newsfirstkannada.com

×

ನುಗ್ಗೆಕಾಯಿ ಅಲ್ಲ, ನುಗ್ಗೆ ಎಲೆಯ ಪುಡಿಯಲ್ಲಿದೆ ಪವರ್‌.. ದಿನ ಟೀಯಂತೆ ಕುಡಿದರೆ ಏನೆಲ್ಲಾ ಆಗುತ್ತೆ ಗೊತ್ತಾ?

Share :

Published September 18, 2024 at 6:29pm

    ಆರೋಗ್ಯ ವೃದ್ಧಿಸುವಲ್ಲಿ ನುಗ್ಗೆ ಎಲೆಗಳಿಗೆ ಮೊದಲ ಸ್ಥಾನ, ಯಾಕೆ?

    ಮಕ್ಕಳಿಗೆ ನುಗ್ಗೆ ಎಲೆಯ ಪುಡಿಯನ್ನು ಟೀಯಂತೆ ಕೊಡಬಹುದು

    ಇಲ್ಲಿವರೆಗೂ ನಮಗೆ ನುಗ್ಗಿಕಾಯಿಗಳ ಬಗ್ಗೆ ಮಾತ್ರ ಗೊತ್ತು ಅಲ್ವಾ!

ನುಗ್ಗೆಕಾಯಿ ಮಹಿಮೆ ಎಲ್ಲರಿಗೂ ಗೊತ್ತಿರುವ ವಿಷ್ಯವೇ. ಅದರಂತೆ ನುಗ್ಗೆ ಗಿಡದ ಎಲೆಗಳಲ್ಲಿ ಅಡಗಿದ ಆರೋಗ್ಯದ ಗುಟ್ಟುಗಳು ಎಷ್ಟೋ ಜನರಿಗೆ ತಿಳಿದಿಲ್ಲ. ಹಿಂದಿನ ಕಾಲದಿಂದಲೂ ನುಗ್ಗಿಕಾಯಿಗಳನ್ನು ಮಾತ್ರ ಅಡುಗೆಗೆ ಬಳಕೆ ಮಾಡಿಕೊಂಡು ಬರಲಾಗುತ್ತಿದೆ. ಆದರೆ ನುಗ್ಗೆ ಗಿಡದ ಎಲೆಗಳಿಂದ ನಮಗೆ ಭಾರೀ ಉಪಯೋಗಗಳಿವೆ. ಅವುಗಳ ಆರೋಗ್ಯದ ಗುಟ್ಟು ಏನೆಂಬುದು ಇಲ್ಲಿ ವಿವರಿಸಲಾಗಿದೆ. ಕೊಂಚ ಗಮನಕೊಡಿ ಜೊತೆಗೆ ನೀವು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಿ.

ನುಗ್ಗೆ ಗಿಡವನ್ನು ಇಂಗ್ಲಿಷ್​​ನಲ್ಲಿ ಸಾಮಾನ್ಯವಾಗಿ ಡ್ರಮ್​ಸ್ಟಿಕ್ ಟ್ರೀ (drumstick tree) ಅಥವಾ ಮಿರಾಕಲ್ ಟ್ರೀ (miracle tree) ಎಂದು ಕರೆಯಲಾಗುತ್ತದೆ. ಈ ಗಿಡವನ್ನು ಸಾಂಪ್ರದಾಯಿಕ ಆಯುರ್ವೇದ ಹಾಗೂ ಇತರೆ ಔಷಧಿಗಳಲ್ಲಿ ದೀರ್ಘಕಾಲದಿಂದ ಉಪಯೋಗಿಸಿಕೊಂಡು ಬರಲಾಗುತ್ತಿದೆ. ನುಗ್ಗೆ ಗಿಡದ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಅಥವಾ ಎಲೆಗಳನ್ನು ಬೇಯಿಸಿ ಸೂಪ್ ರೀತಿಯಲ್ಲಿ ಕುಡಿಯುವುದರಿಂದ ಮೆದುಳಿನ ಆರೋಗ್ಯ ಹೆಚ್ಚಿಸುತ್ತದೆ. ಅಲ್ಲದೇ ಕ್ಯಾನ್ಸರ್ ವಿರೋಧಿಯಾಗಿ ದೇಹದಲ್ಲಿ ಕೆಲಸ ಮಾಡುತ್ತದೆ. ನುಗ್ಗೆ ಗಿಡದ ಎಲೆಗಳ ಕೆಲ ಉಪಯೋಗಳನ್ನು ಇಲ್ಲಿ ನೀಡಲಾಗಿದೆ.

ಇದನ್ನೂ ಓದಿ: ಪೋಷಕರೇ ಹುಷಾರ್.. ನಿಮ್ಮ ಮಕ್ಕಳು ದಿಢೀರ್ ದಪ್ಪ ಆದ್ರೆ ಅಪಾಯ; ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ! 

ನುಗ್ಗೆ ಎಲೆಗಳು ಪ್ರೋಟೀನ್, ಖನಿಜಗಳು ಹಾಗೂ ಎ, ಸಿ, ಇ ಮತ್ತು ಹಲವಾರು ಬಿ ಜೀವಸತ್ವಗಳನ್ನು ಹೊಂದಿವೆ. ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣ ಹಾಗೂ ಸತುವನ್ನು ಕೂಡ ಒಳಗೊಂಡಿದೆ. ಇವುಗಳೆಲ್ಲ ದೇಹದ ರಕ್ಷಣೆಗೆ ಉತ್ತಮ ರೀತಿಯಲ್ಲಿ ಕೆಲಸ ಮಾಡಬಲ್ಲವು.

ಪುಡಿಯನ್ನು ಚಹಾದಂತೆ ಸೇವನೆ ಮಾಡಿ
ನುಗ್ಗೆ ಎಲೆಗಳಲ್ಲಿ ಪೌಷ್ಟಿಕಾಂಶ ದುಪ್ಪಟ್ಟಾಗಿದ್ದರಿಂದ ಅವುಗಳನ್ನು ಪುಡಿ ಮಾಡಿ, ಆಹಾರ, ಪಾನೀಯ ಹಾಗೂ ಪಾಕವಿಧಾನಗಳಲ್ಲಿ ಉಪಯೋಗಿಸಬಹುದು. ನುಗ್ಗೆ ಎಲೆಗಳ ಪುಡಿಯನ್ನು 1 ಸ್ಪೂನ್ ಚಹಾದಂತೆ ಬಿಸಿ ಮಾಡಿಕೊಂಡು ಸೇವಿಸುವುದರಿಂದ ಮಕ್ಕಳ ಮೆದುಳಿನ ಆರೋಗ್ಯವನ್ನು ವೃದ್ಧಿಸುತ್ತದೆ. ಓದು, ಬರಹದಲ್ಲಿ ಮಕ್ಕಳು ಸಾಕಷ್ಟು ಮುಂಚೂಣಿ ಪಡೆಯುತ್ತಾರೆ. ಉತ್ಕರ್ಷಣ ನಿರೋಧಕ (antioxidant) ಹಾಗೂ ನ್ಯೂರೋಪ್ರೊಟೆಕ್ಟಿವ್ (neuroprotective) ಗುಣಲಕ್ಷಣಗಳಿಂದ ಮೆದುಳಿನ ಆರೋಗ್ಯಕ್ಕೆ ಪ್ರಯೋಜನ ಆಗುತ್ತದೆ ಎಂದು ಅಧ್ಯಯನ ಹೇಳುತ್ತದೆ.

ನುಗ್ಗೆ ಎಲೆಗಳಲ್ಲಿನ ರಾಸಾಯನಿಕ ಐಸೊಥಿಯೋಸೈನೇಟ್‌ಗಳು (isothiocyanates) ದೇಹದ ಉರಿಯೂತವನ್ನು ಕಡಿಮೆ ಮಾಡುತ್ತವೆ. ದೇಹದ ಕೊಲೆಸ್ಟ್ರಾಲ್ ಹಾಗೂ ರಕ್ತದೊತ್ತಡವನ್ನು ನಿಯಂತ್ರಣ ಮಾಡುತ್ತದೆ.

ಇದನ್ನೂ ಓದಿ: ನಿಮ್ಮ ದೈನಂದಿನ ಜೀವನ ಹೇಗಿದೆ? ಈ ಹವ್ಯಾಸ ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು!

ಎಲೆಗಳಲ್ಲಿನ ಫೈಬರ್ ಕರುಳಿಗೆ ಉತ್ತಮ
ಕೆಲವು ಸಂಶೋಧನೆಗಳ ಪ್ರಕಾರ ನುಗ್ಗೆ ಎಲೆಯ ಪುಡಿ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಸರಿಯಾಗಿ ಇರುವಂತೆ ಸಹಾಯ ಮಾಡುತ್ತದೆ. ಈ ಎಲೆಗಳಲ್ಲಿನ ಫೈಬರ್ ಕರುಳಿನ ಆರೋಗ್ಯ ವೃದ್ಧಿಸುತ್ತದೆ. ಇದರಿಂದ ಬೇಗ ಆಹಾರ ಜೀರ್ಣಗೊಂಡು ಮಲಬದ್ಧತೆ ನಿವಾರಣೆಗೆ ಸಹಾಯವಾಗುತ್ತದೆ. ಇದರ ಎಲೆಗಳೆಲ್ಲ ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳನ್ನು ಹೊಂದಿದ್ದು ಆರೋಗ್ಯವನ್ನು ನೂರರಷ್ಟು ಕಾಪಾಡುತ್ತವೆ ಎಂದು ಅಧ್ಯಯನಗಳು ಹೇಳುತ್ತಾವೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನುಗ್ಗೆಕಾಯಿ ಅಲ್ಲ, ನುಗ್ಗೆ ಎಲೆಯ ಪುಡಿಯಲ್ಲಿದೆ ಪವರ್‌.. ದಿನ ಟೀಯಂತೆ ಕುಡಿದರೆ ಏನೆಲ್ಲಾ ಆಗುತ್ತೆ ಗೊತ್ತಾ?

https://newsfirstlive.com/wp-content/uploads/2024/09/NUGGE_POWDER.jpg

Load More