newsfirstkannada.com

×

‘ರಾಮ ಬೆಂಕಿಯಲ್ಲ, ಶಕ್ತಿ.. ರಾಮಮಂದಿರ ರಾಷ್ಟ್ರ ನಿರ್ಮಾಣಕ್ಕೆ ಮೆಟ್ಟಿಲು’- ಅಯೋಧ್ಯೆಯಲ್ಲಿ ನರೇಂದ್ರ ಮೋದಿ

Share :

Published January 22, 2024 at 3:03pm

Update January 22, 2024 at 3:06pm

    ಶ್ರೀರಾಮ ಪ್ರತಿಷ್ಠೆ ಪ್ರಭಾವ ಸಾವಿರಾರು ವರ್ಷಗಳವರೆಗೆ ಇರುತ್ತದೆ

    ರಾಮನ ಭವ್ಯ ಮಂದಿರ ನಿರ್ಮಾಣವಾಯಿತು, ಮುಂದೇನು ಪ್ರಶ್ನೆ?

    ನಾನು ಇಂದು ಪವಿತ್ರ ಮನಸ್ಸಿನಿಂದ ಅನುಭವಿಸುತ್ತಿದ್ದೇನೆ- ಮೋದಿ

ಅಯೋಧ್ಯೆ: ರಾಮ ಬೆಂಕಿಯಲ್ಲ, ಶಕ್ತಿ. ರಾಮ ವಿವಾದವಲ್ಲ, ರಾಮ ಸಮಾಧಾನ. ರಾಮ ನಮಗೆ ಮಾತ್ರ ಇಲ್ಲ, ರಾಮ ಎಲ್ಲರಿಗೂ ಇದ್ದಾನೆ. ರಾಮ ಅನಂತ ಕಾಲಕ್ಕೆ ಸೇರಿದವರು ಎಂದು ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ ಬಳಿಕ ಪ್ರಧಾನಿ ಮೋದಿ ಹೇಳಿದ್ದಾರೆ.

ಸರ್ವೋಚ್ಛ ಆದರ್ಶದ ಪ್ರಾಣ ಪ್ರತಿಷ್ಠೆಯಾಗಿದೆ. ಆ ಆದರ್ಶ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ. ಇದು ದೇವ ಮಂದಿರ ಮಾತ್ರವಲ್ಲ, ಭಾರತದ ದೃಷ್ಟಿ, ದರ್ಶನದ ಮಂದಿರವಾಗಿದೆ. ಈ ರಾಮನ ರೂಪದ ರಾಷ್ಟ್ರ ಚೇತನದ ಮಂದಿರವಾಗಿದೆ. ರಾಮ ಭಾರತದ ವಿಧಾನ, ರಾಮ ಭಾರತದ ಚೇತನ, ಚಿಂತನೆ ಆಗಿದ್ದಾರೆ. ರಾಮ ನೀತಿ, ನಿತ್ಯ, ರಾಮ ನಿರಂತರ. ರಾಮ ವ್ಯಾಪಕ, ವಿಶ್ವ. ವಿಶ್ವ ಆತ್ಮ. ರಾಮ ಪ್ರತಿಷ್ಠೆಯಾದಾಗ ಅದರ ಪ್ರಭಾವ ಸಾವಿರಾರು ವರ್ಷಗಳವರೆಗೂ ಇರುತ್ತದೆ. 2024ರ ಜನವರಿ 22 ರಿಂದ ಹೊಸ ಯುಗ ಆರಂಭ ವಾಗಿದೆ ಎಂದು ಮೋದಿ ಹೇಳಿದರು.

  • ತ್ರೇತಾ ಯುಗದಲ್ಲಿ ರಾಮ ಬಂದಾಗ, ಸಾವಿರಾರು ವರ್ಷಗಳಿಗೆ ರಾಮ ರಾಜ್ಯ ಸ್ಥಾಪನೆ
  • ರಾಮನ ಭವ್ಯ ಮಂದಿರ ನಿರ್ಮಾಣವಾಯಿತು, ಮುಂದೇನು ಎಂದು ಪ್ರಶ್ನಿಸುತ್ತಿದ್ದಾರೆ
  • ರಾಮ ನಮ್ಮನ್ನು ನೋಡುತ್ತಿದ್ದಾರೆ, ನಾವು ಹೀಗೆ ವಿದಾಯ ಹೇಳಬೇಕಾ ಎಂಬ ಪ್ರಶ್ನೆ?
  • ನಾನು ಇಂದು ಪವಿತ್ರ ಮನಸ್ಸಿನಿಂದ ಅನುಭವಿಸುತ್ತಿದ್ದೇನೆ, ಕಾಲ ಚಕ್ರ ಬದಲಾಗುತ್ತಿದೆ
  • ಜಟಾಯುಗೂ ರಾವಣನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಆವತ್ತು ಗೊತ್ತಿಗಿತ್ತು
  • ರಾಷ್ಟ್ರ ನಿರ್ಮಾಣಕ್ಕಾಗಿ ನಮ್ಮ ಕ್ಷಣ ಕ್ಷಣವನ್ನು ನೀಡೋಣ, ನಾವು ಈಗ ನಿಲ್ಲಬಾರದು
  • ನಿಮ್ಮ ಮುಂದೆ ಸಾವಿರಾರು ವರ್ಷಗಳ ಪ್ರೇರಣೆ ಇದ್ದು ಕಾರ್ಯಗಳ ಕಡೆ ಮಗ್ನರಾಗಿ
  • ಭಾರತ ಈಗಾಗಲೇ 15 ಲಕ್ಷ ಕಿಲೋ ಮೀಟರ್​ ದೂರ ಹೋಗಿ ಸೂರ್ಯನ ಅಧ್ಯಯನ
  • ಭಾರತದ ಹೊಸ ಪ್ರಭಾವವನ್ನು ದೇಶದ ಯುವಜನತೆ ಚೆನ್ನಾಗಿ ಬರೆಯಬೇಕು
  • ಭಾರತ ಸಮೃದ್ದಿಯ ಗುರಿಯತ್ತ ತಲುಪಲಿದ್ದು ಮುಂದಿನ ಸಮಯ ಸಫಲತೆಯ ಸಮಯ
  • ವಿಕಸಿತ ಭಾರತಕ್ಕೆ ಈ ಮಂದಿರ ಸಾಕ್ಷಿಯಾಗಲಿದ್ದು ಅಭಿವೃದ್ಧಿಯತ್ತ ಸಾಗಬೇಕು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ರಾಮ ಬೆಂಕಿಯಲ್ಲ, ಶಕ್ತಿ.. ರಾಮಮಂದಿರ ರಾಷ್ಟ್ರ ನಿರ್ಮಾಣಕ್ಕೆ ಮೆಟ್ಟಿಲು’- ಅಯೋಧ್ಯೆಯಲ್ಲಿ ನರೇಂದ್ರ ಮೋದಿ

https://newsfirstlive.com/wp-content/uploads/2024/01/MODI_AYODHYA_NEW.jpg

Load More