದ ಬರೋಬ್ಬರಿ 4.005 ಕೆಜಿ ಫೈಬ್ರಾಯ್ಡ್ ಗೆಡ್ಡೆ ತೆಗೆದು ಹಾಕಿ ದಾಖಲೆ ಸೃಷ್ಟಿಸಿದ್ದಾರೆ. ಈ ರೀತಿಯ ದಾಖಲೆಯೊಂದು ಸೃಷ್ಟಿಯಾಗಿರುವುದು ದಕ್ಷಿಣ ಭಾರತದಲ್ಲೇ ಮೊದಲು.
ಆಸ್ಟರ್ ಆರ್ವಿ ಆಸ್ಪತ್ರೆಯ ಲ್ಯಾಪ್ರೋಸ್ಕೋಪಿಕ್ ಸರ್ಜನ್ ಡಾ. ಸುನಿಲ್ ಈಶ್ವರ್ ಮತ್ತವರ ವೈದ್ಯಕೀಯ ತಂಡ 42 ವರ್ಷದ ಮಹಿಳೆ ಒಬ್ಬರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದೆ.
ಏನಿದು ಕೇಸ್..?
42 ವರ್ಷದ ಮಹಿಳೆ ಒಬ್ಬರಿಗೆ ಯಾವುದೇ ಬಾಹ್ಯ ರೋಗಲಕ್ಷಣಗಳು ಇರಲಿಲ್ಲ. ಆದರೆ ಅವರ ದೇಹದೊಂದಿಗೆ ಗಡ್ಡೆ ಬೆಳೆಯುತ್ತಿತ್ತು. ಇದರಿಂದ ಗರ್ಭಾಶಯದ ವ್ಯವಸ್ಥೆಗೆ ತೊಂದರೆ ಆಗಿತ್ತು. ಇವರ ಆರೋಗ್ಯಕ್ಕೂ ಬಹಳ ಅಪಾಯ ಇತ್ತು. ವೈದ್ಯರು ಸ್ಕ್ಯಾನ್ ಮಾಡಿದಾಗ 12 ಸೆಂಟಿ ಮೀಟರ್ ಉದ್ಧದ ನಾರುಗಡ್ಡೆ ಕಾಣಿಸಿಕೊಂಡಿತ್ತು. ಈಗ ಅದರ ಭಾಗದಲ್ಲಿ 3 ಸೆಂಟಿ ಮೀಟರ್ ಕತ್ತರಿಸಿ ಗಡ್ಡೆಯನ್ನು ಹೊರಗೆ ತೆಗೆಯಲಾಗಿದೆ. ಈ ಶಸ್ತ್ರಚಿಕಿತ್ಸೆ 5 ಗಂಟೆಗಳ ಕಾಲ ನಡೆದಿದೆ.
ನ್ಯೂಸ್ಫಸ್ಟ್ಗೆ ಡಾ. ಸುನಿಲ್ ಈಶ್ವರ್ ಹೇಳಿದ್ದೇನು..?
ಇದೊಂದು ಚಾಲೆಂಜಿಂಗ್ ಕೇಸ್ ಆಗಿತ್ತು. ಅದರಲ್ಲೂ ಶಸ್ತ್ರಚಿಕಿತ್ಸೆ ಬಹಳ ಸವಾಲಿನಿಂದ ಕೂಡಿತ್ತು. ಗರ್ಭಾಶಯಕ್ಕೆ ರಕ್ತ ಪೂರೈಸುವ ಹೊಟ್ಟೆ ಭಾಗದಲ್ಲಿ ಸಾಮಾನ್ಯ ರಕ್ತನಾಳಗಳನ್ನು ಪತ್ತೆ ಹಚ್ಚಿದೆವು. ನಂತರ ತುಂಬಾ ಎಚ್ಚರಿಕೆಯಿಂದ ಶಸ್ತ್ರಚಿಕಿತ್ಸೆ ಮಾಡಿದೆವು. ಈ ರೀತಿಯ ನಾರುಗಡ್ಡೆಗಳು ಸಂತಾನೋತ್ಪತ್ತಿ ವಯಸ್ಸಿನ ಶೇ. 20-30 ಮಹಿಳೆಯರಲ್ಲಿ ಕಂಡು ಬರುತ್ತದೆ. ಇದೊಂದು ಅಪರೂಪದ ಪ್ರಕರಣ ಎಂದರು ಸುನಿಲ್ ಈಶ್ವರ್.
ಇನ್ನು, ನಾರುಗಡ್ಡೆ ತೆಗೆದು ಹಾಕಲು 8. ಸೆಂಟಿ ಮೀಟರ್ ಕತ್ತರಿಸಬೇಕು. ಆದರೆ, ಲ್ಯಾಪ್ರೋಸ್ಕೋಪಿಕ್ ವಿಧಾನದಲ್ಲಿ 3 ಸೆಂಟಿ ಮೀಟರ್ ಕತ್ತರಿಸಿದ್ರೆ ಸಾಕು. ಶಸ್ತ್ರಚಿಕಿತ್ಸೆ ಕೇವಲ 2 ದಿನದಲ್ಲಿ ಮಹಿಳೆ ಚೇತರಿಸಿಕೊಂಡು ಮನೆಗೆ ತೆರಳಿದ್ರು ಎಂದರು ಸುನಿಲ್ ಈಶ್ವರ್.
ಇದನ್ನೂ ಓದಿ: ಕೆಜಿಎಫ್ ಚಾಪ್ಟರ್ 3ಗೆ ಸ್ಟಾರ್ ನಟ ಅಜಿತ್ ಎಂಟ್ರಿ.. ಹೀರೋ ಯಾರು? ಯಶ್ ಕಥೆ ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ