Advertisment

ನಿಮ್ಮ ಬಾಯಲ್ಲಿ ಪದೇ ಪದೇ ಹುಣ್ಣು ಕಾಣಿಸಿಕೊಳ್ತಿದ್ಯಾ? ಹಾಗಾದ್ರೆ ಈ ಮನೆ ಮದ್ದು ಟ್ರೈ ಮಾಡಿ!

author-image
Veena Gangani
Updated On
ನಿಮ್ಮ ಬಾಯಲ್ಲಿ ಪದೇ ಪದೇ ಹುಣ್ಣು ಕಾಣಿಸಿಕೊಳ್ತಿದ್ಯಾ? ಹಾಗಾದ್ರೆ ಈ ಮನೆ ಮದ್ದು ಟ್ರೈ ಮಾಡಿ!
Advertisment
  • ಬಾಯಲ್ಲಿ ಹುಣ್ಣಾದಾಗ ಮೊದಲು ಈ ಕೆಲಸ ಮಾಡಿ
  • ಉಷ್ಣಾಂಶ ಹೆಚ್ಚಾದಾಗ ಬಾಯಲ್ಲಿ ಹುಣ್ಣಾಗುತ್ತಾ?
  • ಈ ಸಮಸ್ಯೆ ಕಡಿಮೆ ಆಗದೇ ಇದ್ದಾಗ ಏನ್ ಮಾಡಬೇಕು?

ಸಾಮಾನ್ಯವಾಗಿ ಬಾಯಲ್ಲಿ ಹುಣ್ಣಾದಾಗ ತೀವ್ರವಾಗಿ ನೋವಾಗುತ್ತದೆ. ಊಟ ಮಾಡಲು ಕೂಡ ಸಂಕಟವಾಗುತ್ತದೆ. ಬಾಯಿಗೆ ಏನಾದರೂ ತಂಪು ಬೇಕು ಅಂತ ಅನಿಸುತ್ತಲೇ ಇರುತ್ತದೆ. ಹೀಗೆ ದೇಹದಲ್ಲಿ ಉಷ್ಣಾಂಶ ಹೆಚ್ಚಾದಾಗ ಕೆಲವರಲ್ಲಿ ಬಾಯಲ್ಲಿ ಹುಣ್ಣು ಕಾಣಿಸಿಕೊಳ್ಳುತ್ತದೆ. ಅಥವಾ ಜ್ವರ ಬಂದಂತಹ ಸಂದರ್ಭಗಳಲ್ಲಿಯೂ ಕೂಡಾ ಬಾಯಲ್ಲಿ ಹುಣ್ಣುಗಳು ಆಗುತ್ತವೆ.

Advertisment

ಇದನ್ನೂ ಓದಿ:ನುಗ್ಗೆಕಾಯಿ ಅಲ್ಲ, ನುಗ್ಗೆ ಎಲೆಯ ಪುಡಿಯಲ್ಲಿದೆ ಪವರ್‌.. ದಿನ ಟೀಯಂತೆ ಕುಡಿದರೆ ಏನೆಲ್ಲಾ ಆಗುತ್ತೆ ಗೊತ್ತಾ?

ಅದು ಅಲ್ಲದೆ ಕೆಲವರಿಗೆ ಹೆಚ್ಚು ಖಾರವಿರುವ ಆಹಾರಗಳನ್ನು ಸೇವಿಸಿದಾಗ ಬಾಯಲ್ಲಿ ಹುಣ್ಣಾಗುವ ಸಾಧ್ಯತೆಗಳು ಇವೆ. ಬಾಯಲ್ಲಿ ಹುಣ್ಣು ಕಾಣಿಸಿಕೊಂಡಾಗ ನೋವಿನ ಜೊತೆಗೆ ಆ ಜಾಗವು ತುಂಬಾ ಕೆಂಪಾಗುತ್ತದೆ. ಕೆಲವರಿಗೆ ಬಿಳಿಯಾಗಿ ಕೀವು ತುಂಬಿಕೊಂಡ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಜೊತೆಗೆ ಹುಣ್ಣಾದ ಜಾಗದಲ್ಲಿ ಸ್ವಲ್ಪ ಊತ ಕಾಣಿಸಿಕೊಳ್ಳುತ್ತದೆ. ಇನ್ನು, ಬಾಯಿ ಹುಣ್ಣು ಅಥವಾ ಬಾಯಿಯಲ್ಲಿ ಅಲ್ಸರ್ ಆದಾಗ ಮನೆಯಲ್ಲಿಯೇ ಮನೆಮದ್ದಿನ ಮೂಲಕ ಅದನ್ನು ಗುಣಪಡಿಸಬಹುದಾಗಿದೆ.

publive-image

ಮೊದಲು ಹುಣ್ಣಾಗಿರುವ ಜಾಗಕ್ಕೆ ತೆಂಗಿನೆಣ್ಣೆಯನ್ನು ಹಚ್ಚುವುದರಿಂದ ನೋವು ಕಡಿಮೆಯಾಗುತ್ತದೆ. ಅದರ ಜೊತೆಗೆ ಹುಣ್ಣು ಕೂಡಾ ನಿಧಾನಕ್ಕೆ ವಾಸಿಯಾಗುತ್ತಾ ಬರುತ್ತದೆ. ಉಗುರು ಬೆಚ್ಚಗಿನ ಟೀ ಬ್ಯಾಗ್ ಅನ್ನು ಹುಣ್ಣಾಗಿರುವ ಜಾಗಕ್ಕೆ ಇಡುವುದರಿಂದ ಬಾಯಿ ಹುಣ್ಣು ಕಡಿಮೆಯಾಗುತ್ತದೆ.

Advertisment

ಇನ್ನು ಬಾಯಲ್ಲಿ ಹುಣ್ಣಾದಾಗ ಮೊಸರನ್ನ ತಿನ್ನುವುದು ಒಳ್ಳೆಯದು. ಇದರಿಂದ ನೋವು ಕಡಿಮೆ ಆಗುತ್ತದೆ. ಮೊಸರನ್ನ ತಿನ್ನುವುದರಿಂದ ಹೊಟ್ಟೆನೂ ತಣ್ಣಗಾಗುತ್ತದೆ. ಜೊತೆಗೆ ಹುಣ್ಣು ಕೂಡಾ ಬೇಗನೇ ವಾಸಿಯಾಗುತ್ತದೆ.

ಲವಂಗವನ್ನು ಕೂಡಾ ನೀರಿನಲ್ಲಿ ನೆನೆಸಿ ಆ ನೀರನ್ನು ಮುಕ್ಕಳಿಸಿ ಉಗಿಯುವುದರಿಂದ ಬಾಯಿ ಹುಣ್ಣು ಬೇಗನೇ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಇಲ್ಲವಾದಲ್ಲಿ ಲವಂಗವನ್ನು ಬಾಯಲ್ಲಿಟ್ಟು ಕೊಂಡು ಅದರ ರಸವನ್ನು ಹುಣ್ಣಾಗಿರುವ ಜಾಗಕ್ಕೆ ಬಿಡುವುದ ರಿಂದ ಬಾಯಿಹುಣ್ಣು ಬೇಗ ವಾಸಿಯಾಗುತ್ತದೆ.

ಇದನ್ನೂ ಓದಿ: ನಿಮ್ಮ ಮುಖದ ಮೇಲೆ ಪದೇ ಪದೇ ಮೊಡವೆ ಹುಟ್ಟಿಕೊಳ್ಳಲು ಇದೇ ಮುಖ್ಯ ಕಾರಣ ನೋಡಿ.. ಏನದು?

Advertisment

publive-image

ಮಜ್ಜಿಗೆ, ಎಳನೀರು, ಕಲ್ಲಂಗಡಿ ಜ್ಯೂಸ್ ಅಥವಾ ಇನ್ನಿತರ ಹಣ್ಣುಗಳನ್ನು ತಿನ್ನಿತ್ತಿರಬೇಕು ಮತ್ತು ದೇಹವು ನಿರ್ಜಲೀಕರಣಗೊಳ್ಳದಂತೆ ಕಾಪಾಡಿಕೊಳ್ಳಬೇಕು. ಈ ಮೇಲೆ ಹೇಳಲಾದ ಯಾವುದಾದರೂ ಮನೆ ಮದ್ದುಗಳಲ್ಲಿ ಒಂದು ಅಥವಾ ಎರಡನ್ನು ದಿನದಲ್ಲಿ ಉಪಯೋಗಿಸಿಕೊಂಡು ಪ್ರಯತ್ನಿಸಬಹುದು. ಇಷ್ಟೆಲ್ಲಾ ಮಾಡಿಯೂ ನಿಮ್ಮ ಬಾಯಿ ಹುಣ್ಣಿನ ಸಮಸ್ಯೆ ಕಡಿಮೆ ಆಗದೇ ಇದ್ದಲ್ಲಿ ವೈದ್ಯರ ಬಳಿ ತೋರಿಸುವುದು ಅತ್ಯಗತ್ಯವಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment