ಪಾಕಿಸ್ತಾನದ ಸೂಪರ್ ಫ್ಯಾನ್ ಚಾಚಾ ಕ್ರಿಕೆಟರ್!
ಚಾಚಾಗೆ ಟೀಂ ಇಂಡಿಯಾದ ಈತ ಫೇವರೇಟ್
ಈ ಬಗ್ಗೆ ಚಾಚಾ ಕ್ರಿಕೆಟರ್ ಹೇಳಿದ್ದೇನು ಗೊತ್ತಾ?
ಸದ್ಯದಲ್ಲೇ ಏಕದಿನ ವಿಶ್ವಕಪ್ ಟೂರ್ನಿ ಶುರುವಾಗಲಿದೆ. ಈ ಟೂರ್ನಿಯಲ್ಲಿ ಜಗತ್ತಿನ ಅತ್ಯಂತ ಶ್ರೇಷ್ಠ ತಂಡಗಳು ಭಾಗಿಯಾಗಲಿವೆ. 10 ತಂಡಗಳು ಬೆಸ್ಟ್ ಟೀಂ ಅನೌನ್ಸ್ ಮಾಡಲು ಸಾಕಷ್ಟು ಸರ್ಕಸ್ ಮಾಡುತ್ತಿವೆ. ಟೀಂ ಇಂಡಿಯಾ ಮಾತ್ರ ಮುಂದಿನ ತಿಂಗಳು ಅಕ್ಟೋಬರ್ 8ನೇ ತಾರೀಕಿನಂದು ಆಸ್ಟ್ರೇಲಿಯಾದ ವಿರುದ್ಧ ತನ್ನ ಮೊದಲ ಏಕದಿನ ವಿಶ್ವಕಪ್ ಪಂದ್ಯ ಆಡಲಿದೆ. ಇದಾದ ಬಳಿಕ ಅಕ್ಟೋಬರ್ 14ನೇ ತಾರೀಕು ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ, ಪಾಕಿಸ್ತಾನದ ಮಧ್ಯೆ ನಡೆಯಲಿರೋ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ವಿಶ್ವಕಪ್ಗೆ ಮುನ್ನವೇ ಏಷ್ಯಾಕಪ್ ಟೂರ್ನಿ ಶುರುವಾಗಲಿದೆ. ಆಗಸ್ಟ್ 30ನೇ ತಾರೀಕಿನಿಂದ ನಡೆಯೋ ಏಷ್ಯಾಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ, ಪಾಕ್ ತಂಡಗಳು ಎದುರಾಗಲಿವೆ. ಈ ಪಂದ್ಯದಲ್ಲಿ ವಿಶೇಷವಾಗಿ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇಡೀ ಕ್ರೀಡಾ ಲೋಕದ ಕಣ್ಣು ಬಿದ್ದಿದೆ. ಎಲ್ಲರೂ ಕೊಹ್ಲಿ ಬ್ಯಾಟಿಂಗ್ಗಾಗಿಯೇ ಕಾಯುತ್ತಿದ್ದಾರೆ.
ಯೆಸ್, ಭಾರತದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ ಕಂಡ ಅತ್ಯುತ್ತಮ ಕ್ರಿಕೆಟರ್. ಇಡೀ ಜಗತ್ತಿನ ಎಲ್ಲಾ ದೇಶಗಳಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ. ಐಪಿಎಲ್, ಟೆಸ್ಟ್, ಏಕದಿನ, ಟಿ20 ಮಾದರಿಯಲ್ಲೂ ತಮ್ಮ ಆಟದ ಮೂಲಕವೇ ಎಲ್ಲ ಗಮನ ಸೆಳೆಯುತ್ತಾರೆ. ಇವರಿಗೆ ಪಾಕಿಸ್ತಾನದಲ್ಲೂ ಹೆಚ್ಚಿನ ಅಭಿಮಾನಿಗಳಿದ್ದಾರೆ. ಪಾಕ್ ತಂಡದ ಸೂಪರ್ ಅಭಿಮಾನಿ ‘ಚಾಚಾ ಕ್ರಿಕೆಟ್’ ಕೂಡ ಕೊಹ್ಲಿಯ ಬಿಗ್ ಫ್ಯಾನ್ ಎಂಬ ವಿಚಾರ ಬೆಳಕಿಗೆ ಬಂದಿದೆ.
ಚಾಚಾ ಏನಂದ್ರು?
ಈ ಸಂಬಂಧ ನಾದಿರ್ ಅಲಿ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತಾಡಿರೋ ‘ಚಾಚಾ ಕ್ರಿಕೆಟ್’, ಕೊಹ್ಲಿ ಅತ್ಯಂತ ದೊಡ್ಡ ಆಟಗಾರ. ಕೊಹ್ಲಿ ಹೊಡೆಯೋ ಒಂದೊಂದು ಶಾಟ್ ಎಲ್ಲರಿಗಿಂತಲೂ ಭಿನ್ನ. ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್ ಕೊಹ್ಲಿಗಿಂತ ಉತ್ತಮವಾಗಿ ಆಡಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ