Advertisment

ನೀರಜ್ ಚೋಪ್ರಾ, ಮನು ಬಾಕರ್ ಮದುವೆ ಆಗ್ತಾರಾ? ಆತ್ಮೀಯ ಮಾತುಕತೆಯ ವಿಡಿಯೋ ವೈರಲ್!

author-image
admin
Updated On
ನೀರಜ್ ಚೋಪ್ರಾ, ಮನು ಬಾಕರ್ ಮದುವೆ ಆಗ್ತಾರಾ? ಆತ್ಮೀಯ ಮಾತುಕತೆಯ ವಿಡಿಯೋ ವೈರಲ್!
Advertisment
  • ಮನು ಬಾಕರ್ ಜೊತೆ ನೀರಜ್ ಚೋಪ್ರಾ ಆತ್ಮೀಯ ಮಾತುಕತೆ
  • 2028ರ ಒಲಿಪಿಂಕ್ಸ್‌ನಲ್ಲಿ ಈ ಸ್ಟಾರ್‌ ಜೋಡಿ ಚಿನ್ನದ ಪದಕ ಗೆಲ್ಲಲಿ!
  • ಇಬ್ಬರ ಆತ್ಮೀಯ ಮಾತುಕತೆ, ಮದುವೆ ಬಗ್ಗೆ ಕುಟುಂಬಸ್ಥರು ಏನಂದ್ರು?

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 2 ಕಂಚಿನ ಪದಕ ಗೆದ್ದ ಮನು ಬಾಕರ್ ಹಾಗೂ ಜಾವೆಲಿನ್‌ನಲ್ಲಿ ಬೆಳ್ಳಿ ಪದಕ ವಿಜೇತ ನೀರಜ್ ಚೋಪ್ರಾ ಮದುವೆ ಆಗ್ತಾರಾ? ಈ ಇಬ್ಬರು ಆತ್ಮೀಯವಾಗಿ ಮಾತುಕತೆ ನಡೆಸಿರೋ ವಿಡಿಯೋವೊಂದು ಇಂತಹ ಅನುಮಾನಕ್ಕೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರೋ ಈ ಸುದ್ದಿಗೆ ನೀರಜ್ ಚೋಪ್ರಾ ಕುಟುಂಬಸ್ಥರೇ ಸ್ಪಷ್ಟನೆಯನ್ನು ನೀಡಿದ್ದಾರೆ.

Advertisment

ಇದನ್ನೂ ಓದಿ: ಪ್ಯಾರಿಸ್​​ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ 5ನೇ ಪದಕ; ನೀರಜ್ ಚೋಪ್ರಾ ಜಾವೆಲಿನ್ ಎಸೆದ ದೂರ ಎಷ್ಟು..?

publive-image

ವೈರಲ್ ಆದ ವಿಡಿಯೋದಲ್ಲಿ ಮನು ಬಾಕರ್ ಹಾಗೂ ನೀರಜ್ ಚೋಪ್ರಾ ಒಂದೆಡೆ ಸೇರಿ ಚರ್ಚೆ ನಡೆಸಿರುವುದು ನೆಟ್ಟಿಗರ ಗಮನ ಸೆಳೆದಿದೆ. ಇಬ್ಬರ ನಡುವಿನ ಆತ್ಮೀಯ ಮಾತುಕತೆಗೆ ಮನು ಬಾಕರ್ ಅವರ ತಾಯಿ ಕೂಡ ಸಾಕ್ಷಿಯಾಗಿದ್ದಾರೆ. ನೀರಜ್ ಚೋಪ್ರಾ ಜೊತೆ ಮನು ಬಾಕರ್ ತಾಯಿ ಪ್ರೀತಿಯ ಮಗನಂತೆ ಮಾತುಕತೆ ನಡೆಸಿರೋದು ಇಬ್ಬರ ವಿವಾಹದ ಬಗ್ಗೆ ಸಾಕಷ್ಟು ಚರ್ಚೆಯಾಗುವಂತೆ ಮಾಡಿದೆ.

ಇದನ್ನೂ ಓದಿ: ‘ವಿನೇಶ್ ಫೋಗಟ್ ಅನರ್ಹತೆ ನನಗೆ..’ ಬೆಳ್ಳಿಗೆದ್ದ ಹೀರೋ ನೀರಜ್ ಚೋಪ್ರಾ ಫಸ್ಟ್​ ರಿಯಾಕ್ಷನ್..!

Advertisment

ಮನು ಬಾಕರ್ ತಂದೆ ಸ್ಪಷ್ಟನೆ!
ನೀರಜ್ ಚೋಪ್ರಾ ಜೊತೆ ಮದುವೆ ಬಗ್ಗೆ ಚರ್ಚೆಯಾಗುತ್ತಿದ್ದಂತೆ ಮನು ಬಾಕರ್ ತಂದೆ ರಾಮಕಿಶನ್ ಸ್ಪಷ್ಟನೆ ನೀಡಿದ್ದಾರೆ. ಇದೆಲ್ಲವೂ ಸುಳ್ಳು. ಮನು ಬಾಕರ್ ಇನ್ನೂ ಚಿಕ್ಕವಳು. ಮನು ಬಾಕರ್ ತಾಯಿ ನೀರಜ್ ಚೋಪ್ರಾ ಅವರನ್ನು ತನ್ನ ಮಗನಂತೆ ನೋಡಿಕೊಳ್ಳುತ್ತಾರೆ ಎಂದು ಮದುವೆಯ ವದಂತಿಗೆ ತೆರೆ ಎಳೆದಿದ್ದಾರೆ.


">August 12, 2024

26ರ ಚೋಪ್ರಾ 22ರ ಮನು! ನೆಟ್ಟಿಗರ ಲೆಕ್ಕಾಚಾರವೇ ಬೇರೆ!

ನೀರಜ್ ಚೋಪ್ರಾ, ಮನು ಬಾಕರ್ ವಿಡಿಯೋ ನೋಡಿದ ನೆಟ್ಟಿಗರು ಭಾರೀ ಲೆಕ್ಕಾಚಾರ ಹಾಕಿದ್ದಾರೆ. ಸದ್ಯ ನೀರಜ್ ಚೋಪ್ರಾಗೆ 26 ವರ್ಷ, ಮನು ಬಾಕರ್‌ ಅವರಿಗೆ 22 ವರ್ಷ.
ಈ ಜೋಡಿ ಮದುವೆಯಾಗಿ 2028ರ ಒಲಿಪಿಂಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಲಿ. ನೀರಜ್ ಚೋಪ್ರಾ, ಮನು ಬಾಕರ್ ಲವ್‌ ಸ್ಟೋರಿ ಒಂದು ಒಳ್ಳೆಯ ಸಿನಿಮಾ ಆಗಲಿ ಎಂದು ಹಾರೈಸುತ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment