ಜೆಟ್ ಲಾಗ್ ಪಬ್ನಲ್ಲಿ ಮುಂಜಾನೆವರೆಗೂ ಪಾರ್ಟಿ
ಸೆಲೆಬ್ರಿಟಿಗಳ ಪಾರ್ಟಿ ವಿಚಾರವಾಗಿ ನೋಟೀಸ್ ನೀಡುವ ಸಾಧ್ಯತೆ
ಸುಬ್ರಮಣ್ಯನಗರ ಪೊಲೀಸರಿಂದ ಟಾಪ್ ಟೆನ್ ಸೆಲೆಬ್ರಿಟಿಗಳಿಗೆ ನೋಟೀಸ್
ಜೆಟ್ ಲಾಗ್ ಪಬ್ನಲ್ಲಿ ಮುಂಜಾನೆವರೆಗೂ ಸೆಲೆಬ್ರಿಟಿಗಳ ಪಾರ್ಟಿ ಮಾಡಿರುವ ವಿಚಾರವಾಗಿ ನೋಟೀಸ್ ನೀಡಲು ಸುಬ್ರಮಣ್ಯನಗರ ಪೊಲೀಸರು ಮುಂದಾಗಿದ್ದಾರೆ. ದರ್ಶನ್, ರಾಕ್ ಲೈನ್ ವೆಂಕಟೇಶ್, ಅಭಿಷೇಕ್ ಅಂಬರೀಶ್, ಚಿಕ್ಕಣ್ಣ, ಪ್ರಜ್ವಲ್ ದೇವರಾಜ್ ಸೇರಿದಂತೆ ಕೆಲ ಸೆಲೆಬ್ರಿಟಿಗಳಿಗೆ ನೋಟೀಸ್ ನೀಡುವ ಸಾಧ್ಯತೆ ಇದೆ.
ಸೆಲೆಬ್ರಿಟಿಗಳು ರಾತ್ರಿ ಒಂದು ಗಂಟೆ ಬಳಿಕ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದ್ದು, ಹೀಗಾಗಿ ಪಬ್ ಓಪನ್ ಇದ್ದ ಬಗ್ಗೆ ಹೇಳಿಕೆ ದಾಖಲಿಸಿಕೊಳ್ಳಲು ಸುಬ್ರಮಣ್ಯನಗರ ಪೊಲೀಸರು ನೋಟೀಸ್ ನೀಡಲು ಮುಂದಾಗಿದ್ದಾರೆ.
ಸದ್ಯ ಪಾರ್ಟಿಯಲ್ಲಿ ಭಾಗಿಯಾಗಿದ್ದ ಟಾಪ್ ಟೆನ್ ಸೆಲೆಬ್ರಿಟಿಗಳಿಗೆ ನೋಟೀಸ್ ನೀಡಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರು ಬಿ. ದಯಾನಂದ್ ಮಾಹಿತಿ ಹಂಚಿಕೊಂಡಿದ್ದಾರೆ. ಸೆಲೆಬ್ರಿಟಿಗಳಿಗೆ ನೋಟೀಸ್ ನೀಡಿ ಹೇಳಿಕೆ ಪಡೆಯುವಂತೆ ನಗರ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ. ಈಗಾಗಲೇ ಠಾಣೆಯ ಅಧಿಕಾರಿಗೆ ಆಯುಕ್ತರು ಸೂಚಿಸಿದ್ದಾರೆ.
ಪೊಲೀಸರಿಗೆ ನೋಟಿಸ್
ಇದಲ್ಲದೆ, ಆರು ಜನ ಪೊಲೀಸರಿಗೂ ನೋಟೀಸ್ ಕಳುಹಿಸಲಾಗಿದೆ. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಠಾಣಾಧಿಕಾರಿ, ಒಬ್ಬ ಸಬ್ ಇನ್ಸ್ಪೆಕ್ಟರ್ ಹಾಗೂ ನಾಲ್ವರು ಕಾನ್ಸ್ ಟೇಬಲ್ ಗಳಿಗೆ ನೋಟೀಸ್ ಕಳುಹಿಸಲಾಗಿದೆ.
ಮಧ್ಯರಾತ್ರಿ ಒಂದು ಗಂಟೆಗೆ ಅವಧಿ ಮುಗಿದಿದ್ರು 3:15 ರವೆರಗೂ ಪೊಲೀಸರು ಯಾಕೆ ಹೋಗಿರಲಿಲ್ಲ. ಹೊಯ್ಸಳದಿಂದ ಠಾಣೆಗೆ ಪಾರ್ಟಿ ನಡೆಯುವ ಬಗ್ಗೆ ಮಾಹಿತಿ ನೀಡಿಲ್ಲ. ಈ ಎಲ್ಲದರ ಬಗ್ಗೆ ಉತ್ತರ ನೀಡುವಂತೆ ಪೊಲೀಸರಿಗೆ ನೋಟೀಸ್ ಕಳುಹಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ