/newsfirstlive-kannada/media/post_attachments/wp-content/uploads/2024/04/DELHI_CISF_DIE.jpg)
ನವದೆಹಲಿ: ಕರ್ತವ್ಯದ ನಿರತ ಸಿಐಎಸ್​ಎಫ್​ ಸಿಬ್ಬಂದಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯ ಪಶ್ಚಿಮ ವಿಹಾರ್ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಈ ದೃಶ್ಯವು ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮಹಾರಾಷ್ಟ್ರದ ಗಡ್ಚಿರೋಲಿ ಮೂಲದ ಸಿಐಎಸ್​ಎಫ್​ ಆಧಿಕಾರಿ ಸಹಾರೆ ಕಿಶೋರ್ ಆತ್ಮಹತ್ಯೆ ಮಾಡಿಕೊಂಡವರು. ಬೆಳಗ್ಗೆ 7 ಗಂಟೆ ಸಮಯದಲ್ಲಿ ಇಲಾಖೆ ನೀಡಿದ್ದ ಸರ್ವೀಸ್​ ರೈಫಲ್​ನಿಂದಲೇ ಸಿಬ್ಬಂದಿ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ. ಕಿಶೋರ್ 2022ರಿಂದ ದೆಹಲಿಯ ಮೆಟ್ರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇವರ ಕುಟುಂಬ ದೆಹಲಿಯ ನರೇಳದಲ್ಲಿರುವ ಸರ್ಕಾರದ ಕ್ವಾರ್ಟರ್ಸ್​ನಲ್ಲಿ ಇದ್ದಾರೆ. ಆದರೆ ಸಾವಿಗೆ ಕಾರಣ ಏನೆಂಬುದು ನಿಖರವಾಗಿ ತಿಳಿದು ಬಂದಿಲ್ಲ ಎನ್ನಲಾಗಿದೆ.
Warning ⚠️ : Visual #CISF jawan posted at Paschim Vihar West Metro Station of Delhi shot himself on duty from his service INSAS rifle .
The deceased has been identified as Saharey Kishor from Gadchiroli of Maharashtra, he was posted with #DelhiMetro since 2022.
Reason… pic.twitter.com/7pux24C0KX— Amitabh Chaudhary (@MithilaWaala) April 6, 2024
ವಿಡಿಯೋದಲ್ಲಿ ಕಿಶೋರ್ ಒಂದು ಬೆಂಚ್ ಮೇಲೆ ಕುಳಿತಿರುತ್ತಾರೆ. ಆಗ ತನ್ನ ರೈಫಲ್​ನ ಸರಿ ಮಾಡಿಕೊಂಡು ಅದನ್ನು ತನ್ನ ತಲೆಗೆ ಇಟ್ಟಕೊಂಡು ಟ್ರಿಗ್ಗರ್ ಪ್ರೆಸ್​ ಮಾಡಿ ಗುಂಡು ಹಾರಿಸಿಕೊಂಡಿದ್ದಾನೆ. ಇದರಿಂದ ಸ್ಥಳದಲ್ಲೇ ಸಿಬ್ಬಂದಿ ಉಸಿರು ಚೆಲ್ಲಿದ್ದಾನೆ. ಇನ್ನು ಗುಂಡಿನ ಸೌಂಡ್ ಕೇಳುತ್ತಿದ್ದಂತೆ ಉಳಿದ ಸಿಬ್ಬಂದಿ ಓಡಿ ಬಂದು ನೋಡಿದ್ದಾರೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮೃತದೇಹವನ್ನು ಪೋಸ್ಟ್​ಮಾರ್ಟಮ್​ಗೆ ರವಾನೆ ಮಾಡಲಾಗಿದ್ದು ಈ ಬಗ್ಗೆ ಪೊಲೀಸ್ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us