/newsfirstlive-kannada/media/post_attachments/wp-content/uploads/2024/08/Newsfirst-Kannada.jpg)
ಇತ್ತೀಚಿನ ವರ್ಷಗಳಲ್ಲಿ ಸಂತಾನಹೀನತೆ ಹೆಚ್ಚಾಗಿ ಕಾಡುತ್ತಿದೆ. ಇದಕ್ಕೆ ಜೀವನಶೈಲಿ, ಆಹಾರ ಕ್ರಮ ಇತ್ಯಾದಿಗಳು ಪ್ರಮುಖ ಕಾರಣ ಎಂದು ಹೇಳಬಹುದು. ಮಹಿಳೆಯರು ಹಾಗೂ ಪುರುಷರು ಸಮಾನವಾಗಿ ಈ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ. ಹೀಗಾಗಿ ಇದರ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕನ್ನಡದ ಪ್ರತಿಷ್ಠಿತ ಟಿವಿ ಚಾನೆಲ್​​ ನ್ಯೂಸ್​ ಫಸ್ಟ್​ನಿಂದ "ಪಾತ್​​​ ಟೂ ಪೇರೆಂಟ್​​ಹುಡ್ (​​​Path to Parenthood)" ಎಂಬ ಈವೆಂಟ್ ಆಯೋಜನೆ ಮಾಡಲಾಗುತ್ತಿದೆ.
ಇನ್ನು, ಈವೆಂಟ್​ನಲ್ಲಿ ಸಂತಾನಹೀನತೆಗೆ ಅಗತ್ಯ ಚಿಕಿತ್ಸೆ ಏನು? ಆರಂಭಿಕ ಆರೈಕೆ ಹೇಗೆ? ಹಾರ್ಮೋನ್ ಅಸಮತೋಲನ, ಮಹಿಳೆಯರು ಮತ್ತು ಪುರುಷರಲ್ಲಿನ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿರೋ ಸಮಸ್ಯೆ, ಸುರಕ್ಷಿತವಾಗಿ ಮಗು ಪಡೆಯುವುದು ಹೇಗೆ? ಗರ್ಭಧರಿಸುವ ಸಾಧ್ಯತೆ ಹೆಚ್ಚಿಸುವುದು ಹೇಗೆ? ಮಕ್ಕಳು ಮಾಡಿಕೊಳ್ಳಲು ಏನು ಮಾಡಬೇಕು? ಹೀಗೆ ಹಲವು ವಿಚಾರಗಳ ಕುರಿತು 2 ದಿನಗಳ ಮಹತ್ವದ ಚರ್ಚೆ ನಡೆಯಲಿದೆ. ಪಾತ್​​​ ಟೂ ಪೇರೆಂಟ್​​ಹುಡ್ ವಿಶೇಷ ಕಾರ್ಯಕ್ರಮ ಆರೋಗ್ಯ ತಜ್ಞರು ಅಗತ್ಯ ಮಾಹಿತಿಯನ್ನು ನೀಡಲಿದ್ದಾರೆ. ಎಲ್ಲಾ ರೀತಿಯ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ.
/newsfirstlive-kannada/media/post_attachments/wp-content/uploads/2024/08/Newsfirst-Kannada-1.jpg)
2024ರ ಅಕ್ಟೋಬರ್​ ತಿಂಗಳಿನ 19-20ನೇ ತಾರೀಖಿನಂದು ಬೆಂಗಳೂರಿನ ಪ್ಯಾಲೇಸ್​​ ಗ್ರೌಂಡ್​ನಲ್ಲಿರೋ ಗ್ರ್ಯಾಂಡ್​​ ಕ್ಯಾಸಲ್​ನಲ್ಲಿ ಈವೆಂಟ್​ ನಡೆಯಲಿದೆ. ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯುತ್ತಿದೆ.
ಪಾತ್​​​ ಟೂ ಪೇರೆಂಟ್​​ಹುಡ್ ಈವೆಂಟ್​​!
ಈ ವಿಶೇಷ ಸಮಾವೇಶವನ್ನು ಬ್ರ್ಯಾಂಡ್ ​​​ಫಸ್ಟ್​ ಸಂಸ್ಥೆ ಆಯೋಜಿಸಿದ್ದು, ವೈಲಿ ಸಂಸ್ಥೆ ನಾಲೆಡ್ಜ್​ ಪಾರ್ಟ್​​ನರ್​ ಆಗಿದೆ. ಬ್ರ್ಯಾಂಡಿಂಗ್ ಏಜೆನ್ಸಿಯಾಗಿರೋ ಬ್ರ್ಯಾಂಡ್​​ ಫಸ್ಟ್​ ಮತ್ತು ವೈಲಿ (Vyli) ಎಂಬ ಡಿಜಿಟಲ್​ ಹೆಲ್ತ್​ಕೇರ್​​​​ ಪ್ಲಾಟ್​ಫಾರ್ಮ್​​ ಸಹಯೋಗದಲ್ಲಿ ಪಾತ್​​​ ಟೂ ಪೇರೆಂಟ್​​ಹುಡ್ ಈವೆಂಟ್ ಆರ್ಗನೈಜ್​ ಮಾಡಲಾಗುತ್ತಿದೆ.
ಸಂತಾನಹೀನತೆ ಎನ್ನುವುದು ಒಂದು ಗಂಭೀರ ಸಮಸ್ಯೆಯಾಗಿದ್ದು, ದಂಪತಿ ಮಗುವನ್ನು ಪಡೆಯಲು ವಿಫಲವಾಗುತ್ತಿರುವ ಲಕ್ಷಾಂತರ ಪ್ರಕರಣಗಳು ವರದಿಯಾಗುತ್ತಿವೆ. ಈ ಕುರಿತು ಜನರಿಗೆ ಅಗತ್ಯ ಮಾಹಿತಿ ನೀಡುವುದೇ ಸಮಾವೇಶದ ಉದ್ದೇಶವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us