newsfirstkannada.com

ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿಯನ್ನು ನೋಡಿ ಗಳಗಳನೇ ಅತ್ತ ಪವನ್ ಕಲ್ಯಾಣ; ಏನಾಯ್ತು?

Share :

Published January 22, 2024 at 5:01pm

Update January 22, 2024 at 5:02pm

    ‘ಅಯೋಧ್ಯೆಯಲ್ಲಿ ನಾನು ಇವತ್ತು ತುಂಬಾ ಎಮೋಷನಲ್ ಆಗಿದ್ದೆ’

    ದೈವಿಕ ನಗರಿಯಲ್ಲಿ ರಾಮಲಲ್ಲಾ ಮೂರ್ತಿಯ ಅಮೋಘ ದರ್ಶನ

    ನನಗೆ ಗೊತ್ತಲ್ಲದೇ ಕಣ್ಣೀರು ಸುರಿಸುತ್ತಾ ಇದ್ದೆ ಎಂದ ಪವನ್ ಕಲ್ಯಾಣ್

ಅಯೋಧ್ಯೆ: ಕೋಟ್ಯಾನುಕೋಟಿ ಭಾರತೀಯರ ಶತ, ಶತಮಾನಗಳ ಕನಸು ನನಸಾಗಿದೆ. ರಾಮಜನ್ಮಭೂಮಿಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯು ನಿರ್ವಿಘ್ನವಾಗಿ ನೆರವೇರಿದೆ. ರಾಮಮಂದಿರ ಉದ್ಘಾಟನೆಯ ಇಂದು ದೈವಿಕ ನಗರಿ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ದೇಶದ ಮೂಲೆ, ಮೂಲೆಯಿಂದ ಆಗಮಿಸಿದ ಚಲನಚಿತ್ರ ನಟರು, ಗಣ್ಯಾತಿಗಣ್ಯರು ಶ್ರೀರಾಮನ ಆಶೀರ್ವಾದ ಪಡೆದಿದ್ದಾರೆ. ನಾಳೆಯಿಂದ ಸಾಮಾನ್ಯ ಜನರಿಗೆ ಅಯೋಧ್ಯೆ ರಾಮನ ದರ್ಶನ ಭಾಗ್ಯ ಸಿಗಲಿದೆ.

ರಾಮಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ನಟ, ರಾಜಕಾರಣಿ ಪವನ್ ಕಲ್ಯಾಣ್ ಅವರು ಇಂದು ಅಯೋಧ್ಯೆಗೆ ಭೇಟಿ ನೀಡಿದರು. ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಂಡ ಪವನ್ ಕಲ್ಯಾಣ್ ಭಾವುಕರಾಗಿದ್ದು, ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: VIDEO: ರಾಮಲಲ್ಲಾ ಪ್ರತಿಷ್ಠಾಪನೆ; ಜೈ ಶ್ರೀರಾಮ್​​.. ಜೈ ಶ್ರೀರಾಮ್​​ ಎಂದು ಸಂಭ್ರಮಿಸಿದ ನಟಿ ಕಂಗನಾ

ಅಯೋಧ್ಯೆಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಪವನ್ ಕಲ್ಯಾಣ್ ಅವರು ನಾನು ಇವತ್ತು ತುಂಬಾ ಎಮೋಷನಲ್ ಆಗಿದ್ದೆ. ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಆಗುವ ಸಮಯದಲ್ಲಿ ನನಗೆ ಗೊತ್ತಲ್ಲದೇ ಕಣ್ಣೀರು ಸುರಿಸಿದ್ದೇನೆ ಎಂದರು. ಇಡೀ ದೇಶದ ಒಗ್ಗಟ್ಟಿನ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

ರಾಮಮಂದಿರ ಕಟ್ಟಬೇಕು ಅನ್ನೋದು ಹಲವು ಶತಮಾನಗಳ ಹೋರಾಟದ ಕನಸು. ಆ ಕನಸು, ನೋವಿಗೆ ಸಾರ್ಥಕತೆ ಸಿಕ್ಕಿದ್ದು, ಇಂದು ಭಾರತ ದೇಶದ ಒಗ್ಗಟ್ಟಿನ ಪ್ರದರ್ಶನವಾಗಿದೆ. ದಕ್ಷಿಣ ಭಾರತೀಯರು ತಿರುಮಲಗೆ ಹೋಗುವ ಹಾಗೆ ಇನ್ಮುಂದೆ ಅಯೋಧ್ಯೆಗೂ ಭಕ್ತರು ಆಗಮಿಸುತ್ತಾರೆ. ನಾನು ಅಯೋಧ್ಯೆಗೆ ಮತ್ತೆ ಬರುತ್ತೇನೆ. ಮುಂದಿನ ದಿನಗಳಲ್ಲಿ ನಾನು ಕೂಡ ಅಯೋಧ್ಯೆಗಾಗಿಯೇ ಏನಾದ್ರೂ ಮಾಡುತ್ತೇನೆ ಎಂದು ಪವನ್ ಕಲ್ಯಾಣ್ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿಯನ್ನು ನೋಡಿ ಗಳಗಳನೇ ಅತ್ತ ಪವನ್ ಕಲ್ಯಾಣ; ಏನಾಯ್ತು?

https://newsfirstlive.com/wp-content/uploads/2024/01/Pawan-Kalyan.jpg

Load More