newsfirstkannada.com

ನಕಲಿ CBI ಗ್ಯಾಂಗ್​ನಿಂದ ಮೋಸ ಹೋದ ಅಧಿಕಾರಿ.. ಬರೋಬ್ಬರಿ 85 ಲಕ್ಷ ರೂಪಾಯಿ ಪಂಗನಾಮ!

Share :

Published June 10, 2024 at 7:51am

Update June 10, 2024 at 8:54am

  15 ನಿಮಿಷದಲ್ಲಿ ಹಣ ವಾಪಸ್​ ನೀಡುತ್ತೇವೆಂದು ಪಂಗನಾಮ

  ರಾಣಾ ಗಾರ್ಮೆಂಟ್ಸ್​ಗೂ ವಂಚಕರಿಗೂ ಏನು ಸಂಬಂಧ?

  ಒಂದೆರಡಲ್ಲ ಬರೋಬ್ಬರಿ 105 ಖಾತೆಗಳಿಗೆ ಹಣ ವರ್ಗಾವಣೆ

ನಕಲಿ ಸಿಬಿಐ ಗ್ಯಾಂಗ್​ ಜಾಲವೊಂದು ಬಹುರಾಷ್ಟ್ರೀಯ ಸಂಸ್ಥೆಯೊಂದರ ನಿವೃತ್ತ ಹಿರಿಯ ಅಧಿಕಾರಿಯೊಬ್ಬರಿಗೆ 85 ಲಕ್ಷ ರೂಪಾಯಿ ವಂಚಿಸಿದ ಘಟನೆಯೊಂದು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ. 15 ನಿಮಿಷದಲ್ಲಿ ಹಣವನ್ನು ವಾಪಸ್​ ನೀಡುವುದಾಗಿ ಹೇಳಿ ಪಂಗನಾಮ ಹಾಕಿದೆ.

ವಂಚಕರು ಸಿಬಿಐ, ಕಸ್ಟಮ್ಸ್​, ನಾರ್ಕೋಟಿಕ್ಸ್​ ಹಾಗೂ ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಹಿರಿಯ ಅಧಿಕಾರಿಯನ್ನು ವಂಚಿಸಿದ್ದಾರೆ. ವಂಚಕರ ಮಾತಿಗೆ ಮರುಳಾಗಿ ಬರೋಬ್ಬರಿ 85 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಬಂದ ಬಂದ ಮಳೆರಾಯ.. ರಸ್ತೆ ಕೆರೆಯಾಯ್ತು, ಬೆಳೆ ನಾಶವಾಯ್ತು.. ಮಳೆಯಿಂದಾದ ಅವಾಂತರ ಒಂದಾ, ಎರಡಾ

ಹಿರಿಯ ಅಧಿಕಾರಿ ನೀಡಿದ 85 ಲಕ್ಷ ರೂಪಾಯಿ ಹಣವನ್ನು ವಂಚಕರು ಚೆಕ್​ ಮೂಲಕ ಪಡೆದುಕೊಂಡಿದ್ದರು. ಬಳಿಕ ಅದನ್ನು ದೆಹಲಿಯ ಉತ್ತಮ್​ ನಗರದ ಎಚ್​ಡಿಎಫ್​ಸಿ ಬ್ಯಾಂಕ್​ ಖಾತೆ ನಿರ್ವಹಿಸುತ್ತಿದ್ದ ರಾಣಾ ಗಾರ್ಮೆಂಟ್ಸ್​ಗೆ ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಯಾತ್ರಾರ್ಥಿಗಳ ಬಸ್ಸಿನ ಮೇಲೆ ಭಯೋತ್ಪಾದಕರ ದಾಳಿ.. ಅನ್ಯಾಯವಾಗಿ 10 ಮಂದಿ ಸಾವು

ವಂಚನೆಗೊಳಗಾದ ವ್ಯಕ್ತಿ ಈ ಬಗ್ಗೆ ಕೇಸ್​ ನೀಡಿದ್ದು, ಎಫ್​ಐಆರ್​ ದಾಖಲಾಗಿದೆ. ತನಿಖೆಯ ವೇಳೆ ರಾಣಾ ಗಾರ್ಮೆಂಟ್ಸ್​ ಭಾರತದಾದ್ಯಂತ ವಿವಿಧ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದೆ. ಸುಮಾರು 105 ಖಾತೆಗಳಿಗೆ ಹಣ ಚದುರಿಹೋಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್​ನಲ್ಲೇ ಹೊಸ ಇತಿಹಾಸ; ಪಾಕ್​​ ವಿರುದ್ಧ ಭಾರತ ತಂಡಕ್ಕೆ ರೋಚಕ ಜಯ

“ನನಗೆ 3 ವರ್ಷಗಳ ಸೇವಾ ಅವಧಿ ಉಳಿದಿತ್ತು. ನನ್ನ ಮಗನನ್ನು ಕಾಲೇಜಿಗೆ ಕಳುಹಿಸಲು ನನಗೆ ಸಮಯ ಬೇಕಾಗಿದ್ದರಿಂದ ಸ್ವಯಂ ನಿವೃತ್ತಿ ತೆಗೆದುಕೊಂಡೆ. ನನಗೆ ಮೇ 2 ರಂದು ನಿವೃತ್ತಿ ಪರಿಹಾರ ಸಿಕ್ಕಿತು. ನನ್ನ ಮಗನ ವೀಸಾ ಸಂಬಂಧಿತ ಪ್ರಕ್ರಿಯೆ ಮೇ 17 ರಂದು ನಡೆಯಬೇಕಿತ್ತು. ಆದರೆ ಮೇ 14 ರಂದು, ನನ್ನ ದಾಖಲೆಗಳನ್ನು ಪರಿಶೀಲಿಸಿದ ನಂತರ ಹಣ ಹಿಂದಿರುಗಿಸುವುದಾಗಿ ಹೇಳಿ ₹ 85 ಲಕ್ಷವನ್ನು ಕಳುಹಿಸುವಂತೆ ಗ್ಯಾಂಗ್ ನನ್ನನ್ನು ವಂಚಿಸಿದೆ’’ ಎಂದು ಭಾರತದಲ್ಲಿ ವ್ಯಾಪಕ ಕಾರ್ಯಾಚರಣೆಗಳನ್ನು ಹೊಂದಿರುವ ಜರ್ಮನಿಯ ಪ್ರಧಾನ ಕಚೇರಿಯ ಸಂಸ್ಥೆಯೊಂದರ 57 ವರ್ಷದ ನಿವೃತ್ತ ಅಸೋಸಿಯೇಟ್ ಜನರಲ್ ಮ್ಯಾನೇಜರ್ ಹೇಳಿದ್ದಾರೆ.

ಇದನ್ನೂ ಓದಿ: ನೂತನ ಕೇಂದ್ರ ಸಚಿವರಿಗೆ ಪ್ರಧಾನಿ ಮೋದಿ 100 ದಿನದ ಟಾರ್ಗೆಟ್​.. ಏನದು ಹೊಸ ಅಜೆಂಡಾ?

ಸದ್ಯ ಈ ಪ್ರಕರಣ ಕುರಿತಾಗಿ ತನಿಖೆ ನಡೆಯುತ್ತಿದೆ. ವಿಶಾಖಪಟ್ಟಣಂ ಕ್ರೈಂ ಬ್ರಾಂಚ್​ನಲ್ಲಿ ದೂರು ದಾಖಲಾಗಿದ್ದು, ವಂಚಕರಿಗಾಗಿ ಬಲೆ ಬೀಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಕಲಿ CBI ಗ್ಯಾಂಗ್​ನಿಂದ ಮೋಸ ಹೋದ ಅಧಿಕಾರಿ.. ಬರೋಬ್ಬರಿ 85 ಲಕ್ಷ ರೂಪಾಯಿ ಪಂಗನಾಮ!

https://newsfirstlive.com/wp-content/uploads/2024/06/CBI-fake.jpg

Load More