newsfirstkannada.com

ಪ್ರಯಾಣಿಕರೇ ಹುಷಾರ್​.. ಚಾರ್ಮಾಡಿ ಘಾಟ್​​ನಲ್ಲಿ ಮತ್ತೆ ಬಿರುಕು.. ಭಾರೀ ಅನಾಹುತದ ಆತಂಕ..

Share :

Published July 6, 2024 at 8:40am

    ಪ್ಲಾಸ್ಟಿಂಗ್ ಮಾಡಿ ಬಿರುಕು ಮುಚ್ಚಲು ಮುಂದಾದ ಅಧಿಕಾರಿಗಳು

    2019ರಲ್ಲಿ ಸುರಿದ ಭಾರೀ ಮಳೆಗೆ ಚಾರ್ಮಾಡಿ ಘಾಟ್ ಕುಸಿದಿತ್ತು

    ಚಿಕ್ಕಮಗಳೂರು ಜಿಲ್ಲೆಯ ‌ಮೂಡಿಗೆರೆ ತಾಲೂಕಿನ ಚಾರ್ಮಾಡಿ

ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ರಸ್ತೆಯಲ್ಲಿನ ತಡೆ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಪ್ಲಾಸ್ಟಿಂಗ್ ಕಾರ್ಯ ನಡೆಯುತ್ತಿದೆ. ಬಿರುಕು ಮುಚ್ಚಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ಲಾಸ್ಟಿಂಗ್ ಮಾಡ್ತಿದ್ದು, ಇದು ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ.

2019ರಲ್ಲಿ ಸುರಿದ ಭಾರೀ ಮಳೆಗೆ ಘಾಟ್ ಸುಮಾರು 100 ರಿಂದ 200 ಅಡಿ ಕುಸಿತ ಕಂಡಿತ್ತು. ಆ ಸ್ಥಳದಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಸ್ತೆಯ ಕೆಳಭಾಗದಲ್ಲಿ ಮಣ್ಣು ಕುಸಿಯುತ್ತಿರುವ ಸಾಧ್ಯತೆ ಇದೆ.

ಕಳೆದ ಬಾರಿ ಮಣ್ಣು ಕುಸಿದ ಹಿನ್ನೆಲೆಯಲ್ಲಿ ಕಾಂಕ್ರೀಟ್ ವಾಲ್ ನಿರ್ಮಿಸಿ ರಸ್ತೆಗೆ ಬಂದೋಬಸ್ತ್ ಮಾಡಲಾಗಿತ್ತು. ಆದರೆ ಈ ಕಾಮಗಾರಿ ಕಳಪೆ ಎಂಬ‌ ಗಂಭೀರ ಆರೋಪ ಕೇಳಿಬಂದಿದೆ. ಮೇಲ್ನೋಟಕ್ಕೆ ಪ್ಲಾಸ್ಟಿಂಗ್ ಮಾಡಿ ಬಿರುಕನ್ನು ಮುಚ್ಚಲಾಗುತ್ತಿದೆ. ರಸ್ತೆಯ ಅಡಿಯಲ್ಲಿ ಮಣ್ಣು ಕುಸಿದರೆ ಏನ್ ಕತೆ ಎಂಬ ಪ್ರಶ್ನೆ ಎದ್ದಿದೆ. ಈ ರಸ್ತೆಯು ಚಿಕ್ಕಮಗಳೂರು-ಮಂಗಳೂರು ‌ಸಂಪರ್ಕ ಕೊಂಡಿಯಾಗಿದೆ.

ಇದನ್ನೂ ಓದಿ:ರಿಷಿ ಸುನಕ್ ಭಾಷಣದ ವೇಳೆ ಟ್ರೋಲ್ ಆದ ಪತ್ನಿ ಅಕ್ಷತಾ ಮೂರ್ತಿ.. ಕಾರಣ ಏನು ಗೊತ್ತಾ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಯಾಣಿಕರೇ ಹುಷಾರ್​.. ಚಾರ್ಮಾಡಿ ಘಾಟ್​​ನಲ್ಲಿ ಮತ್ತೆ ಬಿರುಕು.. ಭಾರೀ ಅನಾಹುತದ ಆತಂಕ..

https://newsfirstlive.com/wp-content/uploads/2024/07/CHARMADI-GHAT-4.jpg

Load More