/newsfirstlive-kannada/media/post_attachments/wp-content/uploads/2024/09/Pakistan-cuts-150000-jobs.jpg)
ಪಾಕಿಸ್ತಾನದ ಆರ್ಥಿಕ ಸ್ಥಿತಿ ಅಧೋಗತಿಗೆ ಇಳಿದು ಹಲವು ವರ್ಷಗಳೇ ಕಳೆದಿವೆ. ಮೇಲಿಂದ ಮೇಲೆ ಆರ್ಥಿಕ ಹೊಡೆತಕ್ಕೆ ಒಳಗಾಗುತ್ತಿರುವ ಪಾಕ್, ಮುಳುಗವವನಿಗೆ ಹುಲ್ಲು ಕಡ್ಡಿ ಆಸರೆಯನ್ನುವಂತೆ, ಅಧಃಪತನಕ್ಕಿಳಿದ ಆರ್ಥಿಕ ಸ್ಥಿತಿಯಿಂದ ಮೇಲೇಳಲು ಪಾಕ್ ನೂರೆಂಟು ಕಸರತ್ತು ಮಾಡುತ್ತಿದೆ. ಹಲವು ವರ್ಷಗಳಿಂದ ಈ ನರಳಾಟದಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಎದುರು ದೇಹಿ ಅಂತ ನಿಲ್ಲುತ್ತಲೇ ಇದೆ. ಐಎಂಎಫ್ ಮುಂದಕ್ಕೆ ಹೋಗು ಅಂತ ಉಗಿಯುತ್ತಲೇ ಇದೆ. ಆದರೂ ಕೂಡ ಐಎಂಎಫ್ ಎದುರು ಪಾಕಿಸ್ತಾನ ಬೇಡುವುದನ್ನು ಮಾತ್ರ ಬಿಟ್ಟಿಲ್ಲ. ಈಗಾಗಲೇ 300 ಕೋಟಿ ಯುಎಸ್ ಡಾಲರ್ ಸಾಲವಾಗಿ ನೀಡುವಂತೆ ಪಾಕ್ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಎದುರು ಬೇಡಿಕೆ ಇಟ್ಟಿದೆ. ಕೊನೆಗೂ ಸಾಲ ನೀಡಲು ಒಪ್ಪಿರುವ ಐಎಂಎಫ್ ಪಾಕಿಸ್ತಾನಕ್ಕೆ ಹಲವು ಷರತ್ತುಗಳನ್ನಿಟ್ಟು ಈಗಾಗಲೇ 100 ಕೋಟಿ ಯುಎಸ್ ಡಾಲರ್ ರಿಲೀಸ್ ಮಾಡಿದೆ.
ಇದನ್ನೂ ಓದಿ:ಬೂದಿಯಿಂದ ಬಂಗಾರ ತೆಗೆದು ಕೋಟಿ ಕೋಟಿ ಹಣ ಗಳಿಸಿದ ಜಪಾನಿಯರು! ಈ ಸ್ಟೋರಿ ಓದಿದ್ರೆ ಶಾಕ್ ಆಗ್ತೀರಾ!
ಅಂತಾರಾಷ್ಟ್ರೀಯ ಹಣಕಾಸ ನಿಧಿ ಪಾಕಿಸ್ತಾನಕ್ಕೆ ಹಲವು ಖರ್ಚುಗಳಿಗೆ ಕಡಿತ ಹಾಕಿ, ತೆರಿಗೆಯನ್ನು ಏರಿಸುವ ಮೂಲಕ ಜಿಡಿಪಿ ರೆಷಿಯೊವನ್ನು ಹೆಚ್ಚುಗೊಳಿಸುವಂತೆ ಪಾಕ್ಗೆ ಸೂಚನೆ ನೀಡಿದೆ. ಸಬ್ಸಿಡಿಗಳಿಗೆ ಮಿತಿ ಹೇರುವ, ಕೃಷಿ ಹಾಗೂ ರಿಯಲ್ ಎಸ್ಟೇಟ್ ಮೇಲೂ ತೆರಿಗೆ ವಿಧಿಸುವ ಸೂಚನೆಗಳನ್ನು ನೀಡಿದೆ. ಐಎಂಎಫ್ ಹೇಳಿದ ಪ್ರಕಾರ ಈಗ ಪಾಕಿಸ್ತಾನ ವೆಚ್ಚ ಕಡಿತಕ್ಕೆ ಮುಂದಾಗಿದೆ ಹೀಗಾಗಿಯೇ ಒಟ್ಟು 1.5 ಲಕ್ಷ ಸರ್ಕಾರಿ ಕೆಲಸಗಾರರನ್ನು ತೆಗೆದು ಹಾಕಲಾಗಿದ್ದು. ತನ್ನ ಸರ್ಕಾರದ ಆರು ಸಚಿವಾಲಯಗಳನ್ನು ವಿಸರ್ಜಿಸಿದೆ.
ಇದನ್ನೂ ಓದಿ:ಒಂದೇ ಒಂದು ಮಿಸ್ ಕಾಲ್ ಸಾಕು.. ಇಲ್ಲಿ ಎಮ್ಮೆಗಳ ಮೇಲೆ ಯಮರಾಜನಲ್ಲ, ಪೊಲೀಸ್ ಬರ್ತಾರೆ!
ಈ ಬಗ್ಗೆ ಮಾಧ್ಯಮಗಳಿಗೆ ಖುದ್ದು ಪಾಕಿಸ್ತಾನದ ಹಣಕಾಸು ಮಂತ್ರಿ ಮೊಹಮ್ಮದ್ ಔರಂಗಜೇಬ್ ಅವರೇ ಮಾಹಿತಿ ನೀಡಿದ್ದಾರೆ. ಆರು ಸಚಿವಾಲಯಗಳನ್ನು ಕ್ಲೋಸ್ ಮಾಡಲಾಗಿದೆ. ಅದರಲ್ಲಿ ಎರಡು ಸಚಿವಾಲಯಗಳನ್ನು ಮರ್ಜ್ ಮಾಡಲಾಗಿದೆ, ಹಲವು ಸಚಿವಾಲಯದ ಒಟ್ಟು 1.5 ಲಕ್ಷ ಉದ್ಯೋಗಗಳನ್ನು ತೆಗೆದುಹಾಕಲಾಗಿದೆ ಎಂದು ವಿವರಣೆ ನೀಡಿದ್ದಾರೆ.
ಇನ್ನು ಪಾಕಿಸ್ತಾನದ ಆರ್ಥಿಕ ಸ್ಥಿತಿ ಸರಿಯಾದ ದಾರಿಯಲ್ಲಿ ಸಾಗುತ್ತಿದೆ ಎಂದು ವಾದಿಸಿರುವ ಪಾಕ್ನ ಹಣಕಾಸು ಮಂತ್ರಿ. ದೇಶದ ವಿದೇಶಿ ವಿನಿಮಯ ಮೀಸಲು ಕೂಡ ಹೆಚ್ಚಾಗುತ್ತಿದೆ. ದೇಶದಲ್ಲಿ ತೆರಿಗೆ ಸಂಗ್ರಹ ಹೆಚ್ಚಿಸಬೇಕಿದ್ದು. ಸರಿಯಾಗಿ ಟ್ಯಾಕ್ಸ್ ಕಟ್ಟದವರನ್ನು ಇನ್ಮುಂದೆ ಯಾವುದೇ ವಾಹನ ಹಾಗೂ ಆಸ್ತಿ ಖರೀದಿ ಮಾಡದಂತೆ ಮಾಡಲಾಗುವುದು ಎಂದು ಹೇಳಿದ್ದಾರೆ. ಸರ್ಕಾರಿ ಖರ್ಚು ವೆಚ್ಚಗಳನ್ನು ತಗ್ಗಿಸಲು ಆರು ಸಚಿವಾಲಯಗಳನ್ನು ಕ್ಲೋಸ್ ಮಾಡಲಾಗಿದ್ದು. ಹಲವು ಸಚಿವಾಲಯಗಳ 1.5 ಲಕ್ಷ ಉದ್ಯೋಗಗಳನ್ನು ಕೂಡ ರದ್ದುಪಡಿಸಲಾಗಿದೆ ಎಂದು ಕೂಡ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ