/newsfirstlive-kannada/media/post_attachments/wp-content/uploads/2024/06/Naseem-Shah-1.jpg)
ಆಟದಲ್ಲಿ ಸೋಲು-ಗೆಲುವು ಸಾಮಾನ್ಯ. ಆದರೆ ಪ್ರಯತ್ನ ಪಟ್ಟು ಸೋತರೆ ಅದು ಕಣ್ಣೀರ ದಾರಿಯಾಗುತ್ತದೆ. ನಿನ್ನೆ ನಡೆದ ಇಂಡಿಯಾ-ಪಾಕ್​ ಪಂದ್ಯದಲ್ಲಿ ಆಗಿದ್ದು ಅದೆ. ಪಾಕ್​ ಬೌಲರ್​ ನಸೀಮ್​ ಶಾ ಕಣ್ಣೀರು ಹಾಕುತ್ತಾ ಪೆವಿಲಿಯನತ್ತ ಸಾಗಿದ್ದಾರೆ. ಈ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ.
ಭಾರತ ಮತ್ತು ಪಾಕ್​ ನಡುವಿನ ಟಿ20 ವಿಶ್ವಕಪ್​ ಪಂದ್ಯದಲ್ಲಿ ಪಾಕ್​ ಸೋಲೊಪ್ಪಿಕೊಂಡಿದೆ. ಟೀಂ ಇಂಡಿಯಾ ಬಾರಿಸಿದ್ದ ಕಡಿಮೆ ಮೊತ್ತದ ಸವಾಲನ್ನು ಎದುರಿಸಲಾಗದೆ ಮತ್ತೆ ಮುಖಭಂಗವಾಗಿದೆ. ಅದರಲ್ಲೂ ಸತತ ಹೋರಾಟ ನಡೆಸಿದರೂ ಪಾಕ್​ಗೆ ಗೆಲುವಿನ ದಾರಿ ಕಷ್ಟಕರವಾಗಿತ್ತು. ಹೀಗಾಗಿ ಪಾಕ್​ ಟೀಂ ಇಂಡಿಯಾಗೆ ತಲೆಬಾಗಿತು.
ಟಾಸ್​ ಸೋತ ಟೀಂ ಇಂಡಿಯಾ ಬ್ಯಾಟಿಂಗ್​ ಮಾಡಿ ಪಾಕ್​ಗೆ 119 ರನ್​ ಟಾರ್ಗೆಟ್​ ನೀಡಿತ್ತು. ಆದರೆ ಮೊಹ್ಮದ್​ ಸಿರಾಜ್​ ಮಾತ್ರ 44 ಎಸೆತಕ್ಕೆ 31 ರನ್​ ಬಾರಿಸಿದ್ದರು. ಉಳಿದ ಪಾಕ್​ ನಾಯಕ ಬಾಬರ್​ ಅಜಂ, ಉಸ್ಮನ್​ ಖಾನ್, ಫಖರ್​ ಜಮಾನ್​,​ ತಲಾ 13 ರನ್​ ಬಾರಿಸಿ ಔಟ್ ಆಗಿದ್ದಾರೆ. ಇನ್ನು ಇಮಾನ್ ವಾಸಿಮ್​ 15 ರನ್​ ಬಾರಿಸಿ​ ಔಟ್​ ಆದರೆ ಶಾಬದ್​ ಖಾನ್​ 4 ರನ್​, ಇಫ್ತಿಕರ್​ ಅಹ್ಮದ್​​ 5 ರನ್​ ಬಾರಿಸಿ ಔಟ್​ ಆದರು.
Naseem Shah is in tears after losing to India. It’s not his fault because he gave 100%. I must say, shame on Mohsin Naqvi.
#PakvsIndpic.twitter.com/Hp2pjaYCUb— Hina Zainab (@hina98_hina) June 9, 2024
ಇದನ್ನೂ ಓದಿ: ನಕಲಿ CBI ಗ್ಯಾಂಗ್​ನಿಂದ ಮೋಸ ಹೋದ ಅಧಿಕಾರಿ.. ಬರೋಬ್ಬರಿ 85 ಲಕ್ಷ ರೂಪಾಯಿ ಪಂಗನಾಯ!
ಇಷ್ಟಾದ ಬಳಿಕ ವೇಗಿಗಳ ಕೈಯಲ್ಲಿ ಪಾಕ್​ ತಂಡವನ್ನು ಗೆಲುವಿನ ಲಯಕ್ಕೆ ಕೊಂಡೊಯ್ಯುವ ದುರ್ಗತಿ ಬಂದಿತ್ತು. ಆದರೆ ಈ ವೇಳೆ ನಸೀಮ್​ ಶಾ ಮತ್ತು ಶಹ್ರೀನ್​​ ಅಫ್ರೀದಿ ಕ್ರೀಸ್​ನಲ್ಲಿದ್ದರು. ಈ ವೇಳೆ ನಸೀಮ್​ 7 ಎಸೆತಕ್ಕೆ 2 ಬೌಂಡರಿ ಬಾರಿಸುವ ಮೂಲಕ 10 ರನ್​ ಬಾರಿಸಿದ್ದರು. ಅಷ್ಟರಲ್ಲಿ ಕೊನೆಯ ಓವರ್​ನಲ್ಲಿದ್ದ ಪಾಕ್​ ಸೋಲೊಪ್ಪಿಕೊಳ್ಳಬೇಕಾಯ್ತು.
ಇದನ್ನೂ ಓದಿ: ಬಂದ ಬಂದ ಮಳೆರಾಯ.. ರಸ್ತೆ ಕೆರೆಯಾಯ್ತು, ಬೆಳೆ ನಾಶವಾಯ್ತು.. ಮಳೆಯಿಂದಾದ ಅವಾಂತರ ಒಂದಾ, ಎರಡಾ
ಸೋಲಿನ ಬಳಿಕ ನಸೀಮ್​ ಕಣ್ಣೀರು ಹಾಕುತ್ತಾ ಪೆವಿಲಿಯನತ್ತ ಸಾಗಿದ್ದಾರೆ. ಇನ್ನು ನಸೀಮ್​ ಶಾ ಬೌಲಿಂಗ್​ನಲ್ಲೂ ಟೀಂ ಇಂಡಿಯಾಗೆ ಕಾಡಿದ್ದಾರೆ. ನಿನ್ನೆಯ ಪಂದ್ಯದಲ್ಲಿ 3 ವಿಕೆಟ್​​ ಕಬಳಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us