newsfirstkannada.com

ಗರ್ಲ್​ಫ್ರೆಂಡ್​ಗೆ ತಂದಿದ್ದ ಬರ್ಗರ್​ ಕಚ್ಚಿದ್ದಕ್ಕೆ ಸ್ನೇಹಿತನನ್ನೇ ಕೊಂದ ಕುಚುಕು ಗೆಳೆಯ

Share :

Published April 26, 2024 at 9:56am

Update April 26, 2024 at 10:44am

    ಮನೆಯಲ್ಲಿ ನಾಲ್ವರು ಸೇರಿ ಬರ್ಗರ್ ತಿನ್ನುವಾಗ ನಡೆದ ಗಲಾಟೆ

    ಗೆಳತಿಗಾಗಿ ತಂದಿದ್ದ ಬರ್ಗರ್ ಕಚ್ಚಿದ್ದಕ್ಕೆ ಕೊಲೆ ಮಾಡಿದ ಆರೋಪಿ

    ಕೊಂಚ ಆತುರದಿಂದ ಬರ್ಗರ್​ ಕಚ್ಚಿ ತಿಂದಿದ್ದೆ ಇಲ್ಲಿ ತಪ್ಪು ಆಯಿತಾ?

ಗೆಳತಿಗಾಗಿ ಆರ್ಡರ್ ಮಾಡಿ ತರಿಸಿದ್ದ ಬರ್ಗರ್ ಅನ್ನು ಸ್ನೇಹಿತ ಕಚ್ಚಿ ತಿಂದಿದ್ದಕ್ಕಾಗಿ ಯುವಕನೊಬ್ಬ ಕೋಪಗೊಂಡು ಶೂಟ್ ಮಾಡಿ ಕೊಲೆಗೈದಿದ್ದಾನೆ. ಈ ಘಟನೆಯು ಪಾಕಿಸ್ತಾನದ ಕರಾಚಿಯ ಡಿಫೆನ್ಸ್ ಫೇಸ್-5 ಪ್ರದೇಶದಲ್ಲಿ ನಡೆದಿದೆ.

ಪಾಕಿಸ್ತನಾದಲ್ಲಿನ ಸೆಷನ್ಸ್ ಕೋರ್ಟ್​ವೊಂದರ ನ್ಯಾಯಾಧೀಶರ ಮಗ ಅಲಿ ಕೆರಿಯೊ ಮೃತಪಟ್ಟ ಯುವಕ. ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಒಬ್ಬರ ಪುತ್ರ ದಾನಿಯಾಲ್ ನಜೀರ್ ಕೊಲೆ ಮಾಡಿರುವ ಆರೋಪಿ. ಹತ್ಯೆ ಮಾಡಿರುವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಬಾಲಾರಾಮನ ಅಂಗಳದಲ್ಲಿ ಶೂಟಿಂಗ್ ಮಾಡಿದ ಮೊಟ್ಟ ಮೊದಲ ಕನ್ನಡ ಸೀರಿಯಲ್ ಇದು?

ಇದನ್ನೂ ಓದಿ: ಹೊಸ ರೂಪದಲ್ಲಿ ಬರ್ತಿದೆ ಕಾಮಿಡಿ ಕಿಲಾಡಿಗಳು.. ಪ್ರತಿವಾರ 1 ಲಕ್ಷ ನಗದು ಬಹುಮಾನ ಕೊಡ್ತಾರಾ?

ಆರೋಪಿ ದಾನಿಯಾಲ್ ನಜೀರ್ ತನ್ನ ಗರ್ಲ್​​ಫ್ರೆಂಡ್​ ಶಾಜಿಯಾ ಹಾಗೂ ಅಲಿ ಕೆರಿಯೊ ಮತ್ತು ಕೆರಿಯೊನ ಸಹೋದರ ಅಹ್ಮದ್​ರನ್ನು ಮನೆಗೆ ಕರೆಯಿಸಿಕೊಂಡಿದ್ದನು. ಈ ವೇಳೆ ತಿನ್ನಲು ಎಂದು ಆನ್​​ಲೈನ್​ ಮೂಲಕ ಎರಡು ಬರ್ಗರ್​ಗಳನ್ನು ಆರ್ಡರ್​ ಮಾಡಿದ್ದ. ಅದರಂತೆ ಬರ್ಗರ್​ ಮನೆಗೆ ಬಂದ ಮೇಲೆ ನಾಲ್ವರು ಕುಳಿತು ಬರ್ಗರ್ ತಿನ್ನಲು ಮುಂದಾಗಿದ್ದಾರೆ. ಈ ವೇಳೆ ಕೆರಿಯೊ ಸ್ವಲ್ಪ ಆತುರದಿಂದ ದಾನಿಯಲ್​ನ ಗರ್ಲ್​​ಫ್ರೆಂಡ್​ಗಾಗಿ ತಂದಿದ್ದ ಬರ್ಗರ್​ ಅನ್ನು ಕಚ್ಚಿ ತಿಂದಿದ್ದಾನೆ. ಇದರಿಂದ ಇಬ್ಬರ ನಡುವೆ ಭಾರೀ ವಾಗ್ವಾದ ನಡೆದಿದೆ.

ಇದನ್ನೂ ಓದಿ: ಮತದಾರರಿಗೆ ಸಿಎಂ, ಡಿಸಿಎಂ ಫೋಟೋ ಇರೋ ಸ್ಮಾರ್ಟ್​ ಕಾರ್ಡ್​ ಹಂಚಿಕೆ ಆರೋಪ.. ಎಲ್ಲೆಲ್ಲಿ?

ಗಲಾಟೆ ಅತಿರೇಕಕ್ಕೆ ಹೋಗಿದ್ದರಿಂದ ಆರೋಪಿಯು ಗನ್ ತೆಗೆದುಕೊಂಡು ಶೂಟ್ ಮಾಡಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಯುವಕನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದು ತನಿಖೆ ಕೈಕೊಂಡಿದ್ದಾರೆ.​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗರ್ಲ್​ಫ್ರೆಂಡ್​ಗೆ ತಂದಿದ್ದ ಬರ್ಗರ್​ ಕಚ್ಚಿದ್ದಕ್ಕೆ ಸ್ನೇಹಿತನನ್ನೇ ಕೊಂದ ಕುಚುಕು ಗೆಳೆಯ

https://newsfirstlive.com/wp-content/uploads/2024/04/PAK_BURGER.jpg

Load More