/newsfirstlive-kannada/media/post_attachments/wp-content/uploads/2024/08/TELIGRAM_APP.jpg)
ಟೆಲಿಗ್ರಾಮ್​ನ ಆ್ಯಪ್​ನ ಸಂಸ್ಥಾಪಕ ಹಾಗೂ ಸಿಇಒ ಪಾವೆಲ್ ಡುರೊವ್ ಅವರನ್ನು ಪ್ಯಾರಿಸ್​ನ ಬೋರ್ಗೆಟ್ ವಿಮಾನ ನಿಲ್ದಾಣದ ಬಳಿ ಬಂಧಿಸಲಾಗಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಜೈಲೊಳಗೆ ಬಿಂದಾಸ್ ದರ್ಶನ.. ದುಡ್ಡಿದ್ರೆ ಏನ್ ಬೇಕಾದ್ರೂ ಸಿಗುತ್ತಾ? ಕಷ್ಟಪಟ್ಟು ಅರೆಸ್ಟ್ ಮಾಡಿದ ಪೊಲೀಸ್ ಕಥೆ ಏನು?
ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಯಲು ಯಾವುದೇ ಕ್ರಮ ತೆಗೆದುಕೊಳ್ಳದೆ ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಸಿಇಒ ಪಾವೆಲ್ ಡುರೊವ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಈ ಬಗ್ಗೆ ಪ್ಯಾರಿಸ್ ಸಚಿವಾಲಯದಿಂದ ಸೂಚನೆ ನೀಡಿದ್ದರು ಇದಕ್ಕೆ ಟೆಲಿಗ್ರಾಮ್ ತಕ್ಷಣ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಅವರನ್ನು ಅರೆಸ್ಟ್ ಮಾಡಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ:ಪಾಕಿಸ್ತಾನಕ್ಕೆ ಬಿಗ್ ಶಾಕ್ ಕೊಟ್ಟ ಬಾಂಗ್ಲಾ ಪ್ಲೇಯರ್ಸ್​.. ಐತಿಹಾಸಿಕ ದಾಖಲೆ ಬರೆದ ಆಟಗಾರರು
/newsfirstlive-kannada/media/post_attachments/wp-content/uploads/2024/08/TELIGRAM_APP_1.jpg)
ಸುಮಾರು 900 ಮಿಲಿಯನ್ ಜನರು ಟೆಲಿಗ್ರಾಮ್​ ಅನ್ನು ವಿಶ್ವದ್ಯಾಂತ ಬಳಕೆ ಮಾಡುತ್ತಿದ್ದಾರೆ. ಇದನ್ನು ವಿಶೇಷವಾಗಿ ರಷ್ಯಾ, ಉಕ್ರೇನ್ ಹಾಗೂ ಸೋವಿಯತ್ ಒಕ್ಕೂಟದ ಗಣರಾಜ್ಯಗಳಲ್ಲಿ ಹೆಚ್ಚಾಗಿ ಜನರು ಬಳಕೆ ಮಾಡುತ್ತಿದ್ದಾರೆ. ಭಾರತದಲ್ಲೂ ಟೆಲಿಗ್ರಾಮ್​ ಅಧಿಕ ಸಂಖ್ಯೆಯಲ್ಲಿ ಬಳಸುತ್ತಾರೆ ಎಂದು ಹೇಳಲಾಗುತ್ತಿದೆ.
ಇನ್ನು ಟೆಲಿಗ್ರಾಮ್ ಅನ್ನು 2013ರಲ್ಲಿ ರಷ್ಯಾ ಮೂಲದ ಸಹೋದರರಾದ ನಿಕೊಲಾಯ್ ಮತ್ತು ಪಾವೆಲ್ ಡುರೊವ್ ಲಾಂಚ್ ಮಾಡಿದರು. ಇದೊಂದು ಸೋಶಿಯಲ್ ಮೀಡಿಯಾ ಆ್ಯಪ್​ ಆಗಿದ್ದು ಮೆಸೇಜ್, ವಿಡಿಯೋಸ್, ಫೋಟೋ ಸೇರಿ ಇತರೆ ಮಾಹಿತಿಗಳನ್ನು ಸೆಂಡ್ ಮಾಡಬಹುದು. ಆದರೆ ಸಮಾಜಕ್ಕೆ ಬೇಡವಾದ ಕೆಲ ಸಂದೇಶಗಳನ್ನು ಇದರ ಮೂಲಕ ಕಳುಹಿಸಬಹುದು. ಇದಕ್ಕೆ ಯಾವುದೇ ತಡೆ ಇಲ್ಲ. ಹೀಗಾಗಿಯೇ ಸಿಇಒ ಪಾವೆಲ್ ಡುರೊವ್ ಅವರನ್ನು ಅರೆಸ್ಟ್ ಮಾಡಿದ್ದಾರೆ ಎನ್ನಲಾಗಿದೆ. ಟೆಲಿಗ್ರಾಂ ಸಿಇಒ ಬಂಧನದ ಸುದ್ದಿ ಮುಂದಿನ ದಿನಗಳಲ್ಲಿ ವಿಶ್ವದ ಹಲವು ದೇಶಗಳಲ್ಲಿ ಬ್ಯಾನ್ ಆಗುವ ಮುನ್ಸೂಚನೆಯನ್ನು ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us