ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಅಟ್ಟಹಾಸ ಮೆರೆದ ಉಗ್ರ ಪಡೆ
ಬಸ್ ಪ್ರಯಾಣಿಕರನ್ನು ಕೆಳಗಿಳಿಸಿ ಗುಂಡಿಟ್ಟು ಹತ್ಯೆಗೈದ ನೀಚರು
ಬಲೂಚಿಸ್ತಾನ ಲಿಬರೇಷನ್ ಸೇನೆಯಿಂದ ನಡೆದ ಈ ದುಷ್ಕೃತ್ಯ
ಇಸ್ಲಾಮಾಬಾದ್: ಪಾಕಿಸ್ತಾನದ ನೆಲದಲ್ಲಿ ಯಾವ ಬೆಳೆ ಬೆಳೆಯುತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ ಭಯೋತ್ಪಾನೆ ಅನ್ನೋ ಬೆಳೆ ಬಹಳ ಹುಲುಸಾಗಿಯೇ ಬೆಳೆದಿದೆ. ಬೆಳೆಯುತ್ತಿದೆ. ಅದೇ ಬೆಳೆ ಈಗ ಅಲ್ಲಿಯ ಜನರ ಮೃತ್ಯುಕೂಪವಾಗಿ ಕಾಡುತ್ತಿದೆ. ಪಾಕ್ನ ಬಲೂಚಿಸ್ತಾನದಲ್ಲಿ ಅಕ್ಷರಶಃ ನರಮೇಧವೊಂದು ನಡೆದು ಹೋಗಿದೆ. ಕೈಯಲ್ಲಿ ಬಂದೂಕು ಹಿಡಿದುಕೊಂಡು ಬಂದ ಪಡೆಯೊಂದು ಪೊಲೀಸ್ ಸ್ಟೇಷನ್, ಬಸ್ ರೇಲ್ವೆ ಟ್ರಾಕ್ಗಳ ಮೇಲೆ ದಾಳಿ ನಡೆಸಿ ಸುಮಾರು 60 ಜನರನ್ನು ಬಲಿ ಪಡೆದಿದೆ. ಈ ಒಂದು ಕ್ರೂರ ದಾಳಿ ಬಲೂಚಿಸ್ತಾನದಲ್ಲಿ ಹಿಂದೆಂದೂ ನಡೆಯದ ಕ್ರೌರ್ಯದ ಪರಿಚಯ ಮಾಡಿಕೊಟ್ಟಿದೆ.
ಇದನ್ನೂ ಓದಿ: 102 ವರ್ಷದ ಅಜ್ಜಿಯ ಸಾಹಸಕ್ಕೆ ಎಲ್ರೂ ಶಾಕ್.. ಗಟ್ಟಿ ಗುಂಡಿಗೆ ಇದ್ದವರು ಈ ವಿಡಿಯೋ ನೋಡಿ!
ಮುಖೇಲ್ ಏರಿಯಾದಲ್ಲಿ ಬಸ್ ಅಡ್ಡಗಟ್ಟಿದ ನೀಚ ಪಡೆ ಸುಮಾರು 23 ಜನರನ್ನು ಅಲ್ಲಿ ತರಿದು ಹಾಕಿದ್ದಾರೆ. ಹೆದ್ದಾರಿಯನ್ನು ಬಂದ್ ಮಾಡಿ ಬರುತ್ತಿದ್ದ ಬಸ್ ತಡೆದು ಅದರಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ ಕೊಂದು ಹಾಕಿದ್ದಾರೆ. ಕೇವಲ ಪ್ರಯಾಣಿಕರನ್ನು ಮಾತ್ರವಲ್ಲ. ಕಲ್ಲಿದ್ದಲು ಹೊತ್ತುಕೊಂಡು ಹೋಗುತ್ತಿದ್ದ ಲಾರಿಯೊಂದರ ಡ್ರೈವರ್ನನ್ನು ಕೂಡ ಹತ್ಯೆ ಮಾಡಿದೆ. ಜೊತೆಗೆ 10 ಟ್ರಕ್ಗಳಿಗೆ ಬೆಂಕಿಯಿಟ್ಟು ಅಟ್ಟಹಾಸ ಮೆರೆದಿದೆ. ಅದು ಅಲ್ಲದೇ ಸಮೀಪದ ಪೊಲೀಸ್ ಠಾಣೆಗೂ ನುಗ್ಗಿದ ಪಡೆ ಅಲ್ಲಿಯೂ ಗುಂಡಿನ ದಾಳಿ ನಡೆಸಿದೆ. ಪೊಲೀಸ್ ಠಾಣೆಯಲ್ಲಿ ನಡೆದ ಗುಂಡಿನ ದಾಳಿಗೆ 10 ಪೊಲೀಸ್ ಸಿಬ್ಬಂದಿ ಅಸುನೀಗಿದ್ದಾರೆ.
ಇದನ್ನೂ ಓದಿ: ಪ್ಯಾಸೆಂಜರ್ ಬಸ್ ಭಯಾನಕ ಆಕ್ಸಿಡೆಂಟ್.. 30 ಪ್ರಯಾಣಿಕರ ಪೈಕಿ 29 ಜನ ಸ್ಥಳದಲ್ಲೇ ಸಾವು
ಇರಾನ್ ಹಾಗೂ ಪಾಕಿಸ್ತಾನದ ನಡುವೆ ಇದ್ದ ರೈಲ್ವೆ ಲೈನ್ನನ್ನು ಬಾಂಬ್ ಇಟ್ಟು ಉಡಾಯಿಸಿದೆ ಉಗ್ರರ ಪಡೆ. ಉಗ್ರ ಅಟ್ಟಹಾಸದಿಂದ ಪ್ರಾಣ ಕಳೆದುಕೊಂಡವರು ಬಹುತೇಕ ಪಾಕ್ನ ಪಂಜಾಬ್ ಪ್ರಾಂತ್ಯದವರು ಎಂದೇ ಹೇಳಲಾಗುತ್ತಿದೆ. ಸದ್ಯ ದಾಳಿಯ ಹೊಣೆಯನ್ನ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ ಹೊತ್ತುಕೊಂಡಿದ್ದು, ತಾವೇ ದಾಳಿ ಮಾಡಿದ್ದಾಗಿ ಇ-ಮೇಲ್ ಮೂಲಕ ಹೇಳಿಕೊಂಡಿದೆ. ಇನ್ನೂ ಘಟನೆಯನ್ನು ಖಂಡಿಸಿರುವ ಬಲೂಚಿಸ್ತಾನದ ಸಿಎಂ ಸರ್ಫರಾಜ್ ಭುಕ್ತಿ, ಇದು ಅತ್ಯಂತ ಹೀನಾಯ ಕೆಲಸ ಜೀವ ಕಳೆದುಕೊಂಡ ಕುಟುಂಬಗಳಿಗೆ ಸಾಂತ್ವನ ಹೇಳಲು ಬಯಸುತ್ತೇನೆ ಎಂದಿದ್ದಾರೆ.
ಕಳೆದ ಏಪ್ರಿಲ್ನಲ್ಲಿಯೂ ಕೂಡ ಇದೇ ಭಾಗದಲ್ಲಿ ಇದೇ ಮಾದರಿಯ ಘಟನೆ ನಡೆದಿತ್ತು ಬಲೂಚಿಸ್ತಾನದ ನೋಶ್ಕಿ ಎಂಬಲ್ಲಿ ಬಸ್ ಅಡ್ಡಗಟ್ಟಿ, ಬಸ್ನಲ್ಲಿರುವ ಪ್ರಯಾಣಿಕರನ್ನು ಇಳಿಸಿ 9 ಜನರನ್ನು ಹತ್ಯೆ ಮಾಡಲಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ