newsfirstkannada.com

‘ಕೊಹ್ಲಿಯನ್ನು ಕಂಡ್ರೆ ನಮಗೆ ಭಯ’ ಎಂದ ಪಾಕ್​​ ಕ್ಯಾಪ್ಟನ್​​.. ಅಸಲಿ ಕಾರಣ ಬಿಚ್ಚಿಟ್ಟ ಬಾಬರ್​ ಅಜಂ

Share :

Published June 3, 2024 at 10:19pm

    ಯುಎಸ್​​​ ಮತ್ತು ವೆಸ್ಟ್​​ ಇಂಡೀಸ್​ನಲ್ಲಿ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​

    ಜೂನ್ 9ರಂದು ಸಾಂಪ್ರದಾಯಿಕ ಎದುರಾಳಿ ಪಾಕ್​ ವಿರುದ್ಧ ಭಾರತ ಸೆಣಸಾಟ

    ಭಾರತ, ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್‌ ಪಂದ್ಯದ ಮೇಲೆ ಎಲ್ಲರ ಕಣ್ಣು..!

ಯುಎಸ್​​​ ಮತ್ತು ವೆಸ್ಟ್​​ ಇಂಡೀಸ್​ನಲ್ಲಿ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​ ಈಗಾಗಲೇ ಶುರುವಾಗಿದೆ. ಭಾರತ ತಂಡ ಜೂನ್ 5ರಂದು ಐರ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ 2024ರ ಟಿ20 ವಿಶ್ವಕಪ್ ಅಭಿಯಾನ ಶುರು ಮಾಡಲಿದೆ. ನಂತರ ಜೂನ್ 9ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಇನ್ನು, ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್‌ ಪಂದ್ಯಕ್ಕಾಗಿ ಇಡೀ ಜಗತ್ತೇ ಕಾಯುತ್ತಿದೆ. ಈ ಪಂದ್ಯಕ್ಕೆ ನ್ಯೂಯಾರ್ಕ್‌ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂ ಸಾಕ್ಷಿಯಾಗಲಿದೆ. ಹೇಗಾದ್ರೂ ಮಾಡಿ ಈ ಪಂದ್ಯ ಗೆಲ್ಲಲೇಬೇಕು ಎಂದು ಉಭಯ ತಂಡಗಳು ಭಾರೀ ತಯಾರಿ ನಡೆಸಿಕೊಂಡಿವೆ. ಅದರಲ್ಲೂ ಪಾಕ್​​ ವಿರುದ್ಧ ಗೆಲ್ಲಲು ಟೀಮ್​ ಇಂಡಿಯಾದ ದೊಡ್ಡ ಬ್ರಹ್ಮಾಸ್ತ್ರ ಕೊಹ್ಲಿ ಆಗಿದ್ದಾರೆ.

ಪಂದ್ಯಕ್ಕೂ ಮುನ್ನ ಮಾತಾಡಿದ ಪಾಕ್​ ಕ್ಯಾಪ್ಟನ್​ ಬಾಬರ್​ ಅಜಂ, ಭಾರತ ಮತ್ತು ಪಾಕಿಸ್ತಾನ ಪಂದ್ಯದ ಬಗ್ಗೆ ಮಾತಾಡಲು ಹೆಚ್ಚು ವಿಷಯಗಳಿವೆ. ಜಗತ್ತಿನಲ್ಲಿ ಎಲ್ಲಿಗೆ ಹೋದ್ರೂ ಈ ಬಗ್ಗೆ ಚರ್ಚೆ ಮಾಡುತ್ತಾರೆ. ಎಲ್ಲರೂ ಈ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ ಎಂದರು.

ಸ್ವಾಭಾವಿಕವಾಗಿ ಎರಡು ತಂಡಗಳಿಗೂ ಒತ್ತಡಗಳು ಇರುತ್ತವೆ. ನಾವು ಗಮನದಲ್ಲಿ ಇಡಬೇಕಾದ ವಿಷಯ ಕ್ರಿಕೆಟ್​ ಆಡಬೇಕು ಎಂಬುದು. ಇದು ಯಾವಾಗಲೂ ಒತ್ತಡದ ಪಂದ್ಯ. ಕೊಹ್ಲಿ ಕ್ರೀಸ್​ನಲ್ಲಿ ಇರೋವರೆಗೂ ನಮಗೆ ಭಯ ಇದ್ದೇ ಇರುತ್ತೆ. ಅವರನ್ನು ಹೇಗೆ ಔಟ್​ ಮಾಡಬೇಕು ಎಂದು ಪ್ಲಾನ್​ ಮಾಡಿಕೊಂಡಿದ್ದೇವೆ ಎಂದರು.

ಇದನ್ನೂ ಓದಿ: VIDEO: ಕೊಹ್ಲಿಗಾಗಿ ಕಾದು ಕಾದು ಸೆಲ್ಫಿ ತೆಗೆಸಿಕೊಂಡ ಯುಎಸ್​ ಪೊಲೀಸ್​ ಅಧಿಕಾರಿ.. ಆಗಿದ್ದೇನು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

‘ಕೊಹ್ಲಿಯನ್ನು ಕಂಡ್ರೆ ನಮಗೆ ಭಯ’ ಎಂದ ಪಾಕ್​​ ಕ್ಯಾಪ್ಟನ್​​.. ಅಸಲಿ ಕಾರಣ ಬಿಚ್ಚಿಟ್ಟ ಬಾಬರ್​ ಅಜಂ

https://newsfirstlive.com/wp-content/uploads/2023/06/Babar_Kohli.jpg

Load More