newsfirstkannada.com

ಮಳೆಯಿಂದಾಗಿ 87 ಜನರು ಸಾವು, 80 ಮಂದಿಗೆ ಗಾಯ.. ವರುಣಾರ್ಭಟದಿಂದ ತತ್ತರಿಸಿದ ಪಾಕ್​

Share :

Published April 20, 2024 at 6:46am

Update April 20, 2024 at 6:50am

    ಮಳೆಯಿಂದಾಗಿ ಸುಮಾರು 2,715 ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ

    ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಮಳೆಯಿಂದಾಗಿ 11 ಜನರು ಸಾವನ್ನಪ್ಪಿದ್ದಾರೆ

    ಪಾಕಿಸ್ತಾನಕ್ಕೆ ಮಳೆಯ ಕಂಟಕ.. ವರುಣನಿಂದ ಜನ ಜೀವನ ಅಸ್ತವ್ಯಸ್ತ

ಪಾಕಿಸ್ತಾನದ ಕೆಲವೆಡೆ ಮಳೆರಾಯ ಬಿಟ್ಟುಬಿಡದೆ ಕಾಡುತ್ತಿದೆ. ಕಳೆದ ವಾರದಿಂದ ಮಳೆರಾಯನ ಆರ್ಭಟ ಜೋರಾಗಿದ್ದು, ಇಲ್ಲಿಯವರೆಗೆ ಸುಮಾರು 87 ಜನರು ಮಳೆಯಿಂದಾಗಿ ಸಾವನ್ನಪ್ಪಿದ್ದು, ಸುಮಾರು 82 ಜನರು ಗಾಯಗೊಂಡಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಈ ಬಗ್ಗೆ ವರದಿ ಮಾಡಿದ್ದು, ಮಳೆಯಿಂದಾಗಿ ಸುಮಾರು 2,715 ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಮಳೆ, ಸಿಡಿಲು, ಪ್ರವಾಹದಿಂದ ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.

ವಾಯುವ್ಯ ಖೈಬರ್​​ ಪಖ್ತಂಖ್ವಾ ಪ್ರಾಂತ್ಯದಿಂದ ಹೆಚ್ಚಿನ ಹಾನಿ ಮತ್ತು ಸಾವು ನೋವು ವರದಿಯಾಗಿವೆ. ಆ ಭಾಗದಲ್ಲಿ ಸುಮಾರು 36 ಜನರು ಸಾವನ್ನಪ್ಪಿದ್ದಾರೆ. 53 ಜನರು ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ನಡೆದ ಡಬಲ್​ ಮರ್ಡರ್​ ಕೇಸ್​ಗೆ ಬಿಗ್​ ಟ್ವಿಸ್ಟ್​​.. ಏನಿದು ಕೌಂಟರ್​​ ಕಂಪ್ಲೈಂಟ್​​?

ಇನ್ನು ಪಂಜಾಬ್​ ಪೂರ್ವ ಪ್ರಾಂತ್ಯದಲ್ಲಿ 25 ಜನರು ಸಾವನ್ನಪ್ಪಿದ್ದು, 8 ಜನರು ಗಾಯಗೊಂಡಿರೋದು ಬೆಳಕಿಗೆ ಬಂದಿದೆ. ಇನ್ನು ಬಲೂಚಿಸ್ತಾನ ಪ್ರಾಂತ್ಯದಲ್ಲಿ 15 ಜನರು ಸಾವನ್ನಪ್ಪಿದ್ದಾರೆ. ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಮಳೆಯಿಂದಾಗಿ 11 ಜನರು ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಳೆಯಿಂದಾಗಿ 87 ಜನರು ಸಾವು, 80 ಮಂದಿಗೆ ಗಾಯ.. ವರುಣಾರ್ಭಟದಿಂದ ತತ್ತರಿಸಿದ ಪಾಕ್​

https://newsfirstlive.com/wp-content/uploads/2024/04/Pakistan-2.jpg

Load More