/newsfirstlive-kannada/media/post_attachments/wp-content/uploads/2024/09/PAK_GIRL.jpg)
ಪಾಕಿಸ್ತಾನ ಈಗಾಗಲೇ ಆರ್ಥಿಕ ದಿವಾಳಿಯಾಗಿದ್ದು ಇದರ ಜೊತೆಗೆ ಭಯೋತ್ಪಾದನೆಯಿಂದ ನರಳುತ್ತಿದೆ. ಎಂದಿನಂತೆ ಜನರು ಜೀವಿಸಲು ಭಯಪಡುವಂತಾಗಿದೆ. ಅದರಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲವಾಗಿದೆ. ಯಾವ ಸಮಯದಲ್ಲಿ ಏನು ಆಗುತ್ತೋ ಎಂದು ಮಹಿಳೆಯರು ಆತಂಕದಲ್ಲಿದ್ದಾರೆ. ಹೀಗಾಗಿಯೇ ಪಾಕಿಸ್ತಾನದಲ್ಲಿ ಮಹಿಳೆಯರಿಗೆ, ಯುವತಿಯರಿಗೆ ಸೇಫ್ ಇಲ್ಲವೆಂದು ಪೋಷಕರು ತಮ್ಮ ಮಗಳ ತಲೆ ಮೇಲೆ ಸಿಸಿಟಿವಿ ಕ್ಯಾಮೆರಾ ಫಿಟ್ ಮಾಡಿದ್ದಾರೆ.
ಇದನ್ನೂ ಓದಿ:ಜೈಲಲ್ಲಿ ಅನ್ನ ತಿನ್ನುವುದು ಬಿಟ್ಟ ದರ್ಶನ್.. ಈ ಮಾತ್ರೆಗಳನ್ನ ಸೇವನೆ ಮಾಡುತ್ತಿರುವುದು ಏಕೆ?
ಘರ್ ಕೆ ಕಾಲೇಶ್ ಎನ್ನುವ ಎಕ್ಸ್ ಅಕೌಂಟ್ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಯುವತಿಯ ಸೇಫ್ಟಿಗಾಗಿ ಆಕೆಯ ಕುಟುಂಬಸ್ಥರು ಈ ಐಡಿಯಾ ಮಾಡಿದ್ದಾರೆ. ತಲೆಯ ಮೇಲೆ ಸಿಸಿಟಿಬಿ ಕ್ಯಾಮೆರಾ ಇಟ್ಟಿದ್ದಾರೆ. ಪಾಕಿಸ್ತಾನದಲ್ಲಿ ಸದ್ಯ ನಡೆಯುತ್ತಿರುವ ಭೀಕರ ಘಟನೆಗಳು ಹಾಗೂ ಉದ್ವಿಗ್ನತೆಗಳನ್ನ ಗಮನಿಸಿದರೆ ನಮ್ಮ ಭದ್ರತೆ ನಮಗೆ ಅವಶ್ಯವಾಗಿದೆ. ಯುವತಿಯರಿಗೆ ಸಿಸಿಟಿವಿ ಅಗತ್ಯವಿದೆ ಎಂದು ಆಕೆಯ ಕುಟುಂಬಸ್ಥರು ನಿರ್ಧರಿಸಿದ್ದಾರಂತೆ.
ಇದನ್ನೂ ಓದಿ: ಗಣೇಶನ ಹಣದ ವಿಚಾರಕ್ಕೆ ಸೋದರನ ಜೀವನ ಮುಗಿಸಿದ, ರಥಚಕ್ರಕ್ಕೆ ಸಿಲುಕಿ ಯುವಕ ಸಾವು, ಪೊಲೀಸರ ಮೇಲೂ ಹಲ್ಲೆ
Pakistan??
pic.twitter.com/Hdql8R2ejt— Ghar Ke Kalesh (@gharkekalesh)
Pakistan🫡😭
pic.twitter.com/Hdql8R2ejt— Ghar Ke Kalesh (@gharkekalesh) September 6, 2024
">September 6, 2024
ತಲೆ ಮೇಲೆ ಸಿಸಿಟಿವಿ ಅಳವಡಿಸಿಕೊಂಡು ಯುವತಿ ಓಡಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ನೆಟ್ಟಿಗರು ಕೂಡ ವಿಧ ವಿಧವಾದ ಜೋಕ್, ಕಾಮೆಂಟ್ಸ್ ಮಾಡ್ತಿದ್ದಾರೆ.
- ಕಮೆಂಟ್ 1- ಸಿಸಿಟಿವಿ ಕ್ಯಾಮೆರಾ ಇದ್ದರೂ ಯಾವುದೇ ಗ್ಯಾರಂಟಿ ಇಲ್ಲ
- ಕಮೆಂಟ್ 2- ನೀವು ಹೀಗೆ ವಿಡಿಯೋ ಮಾಡುತ್ತಾ ಅಪ್ಲೋಡ್ ಮಾಡಿ ಹಣ ಗಳಿಸಿ
- ಕಮೆಂಟ್ 3- ಹೈಲೇವೆಲ್ ಸೆಕ್ಯೂರಿಟಿ, ಡಿಜಿಟಲ್ ಪಾಕಿಸ್ತಾನ
- ಕಮೆಂಟ್ 4- ಮಗಳು ರಾಜಕುಮಾರಿ. ತಂದೆಯೇ ಸಿಸಿಟಿವಿಯನ್ನ ಪಟ್ಟಾಭಿಷೇಕ ಮಾಡಿದ್ದಾರೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ