newsfirstkannada.com

ದರ್ಶನ್ ಬಚಾವ್ ಆಗೋಕೆ ಚಾನ್ಸೇ ಇಲ್ವಾ? ಡೆವಿಲ್‌ಗೆ ಜೀವಾವಧಿ ಶಿಕ್ಷೆನಾ? ಎಷ್ಟು ವರ್ಷ ಶಿಕ್ಷೆ ಖಾಯಂ?

Share :

Published September 5, 2024 at 8:41pm

    ಅವರ ಕೈಲ್ಲಿದೆ ದರ್ಶನ್​ ಭವಿಷ್ಯ! ಆ 3 ವಸ್ತುಗಳಿಂದ ನಟನಿಗೆ ಕುಣಿಕೆ!

    ನಟ ದರ್ಶನ್​ಗೆ ಏನ್​ ಶಿಕ್ಷೆ ಆಗುತ್ತೆ, ಎಷ್ಟು ವರ್ಷ ಜೈಲಲ್ಲಿ ಇರಬಹುದು?

    ಎಷ್ಟೇ ಸರ್ಕಸ್ ಮಾಡಿದ್ರು ಕೇಸ್​ ಗೆಲ್ಲೋಕೆ ದರ್ಶನ್ ವಕೀಲರಿಗೆ ಆಗಲ್ವಾ?

ವಕೀಲರ ಪ್ರಚಂಡ ವಾದದ ಬಲದಿಂದ ದರ್ಶನ್ ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ತಾರಾ? ಎಲ್ಲಾ ಆರೋಪ, ಸಾಕ್ಷಿಗಳು ದರ್ಶನ್ ವಿರುದ್ಧವೇ ಇರುವಾಗ ದರ್ಶನ್‌ರನ್ನು ಪಾರು ಮಾಡೋಕೆ ಲಾಯರ್ ಬೆಂಕಿ ಪ್ಲಾನ್ ಹುಡುಕಿದ್ದಾರಾ? ತನಿಖೆ ಮಾಡಿ, ಸಾಕ್ಷಿಗಳನ್ನು ಕಲೆ ಹಾಕಿ ಚಾರ್ಜ್‌ಶೀಟ್ ಸಲ್ಲಿಸಿರೋ ಪೊಲೀಸರ ಆಟ ಮುಗೀತು. ಇನ್ನೇನಿದ್ರೂ ವಕೀಲರ ಕೈಯಲ್ಲಿದೆ ರೇಣುಕಾಸ್ವಾಮಿ ಕೇಸ್‌ ಭವಿಷ್ಯ. ಕೋರ್ಟ್‌ನಲ್ಲಿ ಇನ್ನು ಮುಂದೆ ನಡೆಯೋದು ಡೆಡ್ಲಿ ಕಾನೂನು ಕಾಳಗ. ದಾಸನಿಗೆ ಜೀವಾವಧಿ ಶಿಕ್ಷೆ ಆಗುತ್ತಾ? ಕೇಸ್‌ನಿಂದ ಪಾರಾಗೋ ಕದನ ಎಂಬ ರಣರೋಚಕ ಸ್ಟೋರಿ ಇಲ್ಲಿದೆ.

ಇದನ್ನೂ ಓದಿ: ದರ್ಶನ್​​ ಭೇಟಿ ಮಾಡಲು ಬಳ್ಳಾರಿ ಜೈಲಿಗೆ ಬಂದ ಪತ್ನಿ ವಿಜಯಲಕ್ಷ್ಮಿ.. ಕೈಯಲ್ಲಿ ಇದ್ದಿದ್ದು ಏನು?

ವಿಷ ಕುಡಿದು.. ಡಾಕ್ಟರ್​​ನ ಶಿಕ್ಷೆಯಿಂದ ಪಾರು ಮಾಡಿಸಿದ

ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಯುದ್ಧಕಾಂಡ ಸಿನಿಮಾ ಎಲ್ಲರಿಗೂ ಗೊತ್ತೇ ಇದೆ. ವೈದ್ಯರೊಬ್ಬರಿಗೆ ಆಗದವರು ರೋಗಿಗೆ ಕೊಡೋ ಔಷಧಿಯನ್ನ ಬದಲಿಸಿ ವಿಷದ ಬಾಟಲ್ ಇಟ್ಟಿರ್ತಾರೆ. ಆ ಸಂಚು ಗೊತ್ತಿಲ್ಲದ ಡಾಕ್ಟರ್ ಆ ವಿಷದ ಬಾಟಲ್​​ನ ಔಷಧಿ ಅನ್ಕೊಂಡು ರೋಗಿಗೆ ಕೊಟ್ಟುಬಿಡ್ತಾನೆ. ರೋಗಿ ಸತ್ತೋಗ್ತಾನೆ. ಕೊಲೆ ಕೇಸ್ ವೈದ್ಯನ ತಲೆ ಮೇಲೆ ಬರುತ್ತೆ. ಆಗ ವೈದ್ಯನನ್ನು ಕೇಸ್‌ನಿಂದ ಪಾರುಮಾಡಲು ಎಂಟ್ರಿ ಆಗೋದು ಲಾಯರ್‌ ಪಾತ್ರಧಾರಿ ನಟ ರವಿಚಂದ್ರನ್.

ಡಾಕ್ಟರ್ ರೋಗಿಯೊಬ್ಬನಿಗೆ ನೀಡಿದ್ದ ಬಾಟಲ್‌ನಲ್ಲಿ ವಿಷ ಇದ್ದದ್ದೂ ನಿಜ. ಆ ವಿಷದಿಂದಲೇ ರೋಗಿ ಸಾವನ್ನಪ್ಪಿದ್ದೂ ನಿಜ. ಬಟ್, ನ್ಯಾಯಾಲಯ ನೋಡೋದು ಇದನ್ನಷ್ಟೇ, ಡಾಕ್ಟರ್ ವಿರುದ್ಧ ಯಾರೋ ಸಂಚು ಮಾಡಿದ್ದಾರೆ ಸ್ವಾಮಿ ಔಷಧಿ ಬಾಟಲ್ ತೆಗೆದು ವಿಷದ ಬಾಟಲ್ ಇರಿಸಿದ್ದಾರೆ ಅಂತಾ ವಾದಿಸಿದ್ರೆ.. ಕೋರ್ಟ್ ಸಾಕ್ಷಿ, ಪುರಾವೆ ಕೇಳುತ್ತೆ. ಅದು ಸಿಗಲಿಲ್ಲ ಅಂದ್ರೆ, ಮುಗೀತು ಕಥೆ. ಹಾಗಾಗೀನಿ, ಯುದ್ಧಕಾಂಡ ಸಿನ್ಮಾದಲ್ಲಿ ಲಾಯರ್ ಪಾತ್ರಧಾರಿ ರವಿಚಂದ್ರನ್ ಈ ಪ್ಲಾನ್ ಮಾಡ್ತಾರೆ. ತಪ್ಪೇ ಮಾಡದ ವೈದ್ಯನನ್ನು ಕೇಸ್‌ನಿಂದ ಪಾರು ಮಾಡೋಕೆ ಆ ಬಾಟಲ್‌ನಲ್ಲಿರೋದು ವಿಷವೇ ಅಂತ ಪ್ರೂವ್ ಮಾಡ್ತಾರೆ. ತಾನೇ ಆ ಬಾಟಲ್‌ನಲ್ಲಿರೋ ವಿಷ ಕುಡಿದು ತನಗೇನು ಆಗಿಲ್ಲ ಎಂದು ವಾದಿಸಿ ಕೇಸ್ ಗೆಲ್ತಾನೆ.

ಯುದ್ಧಕಾಂಡ ಸಿನಿಮಾದಲ್ಲಿ ನಡೆದಂತೆ ವಾದ ನಡೆಯುತ್ತಾ?

ಇಷ್ಟೆಲ್ಲಾ ಪೀಠಿಕೆ ಯಾಕಾಗಿ ಅಂತಿದ್ದೀರಾ? ಇಂದು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿರೋ ದರ್ಶನ್‌ ಕೇಸ್‌ನಲ್ಲಿ ಚಾರ್ಜ್‌ಶೀಟ್‌ನಲ್ಲಿ ಸಲ್ಲಿಕೆಯಾಗಿದ್ದು ಕೆಲವೇ ದಿನಗಳಲ್ಲಿ ಕೋರ್ಟ್‌ನಲ್ಲಿ ವಾದ-ಪ್ರತಿವಾದ ಆರಂಭವಾಗ್ಲಿದೆ. ಯುದ್ಧಕಾಂಡ ಸಿನಿಮಾದಲ್ಲಿ ನಡೆದಂತೆಯೇ ರಣರೋಚಕ ವಾದ-ಪ್ರತಿವಾದ ನಡೆಯೋದು ನಿಕ್ಕಿಯಾಗಿದೆ.

ಯುದ್ಧಕಾಂಡ ಸಿನಿಮಾದಲ್ಲಿ ವೈದ್ಯನ ವಿರುದ್ಧವೇ ಪ್ರತಿಯೊಂದು ಸಾಕ್ಷಿಗಳಿದ್ದವು. ಕೇಸ್‌ನಿಂದ ವೈದ್ಯ ಪಾರಾಗೋಕೆ ಸಾಧ್ಯವಿಲ್ಲ ಎಂಬಂತೆ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಬಟ್, ವಕೀಲ ಪಾತ್ರಧಾರಿ ರವಿಚಂದ್ರನ್ ಮಾತ್ರ ತಮ್ಮ ಪ್ರಚಂಡ ತಲೆ ಓಡಿಸಿ ಕೇಸ್ ಗೆದ್ದುಕೊಟ್ರು. ಅಲ್ಲಿದ್ದದ್ದು ವಿಷವೇ.. ಬಟ್, ವಿಷ ಕುಡಿದ ಬಳಿಕ ಎಂಟತ್ತು ನಿಮಿಷ ದೇಹದಲ್ಲಿ ಯಾವುದೇ ಪರಿಣಾಮ ಉಂಟಾಗೋಲ್ಲ. ಇದನ್ನೇ ಪ್ಲಸ್ ಮಾಡ್ಕೊಂಡ ರವಿಚಂದ್ರನ್ ವಿಷ ಕುಡಿದು ಅದು ವಿಷವೇ ಅಲ್ಲ ಅಂತ ಪ್ರೂವ್ ಮಾಡೋದ್ರಲ್ಲಿ ಸಕ್ಸಸ್ ಆಗ್ತಾರೆ. ನಾವಿಷ್ಟೂ ಹೊತ್ತು ತೋರಿಸಿದ ದೃಶ್ಯದ ಒನ್ ಲೈನ್ ಏನ್ ಗೊತ್ತಾ? ಎಂಥಾ ಬಿಗಿಯಾದ ಕೇಸ್‌ನಲ್ಲೂ ಲಾಯರ್ ಮನಸ್ಸು ಮಾಡಿದ್ರೆ ಕೇಸನ್ನೇ ಉಲ್ಟಾ ಪಲ್ಟಾ ಮಾಡಿಬಿಡ್ಬೋದು ಅನ್ನೋದು. ಹಾಗಾದ್ರೆ, ಎಲ್ಲಾ ಸಾಕ್ಷಿಗಳು, ಪುರಾವೆಗಳು ದರ್ಶನ್ ವಿರುದ್ಧ ಇರುವಾಗಲೂ ದಾಸ ಬಚಾವಾಗಿಬಿಡ್ತಾರಾ? ಲಾಯರ್ ತಲೆ ಓಡಿಸಿ ದರ್ಶನ್‌ ಪಾರು ಮಾಡ್ತಾರಾ?

ಇದನ್ನೂ ಓದಿ: ಪ್ರತೀಕಾರ ತೀರಿಸಿಕೊಳ್ಳಲು ರೀತಿ ನೀತಿ ಬೇರೆ ಇವೆ.. ದರ್ಶನ್​ ಬಗ್ಗೆ ಉಮಾಪತಿಗೌಡ ಖಡಕ್ ಮಾತು; ಏನಂದ್ರು?

ರೇಣುಕಾಸ್ವಾಮಿ ಬೇಡಿಕೊಂಡ ಫೋಟೋ ಸ್ಫೋಟ, ಈಗ ಅಸಲಿ ಆಟ!

ಭರ್ತಿ 3991 ಪುಟ. ದಿನಕ್ಕೆ ಹತ್ತತ್ತು ಪುಟ ಓದಿದ್ರೂನು ಕಂಪ್ಲೀಟ್ ಮಾಡೋಕೆ ಒಂದು ವರ್ಷ ಬೇಕು. ಅಂಥಾ ಗಜಗಾತ್ರದ ಚಾರ್ಜ್‌ಶೀಟ್ ಅನ್ನ ರೀಲ್ ಗಜ, ಮತ್ತವನ ಗ್ಯಾಂಗ್ ವಿರುದ್ಧ ಸಲ್ಲಿಸಲಾಗಿದೆ. ಕೆಲವೇ ದಿನಗಳಲ್ಲಿ ಈ ಕೇಸ್‌ಗೆ ಸಂಬಂಧಪಟ್ಟಂತೆ ದರ್ಶನ್ ಪರ ವಕೀಲರು ಮತ್ತು ಸರ್ಕಾರದ ಪರ ವಕೀಲರ ನಡುವಿನ ವಾದ-ಪ್ರತಿವಾದದ ರಣರಂಗಕ್ಕೆ ಕೋರ್ಟ್ ಸಾಕ್ಷಿಯಾಗಲಿದೆ. ಹಾಗಾದ್ರೆ, ಈ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಬಚಾವಾಗೋಕೆ ಸಾಧ್ಯನಾ? ಲಾಯರ್ ವಾದದ ಮೇಲೆಯೇ ಎಲ್ಲರ ನಸೀಬು ನಿರ್ಧಾರವಾಗುತ್ತಾ? ದಾಸನಿಗೆ ಬೇಲ್‌ ಸಿಗೋಕೆ ಇನ್ನೆಷ್ಟು ದಿನ, ಅಲ್ಲಲ್ಲ ತಿಂಗಳು ಬೇಕು?. ಕಟಕಟೆಯಲ್ಲಿ ನಿಲ್ಲಲಿರೋ ಕಾಟೇರನಿಗೆ ಶಿಕ್ಷೆ ಆದ್ರೆ ಎಷ್ಟು ವರ್ಷ ಜೈಲೂಟ? ಈ ಪ್ರಶ್ನೆಗಳಿಗೆ ಉತ್ತರ ನೀಡಲಿರೋ ಥ್ರಿಲ್ಲಿಂಗ್ ಸ್ಟೋರಿಯ ಫಸ್ಟ್ ಸೀನ್ ತೆರೆದುಕೊಳ್ಳೋದು.. ದರ್ಶನ್‌ಗೆ ಬೇಲ್ ಸಿಗುತ್ತಾ? ಇಲ್ವಾ ಎಂಬ ವಾದ-ಪ್ರತಿವಾದದಿಂದ!.

ಕೇಸ್‌ನ ವಿಚಾರಣೆ, ವಾದ-ಪ್ರತಿವಾದ ಶುರುವಾಗೋಕು ಮೊದಲು ನಡೆಯೋ ಕಾನೂನು ಕಾಳಗ ಬೇಲ್‌ಗೆ ಸಂಬಂಧಪಟ್ಟದ್ದು. ಇನ್ನೇನು ಕೆಲವು ದಿನಗಳಲ್ಲಿ ದರ್ಶನ್ ಬೇಲ್‌ಗೆ ಅರ್ಜಿ ಹಾಕಲಿದ್ದಾರೆ. ಚಾರ್ಜ್‌ಶೀಟ್ ಸಲ್ಲಿಕೆಯಾಗಲಿ ಅಂತಾ ಭಕಪಕ್ಷಿಯಂತೆ ಕಾಯ್ತಿದ್ದ ದರ್ಶನ್‌ ಈಗ ಬೇಲ್‌ಗೆ ಅರ್ಜಿ ಹಾಕೋದಕ್ಕೆ ಸಿದ್ಧವಾಗಿದ್ದಾರೆ. ಒಂದೊಮ್ಮೆ, ದರ್ಶನ್ ಬೇಲ್‌ಗೆ ಅರ್ಜಿ ಹಾಕಿದ್ರೂ ಕನಿಷ್ಠ ಆರೇಳು ತಿಂಗಳು ಜಾಮೀನು ರೂಪದ ಜಾಮೂನು ಸಿಗಲ್ಲ ಅಂತ ನಿವೃತ್ತ ಪೊಲೀಸ್ ಅಧಿಕಾರಿ ಮೋಹನ್ ಹೇಳಿದ್ದಾರೆ.

ಅಂಗಲಾಚೋ ಸ್ಥಿತಿ ದರ್ಶನ್‌ಗೆ ಬಂದೇ ಬರುತ್ತೆ

ಆರೇಳು ತಿಂಗಳು ದಾಸ ಬೇಲ್‌.. ಬೇಲ್.. ಅಂತಲೇ ಜಪ ಮಾಡ್ತಾ ಕೂತಿರೋ ದುಸ್ಥಿತಿ ಬರುತ್ತೆ ಅನ್ನೋದು ಹಿರಿಯ ಪೊಲೀಸ್ ಅಧಿಕಾರಿ ತೆರೆದಿಟ್ಟಿರೋ ಸತ್ಯ. ಅಷ್ಟೇ ಅಲ್ಲ, ಸ್ಥಳೀಯ ನ್ಯಾಯಾಲಯಗಳಲ್ಲಿ ಖಂಡಿತವಾಗಿಯೂ ದರ್ಶನ್‌ಗೆ ಬೇಲ್ ಸಿಗಲ್ವಂತೆ. ಮೊದಲೇ ಕೊಲೆ ಕೇಸ್‌. ಜೊತೆಯಲ್ಲಿ, ಚಾರ್ಜ್‌ಶೀಟ್‌ನಲ್ಲಿರೋ ಅಂಶಗಳು ಕೂಡ ದರ್ಶನ್‌ ಬೇಲ್ ಕನಸಿಗೆ ಕೊಳ್ಳಿಯಿಡುತ್ವೆ. ಹಾಗಾಗಿ, ಹೈಕೋರ್ಟ್‌ಗೆ ಹೋಗಿ ಬೇಲ್ ಕೊಡಿ ಯುವರ್ ಹಾನರ್ ಅಂತ ಅಂಗಲಾಚೋ ಸ್ಥಿತಿ ದರ್ಶನ್‌ಗೆ ಬಂದೇ ಬರುತ್ತೆ. ಬರಲೇಬೇಕು ಅನ್ನೋದು ಚಾರ್ಜ್‌ಶೀಟ್‌ನಲ್ಲಿರೋ ಅಂಶಗಳನ್ನು ಗಮನಿಸಿರೋ ಕಾನೂನು ಪಂಡಿತರ ವಾದ.

ಹಾಗಂತ.. ಕೋರ್ಟ್‌ನಲ್ಲಿ ದರ್ಶನ್ ವಕೀಲರೇನು ಸುಮ್ನಿರ್ತಾರಾ? ಬೇಲ್ ಕೊಡಿಸೋದಕ್ಕೆ ಬೇಕಾದಂತಾ ಲಾ ಪಾಯಿಂಟ್‌ಗಳನ್ನ ಹಾಕಿ ವಾದ ಮಾಡಿಯೇ ಮಾಡ್ತಾರೆ. ದರ್ಶನ್‌ಗೆ ಕಾಯಿಲೆ ಇದೆ, ಮಗನಿದ್ದಾನೆ. ಪತ್ನಿ ಒಬ್ಬರೇ ಇರ್ತಾರೆ. ಬೇಲ್ ಕೊಟ್ಟರೆ ಕೇಸ್‌ಗೆ ಯಾವುದೇ ಸಮಸ್ಯೆ ಆಗೋದಿಲ್ಲ ಎಂಬುದನ್ನ ಕೋರ್ಟ್‌ನಲ್ಲಿ ಮನದಟ್ಟು ಮಾಡಿಕೊಡೋಕೆ ಟ್ರೈ ಮಾಡ್ತಾರೆ. ಅಂತಿಮವಾಗಿ ವಾದ-ಪ್ರತಿವಾದ ಆಲಿಸಿದ ಬಳಿಕ ದಾಸನ ಬೇಲ್ ಹಣೆಬರಹ ಬರೆಯಲಿರೋದು ಕಾನೂನಿನ ಟೆಂಪಲ್ ಕೋರ್ಟ್!

ಬಿಗಿ ಚಾರ್ಜ್‌ಶೀಟ್.. ದರ್ಶನ್‌ಗೆ ಕನಿಷ್ಠ 10 ವರ್ಷ ಶಿಕ್ಷೆ ಖಾಯಂ!?

3991 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಅಂಶಗಳನ್ನು ನೋಡ್ತಿದ್ರೆ ದರ್ಶನ್‌ಗೆ ಜೀವಾವಧಿ ಶಿಕ್ಷೆಯಾಗೋದು ನಿಶ್ಚಿತ ಅಂತಾ ಕಾನೂನು ಪಂಡಿತರು ಹೇಳ್ತಿದ್ದಾರೆ. ಇಂಥಾ ನೂರಾರು ಕೇಸ್‌ಗಳನ್ನು ನೋಡಿರೋ ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತೊಂದು ಶಾಕಿಂಗ್ ವಿಚಾರ ಹೊರಗೆಡವಿದ್ದಾರೆ ಎನ್ನಲಾಗಿದೆ. ಜೀವಾವಧಿ ಶಿಕ್ಷೆ ಆಗದಿದ್ರೂ ದಾಸ ಕನಿಷ್ಠ 10 ವರ್ಷ ಜೈಲೂಟ ಮಾಡಲೇಬೇಕಾದ ಸ್ಥಿತಿ ಬರುತ್ತೆ ಎಂದಿದ್ದಾರೆ.

ಇದನ್ನೂ ಓದಿ: ಬಿಗ್‌ಬಾಸ್ ಸೀಸನ್‌ 11ಕ್ಕೆ ಕಿಚ್ಚ ಸುದೀಪ್‌ ಆ್ಯಂಕರಿಂಗ್ ಮಾಡ್ತಾರೋ, ಇಲ್ವೋ? ಇಲ್ಲಿದೆ ಪಕ್ಕಾ ಮಾಹಿತಿ! 

ರೇಣುಕಾಸ್ವಾಮಿ ಪ್ರೊವೋಕ್ ಅಸ್ತ್ರ ಏನು?.

ಬಟ್, ದರ್ಶನ್ ಪರ ವಕೀಲರು ಈ ಕೇಸ್‌ ಗೆಲ್ಲೋದಕ್ಕೆ ತಮ್ಮದೇ ರೀತಿಯಲ್ಲಿ ವಾದ ಮಂಡಿಸ್ತಾರೆ. ಅದೇ ಅವರ ಕೆಲಸ. ಅಕಸ್ಮಾತ್, ಈ ಕೇಸ್‌ ಗೆಲ್ಲೋಕೆ ಆಗೋದಿಲ್ಲ. ದರ್ಶನ್‌ರನ್ನು ಬಚಾವು ಮಾಡೋಕೆ ಆಗೋದೇ ಇಲ್ಲ ಅಂತ ಅನ್ನಿಸಿದ್ರೆ ಅಂತಿಮವಾಗಿ ಒಂದು ಲಾ ಪಾಯಿಂಟ್ ಹಾಕಿ ದರ್ಶನ್‌ರ ಶಿಕ್ಷೆಯ ಪ್ರಮಾಣ ಕಡಿಮೆ ಮಾಡಿಸೋಕೆ ಪ್ರಯತ್ನಿಸೋ ಸಾಧ್ಯತೆಗಳಿವೆ. ಅದುವೇ ರೇಣುಕಾಸ್ವಾಮಿ ಪ್ರೊವೋಕ್ ಅಸ್ತ್ರ.

ರೇಣುಕಾಸ್ವಾಮಿ ಮೇಲಿಂದ ಮೇಲೆ ಅಶ್ಲೀಲ ಮೆಸೇಜ್ ಮಾಡಿ ದರ್ಶನ್‌ರನ್ನು ಪ್ರೊವೋಕ್ ಮಾಡ್ತಿದ್ದ. ಆ ಕೋಪಕ್ಕೆ ದರ್ಶನ್ ತನ್ನ ಸಹಚರರ ಜೊತೆ ಸೇರಿ ವಾರ್ನಿಂಗ್ ಕೊಡಲು ಮುಂದಾದಾಗ ಸ್ವಾಮಿ ಸತ್ತೋಗಿದ್ದು, ಇದು ಉದ್ದೇಶಪೂರ್ವಕ ಅಲ್ಲ ಅಂತಾ ವಾದಿಸಬಹುದು. ಈ ವಾದ ಕೋರ್ಟ್‌ನಲ್ಲಿ ನಿಲ್ಲುತ್ತಾ ಎಂಬ ಪ್ರಶ್ನೆ ಮೂಡಬಹುದು.

ಹೌದು, ಪ್ರವೋಕ್ ಮಾಡಿದ ಹಾಗಾಗಿ ತಿರುಗಿ ಹೊಡೆದೆವು.. ಸತ್ತೋಗಿಬಿಟ್ಟ ಎಂಬೆಲ್ಲಾ ವಾದಗಳು ಕೋರ್ಟ್‌ನಲ್ಲಿ ನಿಲ್ಲೋದಿಲ್ಲ. ಯಾಕಂದ್ರೆ, ಸ್ವಾಮಿಗೆ ಚಿತ್ರಹಿಂಸೆ ಕೊಟ್ಟಿರೋದಕ್ಕೆ ಅನೇಕ ಸಾಕ್ಷಿಗಳು ಸಿಕ್ಕಿವೆ. ಈ ಕೇಸ್‌ನಲ್ಲಿ ದರ್ಶನ್‌ಗೆ ಜೀವಾವಧಿ ಶಿಕ್ಷೆಯಾಗೋ ಸಾಧ್ಯತೆಗಳು ಹೆಚ್ಚಾಗಿವೆ ಎನ್ನಲಾಗಿದೆ.

ಇದನ್ನೂ ಓದಿ: ವಾಶ್ ಮಾಡಿದ್ದ ದರ್ಶನ್‌ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆ; ಏನಿದು ಲುಮಿನಲ್ ಟೆಸ್ಟ್‌?

ಜೀವಾವಧಿ ಶಿಕ್ಷೆಯಾಗೋಕೆ ಪ್ರಮುಖ ಸಾಕ್ಷಿಯಾಗಿದ್ದೇ ಕೂದಲು

ಬೆವರು, ಕೂದಲು ಮತ್ತು ರಕ್ತದ ಸ್ಯಾಂಪಲ್‌.. ಈ ಮೂರು ವಸ್ತುಗಳೇ ದರ್ಶನ್‌ಗೆ ಜೀವಾವಧಿ ಶಿಕ್ಷೆಗೆ ಗುರಿಪಡಿಸುತ್ವೆ ಅನ್ನೋದು ಕಾನೂನು ಪಂಡಿತರ ಅಭಿಪ್ರಾಯ. ಹಿಂದೆ, ಮಂಟೆ ಲಿಂಗಯ್ಯ ಕೇಸ್‌ನಲ್ಲಿ ಜೀವಾವಧಿ ಶಿಕ್ಷೆಯಾಗೋಕೆ ಪ್ರಮುಖ ಸಾಕ್ಷಿಯಾಗಿದ್ದೇ ಕೂದಲು. ಹತ್ತಾರು ಬೇರೆ ಬೇರೆ ಸಾಕ್ಷಿಗಳಿದ್ದವಾದ್ರೂ ಕೂದಲು ಸ್ಯಾಂಪಲ್ ಆರೋಪಿ ಇವನೇ ಅನ್ನೋದನ್ನ ಬೊಟ್ಟು ಮಾಡಿ ತೋರಿಸಿತ್ತು. ಇಲ್ಲಿ, ದರ್ಶನ್‌ಗೆ ಕೇವಲ ಕೂದಲಷ್ಟೇ ಅಲ್ಲ.. ಬೆವರು ಮತ್ತು ಬ್ಲಡ್ ಸ್ಯಾಂಪಲ್ ಕೂಡ ಕಾನೂನು ಖೆಡ್ಡಾ ತೋಡಲು ರೆಡಿಯಾಗಿವೆ. ಅಲ್ಲಿಗೆ, ದಾಸ ಜೀವಾವಧಿ ಶಿಕ್ಷೆಗೆ ಗುರಿ ಆಗಬೇಕಾಗುತ್ತೆ ಅನ್ನೋದು ಕಾನೂನು ಪಂಡಿತರ ವಾದ.

ಇದೆಲ್ಲವೂ ಸರ್ಕಾರ ಪರ ವಕೀಲರ ವಾದವಾಗುತ್ತೆ. ಬಟ್, ದರ್ಶನ್ ಪರ ವಕೀಲರು ಇದಕ್ಕೆಲ್ಲಾ ಕೌಂಟರ್‌ ಲಾ ಪಾಯಿಂಟ್‌ಗಳನ್ನು ರೆಡಿ ಮಾಡಿಕೊಂಡೇ ಬಂದಿರ್ತಾರೆ. ಸಿಕ್ಕಿರೋ ಸಾಕ್ಷಿಗಳೆಲ್ಲ ಸುಳ್ಳು.. ದರ್ಶನ್‌ ಕೊಲೆ ಮಾಡಿರೋದಕ್ಕೆ ಸಾಕ್ಷಿಗಳೆ ಇಲ್ಲ ಎಂಬುದನ್ನೂ ಸಾಬೀತು ಮಾಡೋಕೂ ತಮ್ಮ ಪ್ರಚಂಡ ತಲೆ ಓಡಿಸೋದು ನಿಶ್ಚಿತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್ ಬಚಾವ್ ಆಗೋಕೆ ಚಾನ್ಸೇ ಇಲ್ವಾ? ಡೆವಿಲ್‌ಗೆ ಜೀವಾವಧಿ ಶಿಕ್ಷೆನಾ? ಎಷ್ಟು ವರ್ಷ ಶಿಕ್ಷೆ ಖಾಯಂ?

https://newsfirstlive.com/wp-content/uploads/2024/07/Darshan-Highcourt.jpg

Load More