ಪವಿತ್ರಾ ಗೌಡ A1, ದರ್ಶನ್ A2; ಚಾಲೆಂಜಿಂಗ್ ಸ್ಟಾರ್‌ ಜೈಲಿಗೆ ಹೋಗೋದು ಪಕ್ಕಾನಾ?

author-image
admin
Updated On
ಪವಿತ್ರಾ ಗೌಡ A1, ದರ್ಶನ್ A2; ಚಾಲೆಂಜಿಂಗ್ ಸ್ಟಾರ್‌ ಜೈಲಿಗೆ ಹೋಗೋದು ಪಕ್ಕಾನಾ?
Advertisment
  • ಕೊಲೆ ಕೇಸ್‌ನಲ್ಲಿ ಪವಿತ್ರಾ ಗೌಡ A1, ನಟ ದರ್ಶನ್ A2, ಪವನ್ A3
  • ಕೆಲವೇ ಕ್ಷಣದಲ್ಲಿ ನಟ ದರ್ಶನ್ ಅವರಿಗೆ ಕಸ್ಟಡಿನಾ? ಅಥವಾ ಜೈಲಾ?
  • ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಬಿಗ್ ಶಾಕ್!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಬಿಗ್ ಶಾಕ್ ಎದುರಾಗಿದೆ. ಈ ಪ್ರಕರಣದ ತನಿಖೆ ನಡೆಸಿದ ಕಾಮಾಕ್ಷಿಪಾಳ್ಯ ಪೊಲೀಸರು ದರ್ಶನ್‌ ಅವರನ್ನು ಜಡ್ಜ್ ಮುಂದೆ ಹಾಜರು ಪಡಿಸುತ್ತಿದ್ದಾರೆ. ಕೆಲವೇ ಕ್ಷಣದಲ್ಲಿ ನಟ ದರ್ಶನ್ ಅವರಿಗೆ ಕಸ್ಟಡಿನಾ? ಅಥವಾ ಜೈಲಾ ಅನ್ನೋದು ನಿರ್ಧಾರವಾಗಲಿದೆ.

publive-image

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ಪವಿತ್ರಾ ಗೌಡ A1, ನಟ ದರ್ಶನ್ A2, ಪವನ್ A3 ಮಾಡಿದ್ದಾರೆ. ಇನ್ನುಳಿದ 10 ಮಂದಿಯನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.

ಇದನ್ನೂ ಓದಿ:ಮರ್ಮಾಂಗಕ್ಕೆ ಹೊಡೆತ, ಮೂಗು ಓಪನ್, ಪಕ್ಕೆಲುಬು ಕಟ್‌; ಅತ್ಯಂತ ಕ್ರೂರವಾಗಿ ರೇಣುಕಾಸ್ವಾಮಿ ಕೊಲೆ! 

ಆರೋಪಿಗಳ ಮೆಡಿಕಲ್ ಚೆಕಪ್ ಮುಗಿಸಿರುವ ಪೊಲೀಸರು ಕೆಲವೇ ಕ್ಷಣದಲ್ಲಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸುವ ನ್ಯಾಯಾಧೀಶರು ನಟ ದರ್ಶನ್ ಹಾಗೂ ಆಪ್ತರ ಕಸ್ಟಡಿ ಅಥವಾ ಜೈಲುವಾಸದ ಬಗ್ಗೆ ಮಹತ್ವದ ಆದೇಶ ನೀಡಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment