newsfirstkannada.com

VIDEO: ಕೊಹ್ಲಿಗಾಗಿ ಕಾದು ಕಾದು ಸೆಲ್ಫಿ ತೆಗೆಸಿಕೊಂಡ ಯುಎಸ್​ ಪೊಲೀಸ್​ ಅಧಿಕಾರಿ.. ಆಗಿದ್ದೇನು?

Share :

Published June 3, 2024 at 5:36pm

Update June 3, 2024 at 6:28pm

    ಯುಎಸ್​ನಲ್ಲಿ ಬಹುನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್​ ಟೂರ್ನಿ

    ಕ್ರಿಕೆಟ್​​ ಗೊತ್ತಿಲ್ಲದ ಯುಎಸ್​ನಲ್ಲೂ ಸ್ಟಾರ್​ ಬ್ಯಾಟರ್​ ಕೊಹ್ಲಿಯದ್ದೇ ಹವಾ

    ವಿರಾಟ್​ ಕೊಹ್ಲಿ ಮೇಲೆ ಇಡೀ ಕ್ರೀಡಾ ಲೋಕದ ದಿಗ್ಗಜರ ಕಣ್ಣು..!

ಯುಎಸ್​​​ ಮತ್ತು ವೆಸ್ಟ್​​ ಇಂಡೀಸ್​ನಲ್ಲಿ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​ ಈಗಾಗಲೇ ಶುರುವಾಗಿದೆ. ಭಾರತ ತಂಡ ಜೂನ್ 5ರಂದು ಐರ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ 2024ರ ಟಿ20 ವಿಶ್ವಕಪ್ ಅಭಿಯಾನ ಶುರು ಮಾಡಲಿದೆ. ನಂತರ ಜೂನ್ 9ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಇನ್ನು, ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್‌ ಪಂದ್ಯಕ್ಕಾಗಿ ಇಡೀ ಜಗತ್ತೇ ಕಾಯುತ್ತಿದೆ. ಈ ಪಂದ್ಯಕ್ಕೆ ನ್ಯೂಯಾರ್ಕ್‌ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂ ಸಾಕ್ಷಿಯಾಗಲಿದೆ. ಹೇಗಾದ್ರೂ ಮಾಡಿ ಈ ಪಂದ್ಯ ಗೆಲ್ಲಲೇಬೇಕು ಎಂದು ಉಭಯ ತಂಡಗಳು ಭಾರೀ ತಯಾರಿ ನಡೆಸಿಕೊಂಡಿವೆ. ಅದರಲ್ಲೂ ಪಾಕ್​​ ವಿರುದ್ಧ ಗೆಲ್ಲಲು ಟೀಮ್​ ಇಂಡಿಯಾದ ದೊಡ್ಡ ಬ್ರಹ್ಮಾಸ್ತ್ರ ಕೊಹ್ಲಿ ಆಗಿದ್ದಾರೆ.

ಯೆಸ್, ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​​ ವಿರಾಟ್​ ಕೊಹ್ಲಿ. ಇವರು ಗ್ಲೋಬಲ್​ ಐಕಾನ್​ ಕೂಡ ಹೌದು. ಈಗ ಕ್ರಿಕೆಟ್​ ಬಗ್ಗೆ ಗೊತ್ತಿಲ್ಲದ ಯುಎಸ್​​ ಪೊಲೀಸ್​ ಆಫೀಸರ್​ ಒಬ್ಬರು ಕೊಹ್ಲಿ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದಾರೆ. ಇದಕ್ಕೆ ಕಾರಣ ಅವರ ಮಕ್ಕಳು ಕೊಹ್ಲಿ ಬಗ್ಗೆ ರೆಗ್ಯೂಲರ್​ ಮಾತಾಡುತ್ತಾರೆ ಎಂಬುದು. ಯುಎಸ್​​ನ ಈಗಿನ ಜನರಿಗೆ ಕ್ರಿಕೆಟ್​​ ಜಗತ್ತಿನ ರೂಲರ್​ ಕೊಹ್ಲಿ ಬಹಳ ಪರಿಚಯ.

ಸದ್ಯ ಕ್ರಿಕೆಟ್​​​ ಬಗ್ಗೆ ಗೊತ್ತಿಲ್ಲದ ಯುಎಸ್​ ಆಫೀಸರ್​ ಕೊಹ್ಲಿ ಜೊತೆ ಫೋಟೋ ತೆಗೆಸಿಕೊಂಡಿರುವುದು ಅವರಿಗಿರೋ ಕ್ರೇಜ್​ ಬಗ್ಗೆ ಹೇಳುತ್ತದೆ. ಇದರ ವಿಟ್ನೆಸ್​ ಮಾಡಿರೋ ಒಬ್ಬರು ಮಾತಾಡಿರೋ ವಿಡಿಯೋ ಒಂದು ವೈರಲ್​ ಆಗಿದೆ.

ಇದನ್ನೂ ಓದಿ: T20 ವಿಶ್ವಕಪ್​​ ಹೊತ್ತಲ್ಲೇ ಬಿಗ್​ ಶಾಕ್​​.. ನಿವೃತ್ತಿ ಘೋಷಿಸಿದ ಟೀಮ್​ ಇಂಡಿಯಾ ಸ್ಟಾರ್​ ಪ್ಲೇಯರ್​!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

VIDEO: ಕೊಹ್ಲಿಗಾಗಿ ಕಾದು ಕಾದು ಸೆಲ್ಫಿ ತೆಗೆಸಿಕೊಂಡ ಯುಎಸ್​ ಪೊಲೀಸ್​ ಅಧಿಕಾರಿ.. ಆಗಿದ್ದೇನು?

https://newsfirstlive.com/wp-content/uploads/2024/01/Virat-Kohli_ODI.jpg

Load More