newsfirstkannada.com

EXCLUSIVE: ಪ್ಲೀಸ್​​ ಕಣೇ.. ಆ ಫೋಟೋ ಕಳಿಸಲಾ? ರೇಣುಕಾಸ್ವಾಮಿ ಪವಿತ್ರಾಗೆ ಕಳಿಸುತ್ತಿದ್ದ ಮೆಸೇಜ್‌ ಏನೇನು?

Share :

Published September 5, 2024 at 10:51pm

Update September 5, 2024 at 10:57pm

    ಪಟ್ಟಣಗೆರೆ ಶೆಡ್​ನಲ್ಲಿ ಅಂದು ಕೆರಳಿ ಕಾಳಿಯಂತಾಡಿದ್ದು ಏಕೆ ಪವಿತ್ರಾಗೌಡ

    ನಾಲ್ಕು ತಿಂಗಳುಗಳ ಹತಾಶೆ, ರೀಲ್ಸ್ ರಾಣಿಯನ್ನು ಹೆಮ್ಮಾರಿ ರೂಪ ತಾಳಿಸಿತಾ?

    ಆ ಒಂದೇ ಒಂದು ಡೈಲಾಗ್​ ರೇಣುಕಾಸ್ವಾಮಿಯ ಅಂತ್ಯಕ್ಕೆ ಮುನ್ನುಡಿಯಾಯ್ತಾ?

ರೇಣುಕಾಸ್ವಾಮಿ ಬದುಕು ಅಂತ್ಯವಾಗಲು ಪ್ರಮುಖ ಕಾರಣ ಪವಿತ್ರಾಗೌಡ. ಪವಿತ್ರಾಗೌಡ ರಾಕ್ಷಸ ರೂಪ ತಾಳಲು ಮೂಲ ಕಾರಣ ಅವನು ಕಳುಹಿಸಿದ ಮೆಸೇಜ್​​ಗಳು. ಅವು ಒಂದಲ್ಲಾ ಎರಡಲ್ಲ, ಬರೋಬ್ಬರಿ ನಾಲ್ಕು ತಿಂಗಳುಗಳ ಕಾಲ ಸಂದೇಶಗಳನ್ನು ಕಂಡು ನೋಡಿ ರೋಸಿ ಹೋದ ಪವಿತ್ರಾಗೌಡ ಅನ್ನೋ ರೀಲ್ಸ್​ ರಾಣಿಯೊಳಗೆ ಒಬ್ಬ ನರರಾಕ್ಷಸಿ ರೂಪ ಪ್ರವೇಶ ಮಾಡಿಬಿಟ್ಟಿತ್ತು. ಎರಡು ಕೈಗಳಿಂದ ಆದ ಚಪ್ಪಾಳೆಯೇ ಇದು. ಆದ್ರೆ ಯಾರೂ ಕೂಡ ಇಲ್ಲಿ ಸಮರ್ಥನೆಗೆ ನಿಲ್ಲಬಲ್ಲಂತ ಪ್ರಮಾದ ಎಸಗಿಲ್ಲ. ಎರಡು ಬದಿಯಲ್ಲಿ ನಡೆದಿದ್ದು ಪರಮಪಾಪದ ಕೃತ್ಯವೇ
ರೇಣುಕಾಸ್ವಾಮಿಯ ಅಶ್ಲೀಲ ಸಂದೇಶಗಳಿಗೆ ಇನ್​ಸ್ಟಾಗ್ರಾಂ ವೇದಿಕೆ.

ಇದನ್ನೂ ಓದಿ: ದರ್ಶನ್ ಬಚಾವ್ ಆಗೋಕೆ ಚಾನ್ಸೇ ಇಲ್ವಾ? ಡೆವಿಲ್‌ಗೆ ಜೀವಾವಧಿ ಶಿಕ್ಷೆನಾ? ಎಷ್ಟು ವರ್ಷ ಶಿಕ್ಷೆ ಖಾಯಂ?

ರೇಣುಕಾಸ್ವಾಮಿ ಕೊಲೆಯ ಅಧ್ಯಾಯ ಶುರುವಾಗೋದೇ ಪವಿತ್ರಾಗೌಡ ರೀಲ್ಸ್​ ಮೂಲಕ. ಇನ್​ಸ್ಟಾಗ್ರಾಂ ಮೂಲಕ ಪವಿತ್ರಾ ಗೌಡಗೆ ಪದೇ ಪದೇ ಕೆಟ್ಟದಾಗಿ, ಅಸಭ್ಯವಾಗಿ ಮೆಸೇಜ್​ ಮಾಡುತ್ತಿದ್ದ. ನಮ್ಮಣ್ಣ ದರ್ಶನ್​​ ಕುಟುಂಬಕ್ಕೆ ಕೊಳ್ಳಿ ಹಚ್ಚಿದ್ದೇ ನೀನು ಅಂತ ಟೀಕಿಸುತ್ತಿದ್ದ. ಅತ್ಯಂತ ಕೆಟ್ಟದಾದ ಫೋಟೋ ಕಳಿಸಿದ್ದ. ಅಸಹ್ಯವಾಗಿ ಮೆಸೇಜ್​ ಮಾಡುತ್ತಿದ್ದ. ಇದೆಲ್ಲದರ ಕಾರಣಕ್ಕೆ ದರ್ಶನ್​​ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆಸಿ ಪಟ್ಟಣಗೆರೆ ಶೆಡ್​​ನಲ್ಲಿ ಆಟ ಮುಗಿಸಿದ ಅನ್ನೋದು ಈ ಪ್ರಕರಣದ ಒನ್​ ಲೈನ್​​ ಸ್ಟೋರಿ. ಅಸಲಿಗೆ ಇನ್​​ಸ್ಟಾಗ್ರಾಂನಲ್ಲಿ ಇದೇ ರೇಣುಕಾಸ್ವಾಮಿ ಎಂತೆಂಥಾ ಮೆಸೇಜ್​ ಕಳಿಸಿದ್ದ ಗೊತ್ತಾ? ಇನ್​ಸ್ಟಾಗ್ರಾಂ ಚಾಟ್​​ ಬಾಕ್ಸ್​ ಓಪನ್ ಮಾಡಿ ನೋಡಿದ್ರೆ ರೇಣುಕಾಸ್ವಾಮಿ ಎಂಥವನು ಅನ್ನೋ ಚಿತ್ರಣ ಕಣ್ಮುಂದೆ ಬಂದು ನಿಲ್ಲುತ್ತದೆ.

ರೇಣುಕಾಸ್ವಾಮಿ ಮೆಸೇಜ್

ಹಾಯ್ ಕಣೇ
ನಿನ್ನ ನಂಬರ್​ ಸೆಂಡ್​​ ಮಾಡು
ಪ್ಲೀಸ್​​ ಕಣೇ
ಗುಡ್​​ ನೈಟ್​ ಸ್ವೀಟ್​​ ಡ್ರೀಮ್ಸ್​ ಕಣೇ
ವಾಟ್​​ ಯು ಎಕ್ಸ್​​ಪೆಕ್ಟ್​ ಮಿ?
ನೋಡ್ತೀಯಾ ಹೇಳು?
ಕಳಿಸಲಾ ಫೋಟೋ?
ಇದಿಯಾ ಅಂತ ಹೇಳು ಪ್ಲೀಸ್ ಕಣೇ

ಹೀಗೆ, ರೇಣುಕಾಸ್ವಾಮಿ ಖುಲ್ಲಂಖುಲ್ಲಾ ಹೋಗೇ ಬಾರೇ ಕಣೇ ಅಂತ ಕ್ಲೋಸ್​​ ಆಗಿರೋರ ರೀತಿ ಚಾಟ್​ ಆರಂಭಿಸಿದ್ದ. ಪದೇ ಪದೇ ಪವಿತ್ರಾ ಗೌಡಗೆ ತನ್ನಿಂದ ಏನು ಬಯಸುತ್ತೀಯಾ? ಅಂತ ಕೇಳುತ್ತಿದ್ದ. ತನ್ನ ಸ್ಟ್ಯಾಮಿನಾ ಎಂಥದ್ದು ಅನ್ನೋ ಮೆಸೇಜ್​ ಕೂಡ ಕೊಡ್ತಿದ್ದ. ಇಷ್ಟು ಮೆಸೇಜ್​ ನೋಡಿದರೇ ಸಾಕು ರೇಣುಕಾಸ್ವಾಮಿ ರೀಲ್ಸ್​ ನೋಡಿದ ಉನ್ಮಾದದಲ್ಲಿ ಪವಿತ್ರಾ ಗೌಡಳನ್ನ ಗರ್ಲ್​​ ಫ್ರೆಂಡ್​ ಅಂದ್ಕೊಂಡಿದ್ದ ಅನಿಸುತ್ತೆ. ಇದು ಜಸ್ಟ್​ ಸ್ಯಾಂಪಲ್​​. ಇದಕ್ಕಿಂತ್ಲೂ ಕೆಳ ದರ್ಜೆಯ ಮಸೇಜ್​ಗಳನ್ನು ರೇಣುಕಾಸ್ವಾಮಿ ಪವಿತ್ರಾ ಗೌಡಳಿಗೆ ಕಳಿಸಿದ್ದಾನೆ.

ರೇಣುಕಾಸ್ವಾಮಿ ಮೆಸೇಜ್
ವಾವ್ ಸೂಪರ್ಬ್‌ ಬ್ಯೂಟಿ
ಸಖತ್​ ಆಗಿ ಇದ್ದೀಯಾ ಕಣೆ

ಇವನು ರೇಣುಕಾಸ್ವಾಮಿಯೋ? ಚಪಲಸ್ವಾಮಿಯೋ? ಅನ್ನೋ ಡೌಟ್​ ಬರೋ ಮಟ್ಟಿಗೆ ಪವಿತ್ರಾ ಗೌಡಗೆ ಅನುದಿನವೂ ಟಾರ್ಚರ್​ ಮಾಡಿದ್ದಾನೆ ರೇಣುಕಾಸ್ವಾಮಿ. ನೋಡಿ, ವಾವ್ ಸೂಪರ್ಬ್ ಬ್ಯೂಟಿ ಎನ್ನುತ್ತಲೇ ಶುರುವಾಗುವ ಚಾಟ್​​ ಕೊನೆಯಾಗೋದು ಬೇರೆಯದ್ದೇ ಸಾಲಿನಿಂದ. ಇಲ್ಲಿ ನಾವೊಂದು ಮೆಸೇಜ್​ ತೆಗೆದುಬಿಟ್ಟಿದ್ದೀವಿ. ಕಾರಣ ಹೇಳೋಕೂ ಆಗದಷ್ಟು ಅಸಹ್ಯವಾಗಿದೆ ಕೊನೆಯ ಮೆಸೇಜ್​​. ಇಷ್ಟಕ್ಕೇ ಪವಿತ್ರಾ ಗೌಡ ರೊಚ್ಚಿಗೆದ್ರಾ? ದರ್ಶನ್​​ ಅಂಡ್​ ಗ್ಯಾಂಗ್​ ಕೊಲ್ಲುವ ಮಟ್ಟಕ್ಕೆ ಬಂದುಬಿಡ್ತಾ? ಇದಕ್ಕಿಂತ್ಲೂ ಹೆಚ್ಚು ಉರಿ ತರಿಸೋ ಚಾಟ್​ ಮತ್ತೊಂದಿದೆ. ಅಸಲಿಗೆ ಇಲ್ಲಿಂದೀಚೆಗೆ ರೇಣುಕಾಸ್ವಾಮಿ ಫೋನ್ ನಂಬರ್​ ಕೊಟ್ಟು ಸಿಕ್ಕಿ ಹಾಕಿಕೊಳ್ಳುವುದು.

ರೇಣುಕಾಸ್ವಾಮಿ ಮೆಸೇಜ್

ಪವಿತ್ರಾ ಗೌಡ : ಡ್ರಾಪ್ ಮಿ ಯೂವರ್​ ನಂಬರ್

ರೇಣುಕಾಸ್ವಾಮಿ : ನಿನ್ನ ನಂಬರ್​ ಸೆಂಡ್​ ಮಾಡು, ಪ್ಲೀಸ್​ ಕಣೇ.

ಪವಿತ್ರಾ ಗೌಡ : 9XXXXXXXX7. ಪ್ಲೀಸ್​ ಕಾಲ್ ಆನ್​ ದಿಸ್

ರೇಣುಕಾಸ್ವಾಮಿ : ಓಕೆ ಥ್ಯಾಂಕ್ಸ್​ ಕಣೇ. ಅದು ನಿಜವಾಗಿಯೂ ನಿನ್ನ ನಂಬರಾ? ಹೇಳು.

ಪವಿತ್ರಾ ಗೌಡ : ಯೆಸ್​​ ಕಾಲ್ ಮಿ.

ಸುಮಾರು ನಾಲ್ಕು ತಿಂಗಳ ಕಾಲ ತನ್ನ ಕೆಟ್ಟ ಮೆಸೇಜ್​ಗಳ, ಅಶ್ಲೀಲ ಫೋಟೋಗಳ ಮೂಲಕ ಪವಿತ್ರಾ ಗೌಡಗೆ ಚಿತ್ರಹಿಂಸೆಯನ್ನೇ ನೀಡಿದ್ದ ರೇಣುಕಾಸ್ವಾಮಿ. ಈ ವಿಚಾರವನ್ನು ಪವನ್​​ ಬಳಿ ಪವಿತ್ರಾ ಗೌಡ ಹೇಳಿಕೊಂಡಿದ್ದಳು. ಬಳಿಕ ​​ಪ್ಲಾನ್ ಪ್ರಕಾರವೇ ರೇಣುಕಾಸ್ವಾಮಿಯನ್ನು ಖೆಡ್ಡಾಕ್ಕೆ ಕೆಡವೋ ಲೆಕ್ಕಾಚಾರ ನಡೆದಿತ್ತು. ಹಾಗಾಗಿಯೇ ಪವಿತ್ರಾ ಗೌಡ, ರೇಣುಕಾಸ್ವಾಮಿಗೆ ರಿಪ್ಲೆ ಮಾಡಿ ಫೋನ್ ನಂಬರ್​ ಕೇಳಿದ್ದಳು. ಈ ಸಂದರ್ಭವೂ ರೇಣುಕಾಸ್ವಾಮಿ, ಇದು ನಿನ್ನದೇ ನಂಬರಾ? ನಿಜಾನಾ? ಅಂತ ಕನ್ಫರ್ಮ್ ಮಾಡಿಕೊಂಡಿದ್ದ. ಬಳಿಕ ಹೌದು ಇದು ನನ್ನದೇ ನಂಬರ್​ ಕಾಲ್ ಮಾಡು ಅಂತ ಹೇಳಿದ್ದ ಪವಿತ್ರಾ ಗೌಡ ಮೆಸೇಜ್​​ ಬಳಿಕ ರೇಣುಕಾಸ್ವಾಮಿ ಕೊಲೆಯ ರಕ್ತಸಿಕ್ತ ಚರಿತ್ರೆಯ ಮುನ್ನುಡಿ ಬರೆದಾಗಿತ್ತು. ಅಷ್ಟಕ್ಕೂ ರೇಣುಕಾಸ್ವಾಮಿಯನ್ನ ಬಲೆಗೆ ಕೆಡವಿದ್ದು ಹೇಗೆ ಅನ್ನೋದು ತಿಳಿಯೋದಕ್ಕೂ ಮೊದಲು ಆವತ್ತು ಪಟ್ಟಣಗೆರೆಯ ಶೆಡ್​ನಲ್ಲಿ ಪವಿತ್ರಾ ಅಕ್ಷರಶಃ ಭದ್ರಕಾಳಿಯಾದ ಕಥೆ ಹೇಳಲೇಬೇಕು.

ಇದನ್ನೂ ಓದಿ: ಮಗನ ಕಳೆದುಕೊಂಡಿದ್ದು ರೇಣುಕಾಸ್ವಾಮಿ ಹೆತ್ತವರಷ್ಟೇ ಅಲ್ಲ.. ದರ್ಶನ್‌ನಿಂದ ಅನಾಥರಾದ ತಾಯಂದಿರೆಷ್ಟು?

ರಾಕ್ಷಸಿ ರೌದ್ರರೂಪ, ಚಪ್ಪಲಿ ಕೈಗೆತ್ತಿಕೊಂಡವಳು ಮಾಡಿದ್ದೇನು? 
ಅಂದುಕೊಂಡಂತೆ ರೇಣುಕಾಸ್ವಾಮಿಯನ್ನ ಪಟ್ಟಣಗೆರೆಯ ಶೆಡ್​ಗೆ ಕಿಡ್ನ್ಯಾಪ್​ ಆಗುವಂತೆ ಮಾಡ್ತಾಳೆ ಪವಿತ್ರಾ ಗೌಡ. ರೇಣುಕಾಸ್ವಾಮಿಯನ್ನ ಶೆಡ್‌ಗೆ ಕರೆದುಕೊಂಡು ಬಂದಿರೋ ವಿಷಉ ತಿಳಿಯುತ್ತಿದ್ದಂತೆ ದರ್ಶನ್ ತನ್ನ ಗೆಳತಿ ಪವಿತ್ರಾಳನ್ನು ಕರೆದುಕೊಂಡು ಬಂದಿದ್ದ. ಬಂದ ಬಂದವನೇ ರೇಣುಕಾಸ್ವಾಮಿ ಎದೆಗೆ ಒದ್ದ ದರ್ಶನ್ ‘ಕೇಳೋ.. ಕ್ಷಮೆ ಕೇಳೋ, ಮೆಸೇಜ್ ಮಾಡಿದ್ದು ತಪ್ಪಾಯ್ತು ಅಂತ ಕ್ಷಮೆ ಕೇಳೋ.’ ಅಂತ ವ್ಯಾಘ್ರನಂತೆ ಎರಗಿದ್ದ. ಅದಾದ ಬಳಿಕ ಕೆರಳಿ ನಿಂತವಳು ಪವಿತ್ರಾ ಗೌಡ. ರೇಣುಕಾಸ್ವಾಮಿ ನೋಡಿ ಬೆಂಕಿಯುಂಡೆಯಂತೆ ಕುದಿಯುತ್ತಿದ್ದ ಪವಿತ್ರಾ ಗೌಡ ಬಾಯಿಂದ ಬಂದಿದ್ದು ಒಂದೇ ಮಾತು. ನಿನ್ನ ಮುಗಿಸಲು ಕಾಯ್ತಿದ್ದೆ ಕಣೋ ಅನ್ನೋದು.

ಇದನ್ನೂ ಓದಿ: ಬೇಡಿದರೂ, ಕಾಡಿದರೂ ವಾಪಸ್ ಬರ್ತಾನಾ.. ಮಗನ ಫೋಟೋ ನೋಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ-ತಾಯಿ ಹೇಳಿದ್ದೇನು?

ನಿನ್ನ ಮುಗಿಸಲು ಕಾಯ್ತಿದ್ದೆ ಕಣೋ ಎಂದು ಬಾಯ್ತೆರೆದವಳ ಕೈ ಕಾಲಿನತ್ತ ಹೋಗಿತ್ತು. ಲಕ್ಷುರಿ ಸ್ಲಿಪ್ಪರ್ ಕೈಗೆತ್ತಿಕೊಂಡವಳೇ ರೇಣುಕಾಸ್ವಾಮಿ ಮುಖಕ್ಕೆ ಮೈಮೇಲೆ ದೆವ್ವ ಬಂದವಳಂತೆ ಥಳಿಸತೊಡಗಿದ್ಲು. ಅದಾಗಲೇ, ಪಾಪಿಗಳ ಕೈನಿಂದ ಅಮಾನುಷವಾಗಿ ಥಳಿತಕ್ಕೊಳಗಾಗಿದ್ದ ಸ್ವಾಮಿ ಮುಖದ ತುಂಬೆಲ್ಲಾ ನೆತ್ತರು ತೊಟ್ಟಿಕ್ಕುತ್ತಿತ್ತು. ಆ ನೆತ್ತರು ನೋಡಿ ತಣ್ಣಗಾಗಬೇಕಿದ್ದ ರಾಕ್ಷಸಿ ಪವಿತ್ರಾಳ ಕ್ರೌರ್ಯ ಮತ್ತಷ್ಟು ಹೆಚ್ಚಾಗಿತ್ತು. ಚಪ್ಪಲಿ ತುಂಬೆಲ್ಲಾ ರಕ್ತ ಮೆತ್ತಿಕೊಳ್ಳುವಂತೆ ಬಾರಿಸತೊಡಗಿದ್ದಳು.

ಸ್ವಾಮಿಗೆ ಚಪ್ಪಲಿಯಿಂದ ಹೊಡೆಯುತ್ತಲೇ ‘ಖಾಸಗಿ ಅಂಗಾಂಗದ ಫೋಟೋ ಕಳುಹಿಸ್ತೀಯಾ. ನಿನ್ನ ಕಥೆ ಮುಗಿಸ್ತೀನಿ ನೋಡ್ತಿರು’ ಅಂತಾ ಪವಿತ್ರಾ ಗೌಡ ಕಿರುಚಾಡಿದ್ದಷ್ಟೇ ಅಲ್ಲದೆ. ಆಕೆ ಬಾಯಿಂದ ಮತ್ತೊಂದು ಮಾತು ಬಂದಿತ್ತು. ಅದನ್ನು ಕೇಳಿ ಪಕ್ಕದಲ್ಲೇ ನಿಂತಿದ್ದ ದರ್ಶನ್ ಅಕ್ಷರಶಃ ಸೈತಾನರೂಪ ತಾಳಿದ್ದ.

‘ನನ್ನ ರೇಟ್ ಕೇಳ್ತೀಯೇನೋ?’ ಇದೇ, ಇದೇ ಮಾತು ಪವಿತ್ರಾಳ ಬಾಯಿಂದ ಬಂದಿತ್ತು. ಅಶ್ಲೀಲ ಮೆಸೇಜ್ ಮಾಡ್ತಿದ್ದ ರೇಣುಕಾಸ್ವಾಮಿ ನಿನ್ ರೇಟೆಸ್ಟು ಅಂತ ಕೇಳಿದ್ನಂತೆ. ದರ್ಶನ್‌ಗಿಂತ ನಾನು ಸ್ಟ್ರಾಂಗ್ ಅಂತಲೂ ಹೇಳಿ ಮಜಾ ತಗೊಂಡಿದ್ದನಂತೆ. ಮೂರು ತಿಂಗಳು ಸ್ವಾಮಿಯ ಮೆಸೇಜ್‌ಗಳಿಂದ ಅನುಭವಿಸಿದ ಮಾನಸಿಕ ಕಿರುಕುಳದ ಒಂದು ಕ್ಷಣ ರಪ್ಪಂತ ಕಣ್ಮುಂದೆ ಹಾದುಹೋಯ್ತು ಅನ್ಸತ್ತೆ. ಆತ ಮಾಡಿದ್ದ ಮೆಸೇಜ್‌ಗಳನ್ನೆಲ್ಲಾ ಒಂದೇ ಸಮನೆ ಹೇಳುತ್ತಾ ಕೋಪ, ರೋಷದಿಂದ ಕುದಿಯತೊಡಗಿದ್ಲು. ಅಷ್ಟೇ, ಪವಿತ್ರಾ ಬಾಯಿಂದ ಯಾವಾಗ ರೇಟಿನ ಮ್ಯಾಟ್ರು ಬಂತೋ. ನುಗ್ಗಿ ಬಂದವನು ಕಿರಾತಕ ದರ್ಶನ್!

ಇವನನ್ನ ಕೊಂದು ಬಿಸಾಕಿ ಎಂದು ಕೂಗಿದ ಪವಿತ್ರಾ ಗೌಡ!?
ಖಾಸಗಿ ಅಂಗದ ಫೋಟೋ ಕಳುಹಿಸ್ತೀಯಾ? ರೇಟು ಕೇಳ್ತೀಯಾ? ಎಂದು ಕೂಗುತ್ತಾ ತನ್ನ ಮುದ್ದು ಕೈಗಳಿಂದಲೇ ಚಪ್ಪಲಿ ಏಟು ಕೊಟ್ಟು ಸ್ವಾಮಿ ಮರಣಕ್ಕೆ ಮುನ್ನುಡಿ ಬರೆದ ಪವಿತ್ರಾ ಗೌಡ. ಎಲ್ಲರನ್ನೂ ಮತ್ತಷ್ಟು ಕೆರಳಿಸಿದ್ದರು. ಪವಿತ್ರಾಳ ಮಾತು ಕೇಳಿ ದರ್ಶನ್ ಕೂಡ ರೊಚ್ಚಿಗೆದ್ದಿದ್ದ. ಕೊಲ್ರೋ, ಕೊಂದು ಬಿಸಾಕ್ರೋ ಅಂತಾ ಪವಿತ್ರಾ ಕೂಗುತ್ತಲೇ ಇದ್ದರು ಅಷ್ಟೇ, ಕೊನೆಗೆ ಆಕೆ ಅಂದುಕೊಂಡಂತೆಯೇ ಆಗೋಯ್ತು

ಬಹುಶಃ ಅಂದು ಪವಿತ್ರಾ ಗೌಡ ನಾಲ್ಕು ಮಾತು ಬೈದು, ನಾಲ್ಕೇಟು ಹೊಡೆದು ಕೋಪ ತಣಿಸಿಕೊಂಡು ಸುಮ್ನೆ ಆಗಿದ್ದಿದ್ರೆ. ಆ ಡಿಗ್ಯಾಂಗ್ ಪಾಪಿಗಳೂ ಕೂಡ ಮೆತ್ತಗಾಗಿ ಸ್ವಾಮಿಯನ್ನ ಬಿಟ್ಟುಬಿಡ್ತಿದ್ರೋ ಏನೋ? ಆದರೆ, ನರರೂಪದ ರಕ್ಕಸಿ ಪವಿತ್ರಾ ಗೌಡ ಕೊಲ್ಲಿ ಕೊಲ್ಲಿ ಕೊಲ್ಲಿ ಅಂತ ಮೇಲಿಂದ ಮೇಲೆ ಕೂಗುತ್ತಾ.. ಎಲ್ಲರ ತಲೆಯಲ್ಲೂ ಕೊಲೆಯ ವಿಷಬೀಜ ಬಿತ್ತಿಬಿಟ್ಟಿದ್ಲು. ದರ್ಶನ್ ಕೂಡ ಪವಿತ್ರಾಳ ಚಪ್ಪಲಿ ತೆಗೆದುಕೊಂಡು ರೇಣುಕಾಸ್ವಾಮಿಗೆ ಥಳಿಸಿದ್ದ. ಆ ಸಣಕಲು ದೇಹದವನನ್ನು ಮೇಲಕ್ಕೆತ್ತಿ ಲಾರಿಗೆ ಬಟ್ಟೆ ಒಗೆದಂಗೆ ಒಗೆದಿದ್ದ. ತಲೆಕೂದಲು ಹಿಡಿದು ಲಾರಿಗೆ ಗುದ್ದಿದ್ದ. ಇತ್ತ, ಎಲ್ಲವನ್ನೂ ನೋಡ್ತಿದ್ದ ಪವಿತ್ರಾ ಅಕ್ಷರಶಃ ಚಿಯರ್‌ಲೀಡರ್‌ರಂತೆ ಹುರಿದುಂಬಿಸ್ತಿದ್ಲು ಅಂದ್ರೆ ಆಕೆ ಅದಿನ್ನೆಷ್ಟು ಕ್ರೂರ ಮನಸ್ಸಿನವಳು ಅಂತಾ ಯೋಚಿಸಿ

ಪಾಪಿಗಳ ಕೈಗೆ ಸಿಲುಕಿ ತತ್ತರಿಸಿದ ಸ್ವಾಮಿಗೆ ತನ್ನ ಪ್ರಾಣ ಹೋಗೋ ಸುಳಿವು ಸಿಗ್ತೋ ಏನೋ.. ‘ನನ್ನ ಬಿಟ್ಟುಬಿಡಿ, ಕ್ಷಮಿಸಿ’ ಅಂತಾ ಅಂಗಲಾಚಿ ಬೇಡತೊಗಡಿದ್ದ. ಆದ್ರೆ, ಪವಿತ್ರಾಳ ಮನಸ್ಸು ಕರಗಲೇ ಇಲ್ಲ, ಬದಲಾಗಿ ಮತ್ತಷ್ಟು ಕೆರಳಿತ್ತು. ಆ ಕ್ಷಣದಲ್ಲಿ ಅದೊಂದು ಕ್ಷಣದಲ್ಲಿ ಹೋಗ್ಲಿ ಬಿಡ್ರೋ ಎಂಬ ಮಾತು ಬಂದಿದ್ರೂ ಸಾಕಿತ್ತೇನೋ.. ಇಂದು, ಸ್ವಾಮಿ ಸಾಯ್ತಾ ಇರ್ಲಿಲ್ಲ.. ಸ್ವಾಮಿ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಾ ಇರ್ಲಿಲ್ಲ. ಈ ಪಾಪಿ ದರ್ಶನ್ ಮತ್ತು ಪವಿತ್ರಾ ಜೈಲೂಟ ಮಾಡ್ಕೊಂಡು ತಲೆ ತಲೆ ಚಚ್ಚಿಕೊಳ್ಳೋ ಪರಿಸ್ಥಿತಿಯೇ ಬರ್ತಾ ಇರ್ಲಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

EXCLUSIVE: ಪ್ಲೀಸ್​​ ಕಣೇ.. ಆ ಫೋಟೋ ಕಳಿಸಲಾ? ರೇಣುಕಾಸ್ವಾಮಿ ಪವಿತ್ರಾಗೆ ಕಳಿಸುತ್ತಿದ್ದ ಮೆಸೇಜ್‌ ಏನೇನು?

https://newsfirstlive.com/wp-content/uploads/2024/09/Renukaswamy-Pavithra-gowda.jpg

Load More