newsfirstkannada.com

ರಾಜ್ಯದ ಹಲವೆಡೆ ಇಂದು ಧಾರಾಕಾರ ಮಳೆ; ಆಲಿಕಲ್ಲು ನೋಡಿ ಜನರು ಸಂತಸ; ಎಲ್ಲೆಲ್ಲಿ ವರುಣಾರ್ಭಟ?

Share :

Published May 7, 2024 at 3:12pm

    ಭಾರೀ ಆಲಿಕಲ್ಲು ಮಳೆಗೆ ಕಾಫಿ ನಾಡು ಫುಲ್ ಕೂಲ್.. ಕೂಲ್‌!

    ಬಿಸಿಲಿಗೆ ಬೆಂದು ಹೋಗಿದ್ದ ಚಿಕ್ಕಮಗಳೂರು ನಗರಕ್ಕೆ ವರುಣನ ಕೃಪೆ

    ರಾಜ್ಯದ ಹಲವೆಡೆ ಇಂದಿನಿಂದ ಗುಡುಗು, ಸಿಡಿಲು ಸಮೇತ ಭಾರೀ ಮಳೆ

ಚಿಕ್ಕಮಗಳೂರು: ಬೆಂಕಿ ಬಿಸಿಲಿಗೆ ಬೆಂದು ಹೋಗಿದ್ದ ರಾಜ್ಯದ ಜನತೆಗೆ ಕೊನೆಗೂ ವರುಣನ ಕೃಪೆಯಾಗಿದೆ. ಕಳೆದೆರಡು ದಿನದಿಂದ ರಾಜ್ಯದ ಹಲವೆಡೆ ವರ್ಷಧಾರೆಯಾಗಿದ್ದು, ಇಂದೂ ಧಾರಾಕಾರ ಮಳೆ ಮುಂದುವರಿದಿದೆ. ತಂಪೆರೆದ ಮಳೆರಾಯ, ಆಲಿಕಲ್ಲುಗಳ ಸುರಿಮಳೆ ಕಂಡು ಜನ ಪುಳಕಿತರಾಗಿದ್ದಾರೆ.

ಚಿಕ್ಕಮಗಳೂರು ನಗರದಲ್ಲಿ ಇಂದು ಮಧ್ಯಾಹ್ನವೇ ಧಾರಾಕಾರ ಮಳೆ ಸುರಿದಿದೆ. ಭಾರೀ ಆಲಿಕಲ್ಲು ಮಳೆಗೆ ಕಾಫಿ ನಾಡು ಫುಲ್ ಕೂಲ್ ಆಗಿದೆ. ಇಷ್ಟು ದಿನ ಚಿಕ್ಕಮಗಳೂರು ಬಿಸಿಲಿಗೆ ಕಾದ ಕಾವಲಿಯಂತಾಗಿತ್ತು. 41 ಡಿಗ್ರಿ ತಲುಪುತ್ತಿದ್ದ ಬಿಸಿಲ ತಾಪಮಾನಕ್ಕೆ ಜನ ಹೈರಾಣಾಗಿದ್ದರು. ಇದೀಗ ಭರ್ಜರಿಯಾಗಿ ಸುರಿದ ವರ್ಷಧಾರೆ ಜೀವ ತಂಪಾಗುವಂತೆ ಮಾಡಿದೆ.

ಚಿಕ್ಕಮಗಳೂರಲ್ಲಿ ಸುಮಾರು ಒಂದು ಗಂಟೆಗಳ ಕಾಲ ಧಾರಾಕಾರ ಮಳೆಯಾಗಿದೆ. ರಸ್ತೆಯಲ್ಲಿ ಅರ್ಧ ಅಡಿ ಎತ್ತರದಲ್ಲಿ ನೀರು ಹರಿದಿದೆ. ಧಾರಾಕಾರ ಮಳೆ ಕಂಡು ರೈತರು, ಬೆಳೆಗಾರರ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ನನ್ನ ತಂದೆ, ತಾಯಿಗೆ ಏನಾದ್ರೂ ಹೆಚ್ಚು ಕಡಿಮೆ ಆದ್ರೆ’.. -ಕಾಂಗ್ರೆಸ್​ ವಿರುದ್ಧ HD ಕುಮಾರಸ್ವಾಮಿ ಗರಂ 

ಇಂದಿನಿಂದ 5 ದಿನ ಧಾರಾಕಾರ ಮಳೆ!
ರಾಜ್ಯದ ಹಲವೆಡೆ ಇಂದಿನಿಂದ ಮೇ 11ರವರೆಗೆ ವರುಣ ಆಗಮನ ಆಗುವ ಮುನ್ಸೂಚನೆ. ಗುಡುಗು, ಸಿಡಿಲು ಸಮೇತ ಮಳೆಯಾಗಬಹುದು ಎನ್ನಲಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ರಾಮನಗರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ವರುಣನ ಆಗಮನದ ಸೂಚನೆ ಇದೆ. ಬೆಂಗಳೂರಿನಲ್ಲಿ ನಾಳೆ, ನಾಡಿದ್ದು ಮಳೆ ಸುರಿಯುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಹೇಳಿದೆ.

ಉತ್ತರ ಒಳನಾಡಿನ ಕೆಲ‌ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸೂಚನೆ ಇದ್ದು ದಕ್ಷಿಣ ಒಳನಾಡಿನಲ್ಲಿ ಗುಡುಗು ಮಿಂಚಿನೊಂದಿಗೆ ಮಳೆ ಸುರಿಯುತ್ತದೆ. ಮಳೆ ಜೊತೆಗೆ ಗಾಳಿಯು ಬೀಸುವುದರಿಂದ ರಸ್ತೆಗಳಲ್ಲಿ ವಿದ್ಯುತ್ ಕಂಬ, ಮರಗಳು ಬೀಳಬಹುದು. ಹೀಗಾಗಿ ವಿದ್ಯುತ್ ವ್ಯತ್ಯಯವಾಗುವುದು ಸಾಮಾನ್ಯವಾಗಿರುತ್ತದೆ. ಮಳೆ ಬರುವಾಗ ಮನೆಯಲ್ಲಿನ ಕರೆಂಟ್ ಸ್ವಚ್​ಗಳನ್ನು ಆಫ್ ಮಾಡಬೇಕು. ಜನರು ಕೂಡ ಎಚ್ಚರಿಕೆಯಿಂದ ಮನೆಯಲ್ಲಿ ಇರಬೇಕಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದ ಹಲವೆಡೆ ಇಂದು ಧಾರಾಕಾರ ಮಳೆ; ಆಲಿಕಲ್ಲು ನೋಡಿ ಜನರು ಸಂತಸ; ಎಲ್ಲೆಲ್ಲಿ ವರುಣಾರ್ಭಟ?

https://newsfirstlive.com/wp-content/uploads/2024/05/CKM-Rain.jpg

Load More