newsfirstkannada.com

VIDEO: ಬೋರ್​ವೆಲ್​ಗೆ ಬಿದ್ದ ಬಾಲಕನಿ​ಗಾಗಿ 26 ಗಂಟೆಯಿಂದ ಕಾರ್ಯಾಚರಣೆ.. ಮಳೆಯಿಂದ ಅಡ್ಡಿ

Share :

Published April 13, 2024 at 2:12pm

Update April 13, 2024 at 2:15pm

  70ft ಆಳದ ಬೋರ್​ವೆಲ್​ ಒಳಕ್ಕೆ ಬಿದ್ದ 6 ವರ್ಷದ ಬಾಲಕ

  ನಿರಂತರ ರಕ್ಷಣಾ ಕಾರ್ಯಚರಣೆ.. ಮಳೆಯಿಂದಾಗಿ ತೊಂದರೆ

  ಬೋರ್​ವೆಲ್​ ಒಳಕ್ಕಿರುವ ಬಾಲಕನ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮಯೂರ್​ ಎಂಬ ಆರು ವರ್ಷದ ಬಾಲಕ ಕೊಳವೆ ಬಾವಿಗೆ ಬಿದ್ದಿದ್ದಾನೆ. 70 ಫೀಟ್​ ಆಳದ ಕೊಳವೆ ಬಾವಿಯಲ್ಲಿ ಸಿಲುಕಿಕೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ಆತನ ಉಳಿವಿಗಾಗಿ ರಾಜ್ಯ ವಿಪತ್ತು ತುರ್ತು ನಿರ್ವಹಣಾ ಪಡೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹೋರಾಟ ನಡೆಸುತ್ತಿದೆ. ಆದರೆ ಅಕಾಲಿಕ ಮಳರೆ ಇವರ ಕಾರ್ಯಕ್ಕೆ ತೊಂದರೆ ನೀಡುತ್ತಿದೆ.

ಮಧ್ಯಪ್ರದೇಶದ ರೇವಾದಲ್ಲಿ ನಿನ್ನೆ ಮದ್ಯಾಹ್ನ ಮಯೂರ್​ ಎಂಬ ಬಾಲಕ ಸುಮಾರು 3:30ರ ಸುಮಾರಿಗೆ ಕೊಳವೆ ಬಾವಿಗೆ ಬಿದ್ದಿದ್ದಾನೆ. ಗೋಧಿ ಕಟಾವು ವೇಳೆ ಸ್ನೇಹಿತರೊಂದಿಗೆ ಆಟವಾಡುತ್ತಾ ಹೋಗಿ ಬೋರ್​ವೇಲ್​ಗೆ ಬಿದ್ದಿದ್ದಾನೆ. ಸದ್ಯ ಆತನನ್ನು ಮೇಲೆತ್ತಲು ನಿನ್ನೆಯಿಂದ ಕಾರ್ಯಚರಣೆ ನಡೆಯುತ್ತಿದೆ. 26 ಗಂಟೆಗಳ ನಿರಂತರ ಕಾರ್ಯಾಚರಣೆ ಮುಂದುವರೆದಿದೆ.

ಇದನ್ನೂ ಓದಿ: ಬೋರ್​ವೆಲ್​ಗೆ ಬಿದ್ದ ಬಾಲಕನ ಚಲನವಲನ CCTVಯಲ್ಲಿ ಸೆರೆ.. 70ft ಆಳದ​ ಕೊಳವೆ ಬಾವಿಯಲ್ಲಿ ಜೀವಕ್ಕಾಗಿ ಹೋರಾಟ

ಹೆಚ್ಚುವರಿ ಪೊಲೀಸ್​ ಅಧಿಕಾರಿ ಅನಿಲ್​​ ಸೋಂಕರ್​ ಮಾತನಾಡಿದ್ದು, ಬೋರ್​ವೆಲ್​ ಸುಮಾರು 70 ಅಡಿ ಅಳವಿದೆ. ಬಾಲಕ 40 ಅಡಿಯಲ್ಲಿ ಸಿಲುಕಿದ್ದಾನೆ. ಆತನಿಗೆ ಆಮ್ಲಜನಕ ಒದಗಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ನು ಬಾಲಕನ ಚಲನೆಯನ್ನು ಗಮನಿಸಲು ಸಿಸಿಟಿವಿ ಸಹ ಬೋರ್​ವೆಲ್​ ಒಳಕ್ಕೆ ಇಳಿಸಲಾಗಿದೆ. ಸದ್ಯ ಬಾಲಕನ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಆತನ ಉಳಿವಿಗಾಗಿ ಟ್ವಿಟ್ಟಗರು ಪ್ರಾರ್ಥನೆ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಬೋರ್​ವೆಲ್​ಗೆ ಬಿದ್ದ ಬಾಲಕನಿ​ಗಾಗಿ 26 ಗಂಟೆಯಿಂದ ಕಾರ್ಯಾಚರಣೆ.. ಮಳೆಯಿಂದ ಅಡ್ಡಿ

https://newsfirstlive.com/wp-content/uploads/2024/04/Mayur.jpg

Load More