/newsfirstlive-kannada/media/post_attachments/wp-content/uploads/2024/04/Pakistan-2.jpg)
ಪಾಕಿಸ್ತಾನದ ಕೆಲವೆಡೆ ಮಳೆರಾಯ ಬಿಟ್ಟುಬಿಡದೆ ಕಾಡುತ್ತಿದೆ. ಕಳೆದ ವಾರದಿಂದ ಮಳೆರಾಯನ ಆರ್ಭಟ ಜೋರಾಗಿದ್ದು, ಇಲ್ಲಿಯವರೆಗೆ ಸುಮಾರು 87 ಜನರು ಮಳೆಯಿಂದಾಗಿ ಸಾವನ್ನಪ್ಪಿದ್ದು, ಸುಮಾರು 82 ಜನರು ಗಾಯಗೊಂಡಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಈ ಬಗ್ಗೆ ವರದಿ ಮಾಡಿದ್ದು, ಮಳೆಯಿಂದಾಗಿ ಸುಮಾರು 2,715 ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಮಳೆ, ಸಿಡಿಲು, ಪ್ರವಾಹದಿಂದ ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.
ವಾಯುವ್ಯ ಖೈಬರ್​​ ಪಖ್ತಂಖ್ವಾ ಪ್ರಾಂತ್ಯದಿಂದ ಹೆಚ್ಚಿನ ಹಾನಿ ಮತ್ತು ಸಾವು ನೋವು ವರದಿಯಾಗಿವೆ. ಆ ಭಾಗದಲ್ಲಿ ಸುಮಾರು 36 ಜನರು ಸಾವನ್ನಪ್ಪಿದ್ದಾರೆ. 53 ಜನರು ಗಾಯಗೊಂಡಿದ್ದಾರೆ.
ಇನ್ನು ಪಂಜಾಬ್​ ಪೂರ್ವ ಪ್ರಾಂತ್ಯದಲ್ಲಿ 25 ಜನರು ಸಾವನ್ನಪ್ಪಿದ್ದು, 8 ಜನರು ಗಾಯಗೊಂಡಿರೋದು ಬೆಳಕಿಗೆ ಬಂದಿದೆ. ಇನ್ನು ಬಲೂಚಿಸ್ತಾನ ಪ್ರಾಂತ್ಯದಲ್ಲಿ 15 ಜನರು ಸಾವನ್ನಪ್ಪಿದ್ದಾರೆ. ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಮಳೆಯಿಂದಾಗಿ 11 ಜನರು ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us