ಓಪನರ್ಸ್ ಬ್ಯಾಟಿಂಗ್ ವಿಫಲವಾದ್ರೂ ರನ್ಗೆ ಬರವಿರಲಿಲ್ಲ
191 ರನ್ಗಳಿಸಿದ್ದ ರಹೀಮ್ ದ್ವಿಶತಕವನ್ನ ಕೈಚೆಲ್ಲಿದ್ದು ಹೇಗೆ.?
ಪಾಕಿಸ್ತಾನ ಕೊಟ್ಟ ಟಾರ್ಗೆಟ್ ಕೇಳಿದ್ರೆ ನಗು ಬರುವಂತೆ ಇದೆ
ತವರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಹೀನಾಯವಾಗಿ ಸೋತು ಹೋಗಿದೆ. ಈ ಮೂಲಕ ಬಾಂಗ್ಲಾದೇಶ ಹೊಸ ದಾಖಲೆ ನಿರ್ಮಿಸಿದ್ದು 23 ವರ್ಷಗಳ ನಂತರ ಪಾಕಿಸ್ತಾನದ ವಿರುದ್ಧ ಮೊದಲು ಗೆಲುವು ಸಾಧಿಸಿದೆ. ಇದರ ಜೊತೆಗೆ ಅವರದೇ ಪಿಚ್ನಲ್ಲೇ 10 ವಿಕೆಟ್ಗಳಿಂದ ಪಾಕ್ ಅನ್ನು ಮಣಿಸಿದ ಮೊದಲ ಟೀಮ್ ಎಂಬ ಐತಿಹಾಸಿಕ ದಾಖಲೆಯನ್ನು ಬಾಂಗ್ಲಾ ಮಾಡಿದೆ.
ಇದನ್ನೂ ಓದಿ: ಇದನ್ನೂ ಓದಿ: ದರ್ಶನ್ ರೆಸಾರ್ಟ್ನಲ್ಲಿದ್ದಾರೋ, ಜೈಲಿನಲ್ಲಿದ್ದಾರೋ; ಕಣ್ಣೀರು ಹಾಕುತ್ತ ರೇಣುಕಾಸ್ವಾಮಿ ತಂದೆ ಏನಂದ್ರು?
ರಾವಲ್ಪಿಂಡಿಯಲ್ಲಿ ನಡೆದ ಮೊದಲ ಟೆಸ್ಟ್ ಮ್ಯಾಚ್ನಲ್ಲಿ ಬಾಂಗ್ಲಾ ನಾಯಕ ನಜ್ಮುಲ್ ಹೊಸೈನ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡರು. ಪಾಕಿಸ್ತಾನ ಬ್ಯಾಟಿಂಗ್ಗೆ ಆಗಮಿಸಿತು. ಓಪನರ್ಸ್ ವಿಫಲ ಬ್ಯಾಟಿಂಗ್ ಪ್ರದರ್ಶನ ಮಾಡಿದ್ರೂ ಮಧ್ಯಮ ಕ್ರಮಾಂಕದಲ್ಲಿ ಮನಮೋಹಕ ಬ್ಯಾಟಿಂಗ್ ಮಾಡಿದರು. ಇದರಿಂದ 448 ರನ್ಗಳಿಗೆ ಪಾಕ್ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಬೃಹತ್ ಮೊತ್ತದ ರನ್ಗಳನ್ನು ಗಳಿಸಿತು. ಬಾಂಗ್ಲಾ ಪರ ಮುಶ್ಫೀಕರ್ ರಹೀಮ್ 191 ರನ್, ಮೊಮಿನುಲ್ 50, ಶದ್ಮಾನ್ ಇಸ್ಲಾಮ್ 93, ಮೆಹೆದಿ ಹಸನ್ 77, ಲಿಟ್ಟನ್ ದಾಸ್ 56 ರನ್‌ಗಳ ನೆರವಿನಿಂದ 565 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿ ಆಲೌಟ್ ಆಯಿತು. ಹೀಗಾಗಿ 117 ರನ್‌ಗಳ ಮುನ್ನಡೆಯನ್ನು ಬಾಂಗ್ಲಾದೇಶ ಪಡೆದುಕೊಂಡಿತು. ಮುಶ್ಫೀಕರ್ ರಹೀಮ್ ಕೊಂಚದರಲ್ಲೇ ದ್ವಿಶತಕದಿಂದ ವಂಚಿತರಾದರು.
ಇದನ್ನೂ ಓದಿ: ಪ್ಯಾಸೆಂಜರ್ ಬಸ್ ಭಯಾನಕ ಆಕ್ಸಿಡೆಂಟ್.. 30 ಪ್ರಯಾಣಿಕರ ಪೈಕಿ 29 ಜನ ಸ್ಥಳದಲ್ಲೇ ಸಾವು
2ನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಲು ಬಂದ ಪಾಕ್ ಆಟಗಾರರು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಬಾಂಗ್ಲಾ ಬೌಲರ್ಗಳ ಅಬ್ಬರಕ್ಕೆ ಪತರಗುಟ್ಟಿದರು. ಇದರಿಂದ ಕೇವಲ 146 ರನ್ಗಳಿಗೆ ಪಾಕ್ ಆಲೌಟ್ ಆಗಿದ್ದು ಕೇವಲ 29 ರನ್‌ಗಳ ಟಾರ್ಗೆಟ್ ನೀಡಿತು. ಈ ಸುಲಭ ಗುರಿ ಬೆನ್ನತ್ತಿದ ಬಾಂಗ್ಲಾ ಓಪನರ್ಸ್ ಕೇವಲ 6.3 ಓವರ್ಗಳಲ್ಲಿ 30 ರನ್ ಸಿಡಿಸಿದರು. ಈ ಮೂಲಕ 10 ವಿಕೆಟ್ಗಳ ಗೆಲುವು ಪಡೆದ ಬಾಂಗ್ಲಾ ಪ್ಲೇಯರ್ಸ್ ಮೈದಾನದಲ್ಲಿ ಸಂಭ್ರಮಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ