/newsfirstlive-kannada/media/post_attachments/wp-content/uploads/2024/06/PAVITRA-GWODA-1.jpg)
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟಿ ಪವಿತ್ರ ಗೌಡ ಅರೆಸ್ಟ್ ಆಗಿದ್ದಾರೆ. ಪ್ರಕರಣದ ಮೊದಲ ಆರೋಪಿ ಆಗಿರುವ ಪವಿತ್ರ ಗೌಡ, ತೀವ್ರ ತನಿಖೆ ಎದುರಿಸುತ್ತಿದ್ದಾರೆ.
ಪೊಲೀಸರ ತನಿಖೆ ವೇಳೆ ಪ್ರಕರಣಕ್ಕೆ ಸಂಬಂಧಿಸಿ ಕೆಲವು ಸತ್ಯಗಳನ್ನು ಬಾಯಿಬಿಟ್ಟಿರುವ ಪವಿತ್ರ ಗೌಡ.. ನನಗೆ ಕೊಲೆಯಾದ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಮಾಡುತ್ತಿದ್ದ. ಮರ್ಮಾಂಗದ ಫೋಟೋವನ್ನೂ ಕಳುಹಿಸಿದ್ದ. ಇದಕ್ಕೆ ನಾನು ಮನೆ ಕೆಲಸದವ ಪವನ್ಗೆ ಹೇಳಿದ್ದೆ. ಪವನ್ ಅವರು ದರ್ಶನ್ಗೆ ಮಾಹಿತಿ ನೀಡಿದ ಪರಿಣಾಮ ಯಡವಟ್ಟು ಆಗಿದೆ. ಅವರು ಸಾಯಿಸುತ್ತಾರೆ ಅನ್ಕೊಂಡಿರಲಿಲ್ಲ. ಎಚ್ಚರಿಕೆ ಕೊಟ್ಟು ಕಳುಹಿಸುತ್ತಾರೆ ಅಂದ್ಕೊಂಡೆ. ಹೀಗೆಲ್ಲ ಆಗುತ್ತೆ ಅಂತಿದ್ದರೆ ನಾನೇ ಪೊಲೀಸರಿಗೆ ದೂರು ನೀಡುತ್ತಿದ್ದೆ ಎಂದು ಪೊಲೀಸರ ಮುಂದೆ ಕಣ್ಣೀರು ಇಡುತ್ತಿದ್ದಾಳೆ.
ಇದನ್ನೂ ಓದಿ:ದರ್ಶನ್ ಸಿಕ್ಕಿದ್ಮೇಲೆ ಪವಿತ್ರಾ ಕೋಟಿ ಕುಳ.. ಹತ್ತು ವರ್ಷ.. ಹೇಗಿದ್ದಳು..? ಹೇಗಾದಳು..?
ಇತ್ತ ಪವಿತ್ರಗೌಡ ಬಗ್ಗೆ ಮಾಜಿ ಪತಿ ಸಂಜಯ್ ಸಿಂಗ್ ಕೂಡ ಮಾತನಾಡಿದ್ದಾರೆ. ಅತ್ತೆ ಮಾವನ ಬಳಿ ನನ್ನ ಮಗಳಿದ್ದರೆ, ಆಕೆ ಜೊತೆಗೆ ಮಾತನಾಡುತ್ತೇನೆ. ಆದರೆ ಈ ಘಟನೆ ಆದ ಬಳಿಕ ನಾನು ಮಾತನಾಡಲು ಹೋಗಿಲ್ಲ. ಆಕೆಯ ಪರಿಸ್ಥಿತಿ ನನಗೆ ಗೊತ್ತಿರೋದ್ರಿಂದ ಈ ಸಮಯದಲ್ಲಿ ಮಾತನಾಡಿ ಅವರಿಗೆ ಡಿಸ್ಟರ್ಬ್ ಮಾಡಲ ನನಗೆ ಮನಸಿಲ್ಲ. ಅವಳಿಗೆ ಕೋಪ ಬಂದರೆ ಅವಳು ಏನು ಮಾಡುತ್ತಾಳೋ ಅವಳಿಗೇ ಗೊತ್ತಿಲ್ಲ. ಈಗ ಪವಿತ್ರಾ ಗೌಡ ಈ ಕೊಲೆ ಮಾಡಿದ್ದಾಳೆ ಅಂದರೆ ನಾನು ನಂಬಲ್ಲ. ಈ ಕೃತ್ಯ ನಡೆದ ಸಮಯದಲ್ಲಿ ಅವರ ಪತಿ ದರ್ಶನ್ ಜೊತೆಗೆ ಪವಿತ್ರಾ ಇದ್ದಿರಬಹುದು. ಆಕೆ ತುಂಬಾ ಸ್ಟ್ರಾಂಗ್ ಜತೆಗೆ ಅಷ್ಟೇ ಕೋಪಿಷ್ಠೆ ಕೂಡ ಹೌದು. ಸಿಟ್ಟು ಬಂದರೆ ಅವಳು ಏನು ಮಾಡ್ತಾಳೆ ಅಂತ ಅವಳಿಗೂ ಗೊತ್ತಿಲ್ಲ ಎಂದು ಮಾಜಿ ಪತಿ ಸಂಜಯ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ:‘ನೀನ್ಯಾರು? ನಿನ್ ಕಥೆ ಎಲ್ಲಾ ಗೊತ್ತು..’ ಬಂಧನದ ವೇಳೆ ಖಡಕ್ ಅಧಿಕಾರಿ ದರ್ಶನ್ಗೆ ಕೊಟ್ಟ ವಾರ್ನಿಂಗ್ ಏನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ