newsfirstkannada.com

×

KRS​​ ಡ್ಯಾಮ್​​ಗೆ ಮುತ್ತಿಗೆ; ವಾಟಾಳ್​ ಸೇರಿ 50ಕ್ಕೂ ಹೆಚ್ಚು ಕನ್ನಡ ಹೋರಾಟಗಾರರು ಅರೆಸ್ಟ್​

Share :

Published October 5, 2023 at 7:45pm

    KRS ಮುತ್ತಿಗೆಗೆ ಯತ್ನ ಮಾಡಿದ ವಾಟಾಳ್ ನಾಗರಾಜ್​ ಬಂಧನ

    ಪೊಲೀಸರ ಮೂಲಕ ಈ ಹೋರಾಟಕ್ಕೆ ಹತ್ತಿಕ್ಕುವ ಕೆಲಸ ಆಗುತ್ತಿದೆ

    ಪೊಲೀಸ್​ ವಾಹನ ಹತ್ತುವ ವೇಳೆ ವಾಟಾಳ್ ಸರ್ಕಾರದ ವಿರುದ್ಧ ಆಕ್ರೋಶ!

ಮಂಡ್ಯ: ತಮಿಳುನಾಡಿಗೆ ಹರಿಯುತ್ತಿರೋ ಕಾವೇರಿ ನೀರಿಗಾಗಿ ಕನ್ನಡಪರ ಸಂಘಟನೆಗಳಿಂದ ತೀವ್ರ ಹೋರಾಟ ಮುಂದುವರೆದಿದೆ. ಹೌದು, ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್ ನೇತೃತ್ವದಲ್ಲಿ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ ಡ್ಯಾಂಗೆ ಮುತ್ತಿಗೆ ಹಾಕಲಾಗಿದೆ.

ಈ ವೇಳೆ ವಾಟಾಳ್ ನಾಗರಾಜ್​​ ಸೇರಿದಂತೆ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದಿದ್ದಾರೆ. ಪೊಲೀಸರ ಮೂಲಕ ಹೋರಾಟ ಹತ್ತಿಕ್ಕುವ ಕೆಲಸ ಆಗುತ್ತಿದೆ. ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲಲ್ಲ. ಕಾವೇರಿ ನಮ್ಮದು, ಹೋರಾಟ ನಿರಂತರವಾಗಿ ಇರುತ್ತದೆ. ಪೊಲೀಸ್ ವಾಹನವನ್ನು ಹತ್ತಿ ವಾಟಾಳ್ ನಾಗರಾಜ್​​ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KRS​​ ಡ್ಯಾಮ್​​ಗೆ ಮುತ್ತಿಗೆ; ವಾಟಾಳ್​ ಸೇರಿ 50ಕ್ಕೂ ಹೆಚ್ಚು ಕನ್ನಡ ಹೋರಾಟಗಾರರು ಅರೆಸ್ಟ್​

https://newsfirstlive.com/wp-content/uploads/2023/10/mandya-5.jpg

Load More