newsfirstkannada.com

×

ಲೆಬನಾನ್ ಪೇಜರ್ ಬ್ಲಾಸ್ಟ್‌ಗೂ ಕೇರಳ ಲಿಂಕ್‌.. ಭಾರತ ಮೂಲದ ಟೆಕ್ಕಿಗೆ ಈಗ ಅಪಾಯ! ಯಾರಿವರು?

Share :

Published September 22, 2024 at 6:14am

    ಲೆಬನಾನ್ ಪೇಜರ್ ಬ್ಲಾಸ್ಟ್ ಹಿಂದಿರುವ ಆ ಎರಡು ಶಕ್ತಿಗಳು ಯಾವುವು?

    ಭಾರತೀಯ ಉದ್ಯಮಿ, ಹಂಗೇರಿಯ ಆ ಮಹಿಳೆ ಇಬ್ಬರ ನಡುವಿನ ನಂಟೇನು?

    ರಿನಸನ್ ಜೋಸ್​, ಕ್ರಿಸ್ಟಿಯಾನಾ ಮೂರು ದಿನಗಳಿಂದ ಕಾಣೆಯಾಗಿದ್ದು ಎಲ್ಲಿ?

ಲೆಬನಾನ್​ನಲ್ಲಿ ಬ್ಲಾಸ್ಟ್​ ಆದ ಪೇಜರ್​ಗಳು ಡಜನ್​ಗಟ್ಟಲೇ ಜೀವವನ್ನು ತೆಗೆದುಕೊಂಡು 3 ಸಾವಿರಕ್ಕೂ ಅಧಿಕ ಜನರಿಗೆ ಗಂಭೀರ ಗಾಯಗಳಾಗುವಂತೆ ಮಾಡಿದವು. ಇದರ ಹಿಂದೆ ಇಸ್ರೇಲ್ ಇತ್ತು ಎಂಬುದು ಈಗ ಜಗಜ್ಜಾಹೀರ. ಅದರ ಹಿಂದೆ ಅನೇಕ ಶಕ್ತಿಗಳು ಕೆಲಸ ಮಾಡಿವೆ.

ಇಸ್ರೇಲ್ ಅಂದರೆನೇ ಹಾಗೆ. ಎದುರಾಳಿ ಎಂದೂ ಯೋಚಿಸದ ಕಲ್ಪನೆಯನ್ನೂ ಮಾಡದ ಮಾರ್ಗದ ಮೂಲಕ ಅವರದೇ ನೆಲಕ್ಕೆ ಹೊಕ್ಕು ಅವರನ್ನೇ ಹೊಡೆದುರುಳಿಸುವ ಛಾತಿಯನ್ನು ಆ ನೆಲದಲ್ಲಿ ಕಾಲಿಟ್ಟ ದಿನದಿಂದಲೇ ರೂಢಿಸಿಕೊಂಡು ಬಂದಿದೆ. ಹಮಾಸ್ ಮುಖ್ಯಸ್ಥನ ಸಾವು, ಹಿಜ್ಬುಲ್ಲಾ ಸಂಘಟನೆಯ ಒಂದೊಂದೇ ಕಮಾಂಡರ್​ಗಳು ಇಸ್ರೇಲ್ ದಾಳಿಗೆ ಬಲಿಯಾಗುತ್ತಿರುವುದು. ಪೇಜರ್ ಬ್ಲಾಸ್ಟ್, ವಾಕಿಟಾಕಿ ಬ್ಲಾಸ್ಟ್ ಇವೆಲ್ಲವೂ ಇಸ್ರೇಲ್ ಯಾರೂ ಎಂದೂ ಕಲ್ಪಿಸದ ಹಾದಿಯಲ್ಲೇ ನುಗ್ಗಿ ಹೊಡೆದು ಬಂದಿರುವ ಸಾಕ್ಷಿಗಳು.

ಇದನ್ನೂ ಓದಿ: 2 ತಿಂಗಳ ಸ್ಕೆಚ್​.. ಪೇಜರ್‌ನಲ್ಲಿ 3 ಗ್ರಾಂ ಸ್ಫೋಟಕ; ಇಸ್ರೇಲ್‌ನ ಮೊಸಾದ್ ಪ್ಲಾನ್ ಕೇಳಿದ್ರೆ ಶಾಕ್ ಆಗ್ತೀರಾ!

ಈಗ ಸದ್ಯ ಪೇಜರ್ ಬ್ಲಾಸ್ಟ್ ಒಂದು ಜಾಗತಿಕ ಸುದ್ದಿಯಾಗಿದೆ. ಲೆಬನನ್​ನಲ್ಲಿ ಮೊಬೈಲ್ ಬಳಕೆ ಮಾಡುವ ಬದಲು ಪೇಜರ್ ಇಟ್ಟುಕೊಂಡು ಇಸ್ರೇಲ್ ವಿರುದ್ಧ ಸಂಚು ಹೂಡಲು ಸಜ್ಜಾಗಿದ್ದರು ಎಂಬ ಮಾಹಿತಿ ತಿಳಿದ ಇಸ್ರೇಲ್ ಪೇಜರ್​ಗಳನ್ನೇ ಬ್ಲಾಸ್ಟ್ ಮಾಡಿ ಬಿಸಾಕಿತ್ತು. ಈಗ ಅದರ ಹಿಂದೆ ಭಾರತೀಯ ಪ್ರತಿಭೆಯೂ ಕೂಡ ಕೆಲಸ ಮಾಡಿದೆ ಎಂದು ತಿಳಿದು ಬಂದಿದೆ.

ಕೇರಳದ ವಯನಾಡಿನ ರಿನಸನ್ ಜೋಸ್ ಪೇಜರ್ ಹಾಗೂ ವಾಕಿಟಾಕಿ ಸ್ಫೋಟದ ಹಿಂದೆ ಇದ್ದ ವ್ಯಕ್ತಿ ಎಂದು ದೃಢವಾಗಿದೆ. ಕೇರಳದ ವಯನಾಡು ಜಿಲ್ಲೆಯ ಒಮದಾಯನಗಾಡಿ ಗ್ರಾಮದ ರಿನಸನ್ ಜೋಸ್ ಈಗ ನಾರ್ವೆಯ ನಾಗರಿಕ. ನೋರ್ಟಾ ಗ್ಲೋಬಲ್ ಎಂಬ ಕಂಪನಿಯ ಮಾಲೀಕನಾಗಿರುವ ರಿನಸನ್ ಜೋಸ್, ನೋರ್ಟಾ ಗ್ಲೋಬಲ್ ಕಂಪನಿಯೇ ಲೆಬನಾನ್ ಹಿಜ್ಬುಲ್ಲಾ ಉಗ್ರರಿಗೆ ಪೇಜರ್ ಪೂರೈಸಿತ್ತು. ಆದರೇ ನೇರವಾಗಿ ನೋರ್ಟಾ ಕಂಪನಿ ಪೂರೈಸಿರಲಿಲ್ಲ ಹಂಗೇರಿ ದೇಶದ ಬಿಎಸಿ ಕನ್ಸಲ್ಟಿಂಗ್ ಕಂಪನಿಯ ಮೂಲಕ ನೋರ್ಟಾ ಗ್ಲೋಬಲ್ ಪೇಜರ್ ಪೂರೈಸಿದೆ.

ಇದನ್ನೂ ಓದಿ: ಲೆಬನಾನ್‌ ದೇಶದಲ್ಲಿ ಪೇಜರ್ ಬ್ಲಾಸ್ಟ್‌ ಬೆನ್ನಲ್ಲೇ ಮತ್ತೆ ನಿಗೂಢ ಸ್ಫೋಟಗಳು; ಡೆಡ್ಲಿ ಪ್ಲಾನ್‌ನ ರಹಸ್ಯ ಇಲ್ಲಿದೆ!

ನೋರ್ಟಾ ಗ್ಲೋಬಲ್ ಬಲ್ಗೇರಿಯಾ ದೇಶದಲ್ಲಿರುವ ಕಂಪನಿ. ಇದರ ಮಾಲೀಕ ರಿನಸನ್ ಜೋಸ್. ಕಳೆದ ಮೂರು ದಿನಗಳಿಂದ ಕೇರಳದಲ್ಲಿರುವ ತನ್ನ ಪೋಷಕರು ಸಂಬಂಧಿಕರ ಸಂಪರ್ಕಕ್ಕೆ ರಿನಸನ್ ಜೋಸ್ ಸಿಕ್ಕಿಲ್ಲವಂತೆ ನಾರ್ವೆಗೆ ಉನ್ನತ ಶಿಕ್ಷಣಕ್ಕೆ ಹೋಗುವುದಾಗಿ ರಿನಸನ್ ಜೋಸ್ ಹೇಳಿಕೊಂಡಿದ್ದಾರೆ. ಆದ್ರೆ ತನ್ನದೇ ಆದ ನೋರ್ಟಾ ಗ್ಲೋಬಲ್ ಕಂಪನಿಯನ್ನು ತೆರೆದಿರುವ ರಿನಸನ್ ಜೋಸ್‌. ಬಿಎಸಿ ಕನ್ಸಲ್ಟಿಂಗ್ ಕಂಪನಿಯ ಮೂಲಕ ತನ್ನ ಪೇಜರ್​​ಗಳನ್ನು ಹಿಜ್ಬುಲ್ಲಾ ಉಗ್ರರಿಗೆ ರವಾನಿಸಿದ್ದಾನೆ. ಆದ್ರೆ ಬಲ್ಗೇರಿಯಾದ ಅಧಿಕಾರಿಗಳು ಮಾತ್ರ ಇವು ಬಲ್ಗೇರಿಯಾದಲ್ಲಿ ತಯಾರಾದ ಪೇಜರ್​ಗಳಲ್ಲ ಎಂದು ವಾದಿಸುತ್ತಿದ್ದಾರೆ.

ಒಂದು ಕಡೆ ಕೇರಳದ ರಿನಸನ್ ಜೋಸ್​ನ ಹೆಸರು ಪೇಜರ್ ಬ್ಲಾಸ್ಟ್ ಜೊತೆ ತಳುಕು ಹಾಕಿಕೊಂಡಿದ್ದರೆ ಮತ್ತೊಂದು ಕಡೆ ಹಂಗೇರಿ ದೇಶದ ಮಹಿಳಾ ಉದ್ಯಮಿಯ ಹೆಸರು ಕೂಡ ಇದರೊಂದಿಗೆ ತಳುಕು ಹಾಕಿಕೊಂಡಿದೆ. ಬಿಎಸಿ ಕಂಪನಿಯ ಮಾಲೀಕಳಾದ ಹಂಗರಿ ಮೂಲದ ಕ್ರಿಸ್ಟಿಯಾನಾ ಬಾರ್ಸೋನಿ ಕೂಡ ಈ ಪ್ಲೇಜರ್ ದಾಳಿಯ ಹಿಂದೆ ಕೈಜೋಡಿಸಿದ್ದು ದೃಢಪಟ್ಟಿದೆ. ಬಲ್ಗೇರಿಯಾದಿಂದ ನೋರ್ಟಾ ಗ್ಲೋಬಲ್ ಕಂಪನಿಯ ಪೇಜರ್​ಗಳು ಕ್ರಸ್ಟಿಯಾನಾ ಬಾರ್ಸೋನಿ ಕಂಪನಿಯಾ ಬಿಎಸಿಗೆ ಬಂದು ಸೇರಿವೆ ಇಲ್ಲಿಂದ ಹಿಜ್ಬುಲ್ಲಾ ಉಗ್ರರಿಗೆ ಪೇಜರ್​ಗಳು ರವಾನೆಯಾಗಿವೆ.

ಇದನ್ನೂ ಓದಿ: ಲೆಬನಾನ್​​ನಲ್ಲಿ ಪೇಜರ್​​ಗಳ ಸರಣಿ​ ಅನಾಹುತ; 9 ಸಾವು 2800 ಮಂದಿಗೆ ಗಾಯ.. ಪೇಜರ್ ಅಂದ್ರೆ ಏನು..?

ಕ್ರಿಸ್ಟಿಯಾನಾ ಬಾರ್ಸೋನಿಯ ಬಿಎಸಿ ಕಂಪನಿ ಪೇಜರ್ ಡಿಸೈನ್ ಮಾಡಲು ತೈವಾನ್ ಪೇಜರ್​ ಉತ್ಪಾದನಾ ಕಂಪನಿಯಿಂದ ಲೈಸೆನ್ಸ್ ಪಡೆದಿತ್ತು, ಹೀಗಾಗಿ ಈ ಕಂಪನಿ ರಿನಸನ್ ಜೋಸ್ ಕಂಪನಿಯಿಂದ ಪೇಜರ್​ಗಳನ್ನು ಪಡೆದು ಅವುಗಳನ್ನು ಹಿಜ್ಬುಲ್ಲಾ ಉಗ್ರರಿಗೆ ಮಾರಿದೆ. ಸದ್ಯ ಒಂದು ಕಡೆ ರಿನಸನ್ ಜೋಸ್​ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಇತ್ತ ಕ್ರಿಸ್ಟಿಯಾನಾ ಬಾರ್ಸೋನಿಯಾ ಕೂಡ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಇವು ಪೇಜರ್ ಬ್ಲಾಸ್ಟ್ ಹಿಂದೆ ಮತ್ತು ಪೇಜರ್​​ನಲ್ಲಿ ಮದ್ದು ತುಂಬುವ ಕೆಲಸದ ಹಿಂದೆ ಈ ಎರಡು ಶಕ್ತಿಗಳ ಕೈ ಸೇರಿವೆ ಎಂಬುದು ದೃಢವಾಗಿದೆ .

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೆಬನಾನ್ ಪೇಜರ್ ಬ್ಲಾಸ್ಟ್‌ಗೂ ಕೇರಳ ಲಿಂಕ್‌.. ಭಾರತ ಮೂಲದ ಟೆಕ್ಕಿಗೆ ಈಗ ಅಪಾಯ! ಯಾರಿವರು?

https://newsfirstlive.com/wp-content/uploads/2024/09/pager-blast.jpg

Load More