Advertisment

ದರ್ಶನ್ ಕೈಯಲ್ಲಿ ಸಿಗರೇಟ್​, ಟೀ ಕುಡಿಯೋ ಮಗ್ ಜೊತೆ ಬೆಳ್ಳಿ ಕಡಗ; ಸೆಂಟ್ರಲ್ ಜೈಲ್ ಅಂದ್ರೆ ಹೀಗೆನಾ?

author-image
Bheemappa
Updated On
ದರ್ಶನ್ ಕೈಯಲ್ಲಿ ಸಿಗರೇಟ್​, ಟೀ ಕುಡಿಯೋ ಮಗ್ ಜೊತೆ ಬೆಳ್ಳಿ ಕಡಗ; ಸೆಂಟ್ರಲ್ ಜೈಲ್ ಅಂದ್ರೆ ಹೀಗೆನಾ?
Advertisment
  • ಜೈಲಿನಲ್ಲಿ ಕೆಲ ಒಡೆವೆಗಳನ್ನು ಯಾರು ಹಾಕಿಕೊಳ್ಳಬಹುದು ಗೊತ್ತಾ?
  • ದರ್ಶನ್​ಗೆ ಬೆಳ್ಳಿ ಕಡಗ ಹಾಕ್ಕೊಂಡು ಓಡಾಡೋಕೆ ಅವಕಾಶ ಸಿಕ್ಕಿದೆ
  • ಕೈದಿಗಳು ಹಾಕಿಕೊಂಡ ಆಭರಣಗಳನ್ನು ಯಾರಿಗೆ ಕೊಟ್ಟಿರಬೇಕು..?

ಬೆಂಗಳೂರು: ನಟ ದರ್ಶನ್ ಅವರು ಜೈಲಿನಲ್ಲಿರುವ ಫೋಟೋವೊಂದು ವೈರಲ್ ಆಗಿದ್ದು ಸಾಕಷ್ಟು ಅನುಮಾನ ಮೂಡಿಸಿದೆ. ಇದರ ಜೊತೆಗೆ ದರ್ಶನ್ ಅವರ ಕೈಯಲ್ಲಿರುವ ಬೆಳ್ಳಿ ಕಡಗವನ್ನು ತೆಗೆಸದೆ ಜೈಲು ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ರಾ ಎನ್ನುವ ಪ್ರಶ್ನೆ ಮೂಡಿದೆ.

Advertisment

ಇದನ್ನೂ ಓದಿ:ಪರಪ್ಪನ ಜೈಲಿನಿಂದ ಸಸ್ಪೆಂಡ್ ಆದ ಅಧಿಕಾರಿಗಳು ಯಾರು ಯಾರು.. ಗೃಹ ಸಚಿವರು ಹೇಳಿದ ಹೆಸರುಗಳು?

ರೇಣುಕಾಸ್ವಾಮಿ ಕೇಸ್​​ನಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ದರ್ಶನ್ ಅವರು ಜೈಲು ಅನ್ನು ರೆಸಾರ್ಟ್​ ಮಾಡಿಕೊಂಡು ಮಜಾ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಏಕೆಂದರೆ ಜೈಲಿನಲ್ಲಿದ್ದರು ದರ್ಶನ್ ಮನೆಯಲ್ಲಿ ಇರುವಂತೆ ಇದ್ದಾರೆ. ಜೈಲಿಗೆ ಹೋದ ಮೇಲೆ ಯಾವುದೇ ಕೈದಿ ಒಡವೆಗಳನ್ನು ಧರಿಸುವಂತಿಲ್ಲ. ಆದರೆ ದರ್ಶನ್ ಅವರ ಕೈಯಲ್ಲಿ ಬೆಳ್ಳಿ ಕಡಗ ಹಾಗೇ ಇದೆ. ಇದಕ್ಕೆ ಜೈಲು ಅಧಿಕಾರಿಗಳು ಅನುಮತಿ ಕೊಟ್ಟಿದ್ದೇಗೆ?.

ಇದನ್ನೂ ಓದಿ: ಪಾಂಡ್ಯ ಮೇಲೆ ನತಾಶಾ ಆಪ್ತರಿಂದ ಸ್ಫೋಟಕ ಆರೋಪ.. ಸಂಸಾರದ ಹಳಿ ತಪ್ಪಿದ್ರಾ ಸ್ಟಾರ್ ಕ್ರಿಕೆಟರ್​?

Advertisment

publive-image

ಜೈಲಿನಲ್ಲಿ ಮಹಿಳೆಯರಿಗೆ ಮಾತ್ರ ಕೆಲ ಧಾರ್ಮಿಕ ಒಡವೆ ಧರಿಸಲು ಅವಕಾಶವಿದೆ. ಉಳಿದ ಎಲ್ಲ ಒಡವೆಗಳನ್ನು ಜೈಲಿನಲ್ಲಿ ಡೆಪಾಸಿಟ್ ಮಾಡಬೇಕು. ಆದರೆ ಜೈಲಾಧಿಕಾರಿಗಳಿಂದ ಈ ನಿಯಮ ಉಲ್ಲಂಘನೆಯಾಗಿದೆ. ಹೀಗಾಗಿ ದರ್ಶನ್​ಗೆ ಬೆಳ್ಳಿ ಕಡಗ ಹಾಕ್ಕೊಂಡು ಓಡಾಡೋಕೆ ಅವಕಾಶ ಸಿಕ್ಕಿದೆ. ಯಾವುದೇ ನಿಯಮ ಪಾಲಿಸದೆ ದರ್ಶನ್​ಗೆ ಎಲ್ಲ ಅನುಕೂಲ ಮಾಡಿ ಕೊಡಲಾಗಿದೆ.

ಜೈಲಿನಲ್ಲಿ ಚೇರ್ ಪಡೆಯಲು ಮೆಡಿಕಲ್ ಆಫೀಸರ್ ಅನುಮತಿ ಬೇಕು. ಚೇರ್ ಪಡೆಯಲು ಚೀಫ್ ಸುಪರಿಡೆಂಟ್ ಪರ್ಮಿಷನ್ ಕೂಡ ಇರಬೇಕು. ಆದರೆ ಈ ನಿಯಮ ಸಹ ಪಾಲಿಸದೆ ಅವರಿಗೆ ಚೇರ್ ನೀಡಲಾಗಿದೆ. ಕಾಲಿಗೆ ಗುಂಡು ಬಿದ್ದವರಿಗೆ, ಕೈ,ಕಾಲು ಸರಿಯಿಲ್ಲದ ಕೈದಿಗಳಿಗೆ, ವಯಸ್ಸಾದ ಕೈದಿಗಳಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಚೇರ್ ನೀಡಲಾಗುತ್ತದೆ. ಇದಕ್ಕೆ ಜೈಲಿನ ವೈದ್ಯಾಧಿಕಾರಿ ಹಾಗೂ ಜೈಲಿನ ಮುಖ್ಯ ಅಧೀಕ್ಷರ ಅನುಮತಿ ಮೇರೆಗೆ ಚೇರ್ ನೀಡಲಾಗುತ್ತದೆ. ರೌಡಿ ಪಟಾಲಂ ಜೊತೆಗೆ ದರ್ಶನ್ ಸಿಗರೇಟ್ ಪಾರ್ಟಿ ಮಾಡೋಕೆ ಚೇರ್ ಮತ್ತು ಟೇಬಲ್ ಯಾರು ಕೊಟ್ರು ಎನ್ನುವುದು ಮುಖ್ಯ ಪ್ರಶ್ನೆಯಾಗಿದೆ. ಅಲ್ಲದೇ ಇತರೆ ಕೈದಿಗಳಿಗೆ ಸ್ಟೀಲ್ ಲೋಟ ಕೊಟ್ರೆ ದರ್ಶನ್​ಗೆ ಮಾತ್ರ ಕಾಸ್ಟ್ಲಿ ಮಗ್ ಕೊಟ್ಟಿರೋದು ಯಾರು ಎನ್ನುವುದಕ್ಕೆ ಅಲ್ಲಿನ ಅಧಿಕಾರಿಗಳೇ ಉತ್ತರ ನೀಡಬೇಕಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment