newsfirstkannada.com

ಟಿ20 ವಿಶ್ವಕಪ್​​.. ಭಾರತ ವಿರುದ್ಧ ರೋಚಕ ಪಂದ್ಯಕ್ಕೆ ಮುನ್ನವೇ ಪಾಕ್​ಗೆ ಬಿಗ್​ ಶಾಕ್​

Share :

Published June 7, 2024 at 10:31pm

    ಐರ್ಲೆಂಡ್​ ವಿರುದ್ಧ ವಿಶ್ವಕಪ್​​ ಟಿ20 ಪಂದ್ಯದಲ್ಲಿ ಗೆದ್ದು ಬೀಗಿರೋ ಟೀಮ್​ ಇಂಡಿಯಾ

    ಇದೇ ಭಾನುವಾರ ಟೀಮ್​ ಇಂಡಿಯಾ, ಪಾಕ್​ ತಂಡದ ಮಧ್ಯೆ ಹೈ-ವೋಲ್ಟೇಜ್ ಪಂದ್ಯ

    ಟೀಮ್​ ಇಂಡಿಯಾದ ವಿರುದ್ಧ ಸೋತರೆ ಪಾಕಿಸ್ತಾನ​ ತಂಡದ ಮುಂದಿನ ಕಥೆಯೇನು?

ಇತ್ತೀಚೆಗೆ ಐರ್ಲೆಂಡ್​ ವಿರುದ್ಧ ಗೆದ್ದು ಬೀಗಿರೋ ಕ್ಯಾಪ್ಟನ್​ ರೋಹಿತ್​ ಶರ್ಮಾ ನಾಯಕತ್ವದ ಟೀಮ್​ ಇಂಡಿಯಾ ಭಾನುವಾರ ನಡೆಯಲಿರೋ 2024ರ ಐಸಿಸಿ ಟಿ20 ವಿಶ್ವಕಪ್‌ ಹೈ-ವೋಲ್ಟೇಜ್ ಪಂದ್ಯದಲ್ಲಿ ಪಾಕ್​ ವಿರುದ್ಧ ಸೆಣಸಲಿದೆ. ಯುಎಸ್​ಎ ವಿರುದ್ಧ ಸೋತಿದೆ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ಭಾರತದ ವಿರುದ್ಧ ಗೆಲ್ಲಲೇಬೇಕಿದೆ. ಒಂದು ವೇಳೆ ಸೋತರೆ ಟಿ20 ವಿಶ್ವಕಪ್​ ಟೂರ್ನಿಯಿಂದಲೇ ಹೊರಬೀಳೋ ಸಾಧ್ಯತೆ ಇದೆ.

ಇನ್ನು, ಭಾರತ ಮತ್ತು ಪಾಕ್​​ ನಡುವಿನ ಹೈವೋಲ್ಟೇಜ್​ ಪಂದ್ಯಕ್ಕೆ ಇಡೀ ಕ್ರೀಡಾ ಜಗತ್ತೇ ಕಾಯುತ್ತಿದೆ. ಜೂನ್​​ 9ನೇ ತಾರೀಕು ನಡೆಯಲಿರೋ ಬಹುನಿರೀಕ್ಷಿತ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕ್​ ತಂಡ ಗೆಲ್ಲಲೇಬೇಕು ಎಂದು ಭಾರೀ ತಯಾರಿ ನಡೆಸಿಕೊಂಡಿದೆ.

ಟೀಮ್​ ಇಂಡಿಯಾ ವಿರುದ್ಧ ಪಾಕ್​ ಸೋತರೆ ಕಥೆಯೇನು?

ಯೆಸ್​​, ಯುಎಸ್‌ಎ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿರೋ ಪಾಕ್​ಗೆ ಸೂಪರ್ 8ರ ಹಂತಕ್ಕೆ ಹೋಗುವ ಚಿಂತೆ ಶುರುವಾಗಿದೆ. ಭಾರತ, ಪಾಕಿಸ್ತಾನ, ಯುಎಸ್‌ಎ, ಕೆನಡಾ ಮತ್ತು ಐರ್ಲೆಂಡ್‌ ಎ ಗುಂಪಿನಲ್ಲಿವೆ. ಯುಎಸ್​ಎ ಈಗಾಗಲೇ 2 ಪಂದ್ಯ ಗೆದ್ದಿದೆ. ಟೀಮ್​ ಇಂಡಿಯಾ ಕೂಡ 1 ಪಂದ್ಯ ಗೆದ್ದಿದೆ. ಪಾಕ್​ ಒಂದು ಪಂದ್ಯ ಸೋತಿದ್ದು, ಟೀಮ್​ ಇಂಡಿಯಾ ವಿರುದ್ಧ ಗೆಲ್ಲಲೇಬೇಕಿದೆ. ಒಂದು ವೇಳೆ ಸೋತರೆ ಎ ಗುಂಪಿನ ಅಗ್ರ ಸ್ಥಾನದಲ್ಲಿರೋ 2 ತಂಡಗಳು ಸೂಪರ್ 8ರ ಹಂತಕ್ಕೆ ಹೋಗಲಿದೆ. ಹಾಗಾಗಿ ಪಾಕ್​​ ಅಗ್ರ ಸ್ಥಾನದಲ್ಲಿ ಸ್ಥಾನ ಪಡೆಯಲು ಮುಂದಿನ ಪಂದ್ಯ ಗೆಲ್ಲಲೇಬೇಕಿದೆ.

ಇದನ್ನೂ ಓದಿ: USA ವಿರುದ್ಧ ಸೋತ ಬೆನ್ನಲ್ಲೇ ಗಳಗಳನೇ ಕಣ್ಣೀರಿಟ್ಟ ಪಾಕ್​ ಆಟಗಾರರು.. ಅಸಲಿಗೆ ಆಗಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಿ20 ವಿಶ್ವಕಪ್​​.. ಭಾರತ ವಿರುದ್ಧ ರೋಚಕ ಪಂದ್ಯಕ್ಕೆ ಮುನ್ನವೇ ಪಾಕ್​ಗೆ ಬಿಗ್​ ಶಾಕ್​

https://newsfirstlive.com/wp-content/uploads/2024/06/IND-vs-PAK.jpg

Load More