/newsfirstlive-kannada/media/post_attachments/wp-content/uploads/2024/06/Haveri-Dig.jpg)
ಹಾವೇರಿ ಜಿಲ್ಲೆಯ ಹಲವೆಡೆ ಸಮರ್ಪಕವಾಗಿ ಮಳೆಯಾಗುತ್ತಿಲ್ಲ. ಈ ಹಿನ್ನಲೆ ಜನರು ಹೂತಿದ್ದ ಶವಗಳನ್ನ ಹೊರ ತೆಗೆದು ಸುಡುವ ವಿಚಿತ್ರ ಆಚರಣೆಯೊಂದು ಬೆಳಕಿಗೆ ಬಂದಿದೆ.
ಮೂಢನಂಬಿಕೆಗೆ ಜೋತು ಬಿದ್ದಿರುವ ಜನರು ಹೂತಿದ್ದ ಶವಗಳನ್ನ ಹೊರ ತೆಗೆದು ಮತ್ತೆ ಸುಡುತ್ತಿದ್ದಾರೆ. ಆ ಮೂಲಕ ಮತ್ತೆ ಮಳೆಯಾಗುವ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ: ನೇಣು ಬಿಗಿದುಕೊಂಡು ಪೊಲೀಸ್ ಕಾನ್ಸ್ಟೇಬಲ್ ಆತ್ಮಹತ್ಯೆ.. ಇದಕ್ಕೆಲ್ಲಾ ಕಾರಣ ಏನು ಗೊತ್ತಾ?
ಈಗಾಗಲೇ ರೈತರು ಬಿತ್ತನೆ ಮಾಡಿದ್ದು, ಮಳೆಬಾರದಿದ್ದಕ್ಕೆ ಆತಂಕದಲ್ಲಿದ್ದಾರೆ. ಬಿತ್ತನೆ ಆದ ಬಳಿಕ ಜಿಲ್ಲೆಯ ಕೆಲವು ಕಡೆ ಮಳೆಯಾಗದ ಹಿನ್ನಲೆ ಮೂಢನಂಬಿಕೆಯ ಮೊರೆ ಹೋಗಿದ್ದಾರೆ. ಹೀಗಾಗಿ ಚರ್ಮದ ಖಾಯಿಲೆ (ತೊನ್ನು) ಇದ್ದವರು ಮರಣ ಹೊಂದಿದಾಗ ಅವರ ಪಾರ್ಥಿವ ಶರೀರ ಹೂಳದೆ ಸುಡಬೇಕೆಂಬ ಆಚರಣೆಯಿದೆ. ಒಂದು ವೇಳೆ ಮಣ್ಣಲ್ಲಿ ಹೂತಿದ್ದರೆ ಮಳೆಯಾವುದಿಲ್ಲವೆಂಬ ನಂಬಿಕೆಯಿದೆ. ಹೀಗಾಗಿ ಅಂತಹ ಶವಗಳನ್ನ ಹೊರತೆಗೆದು ಸುಟ್ಟರೆ ಮಳೆಯಾಗುತ್ತದೆ ಎಂಬುದು ಇಲ್ಲಿನ ಜನರ ಮೂಢ ನಂಬಿಕೆಯಾಗಿದೆ.
ಇದನ್ನೂ ಓದಿ: ಲೈಫ್ ಸೆಟ್ಲ್ ಮಾಡ್ತೀನಿ, ತೋಟದ ಮನೆಗೆ ಬಾ.. ಸೂರಜ್ ರೇವಣ್ಣ ವಿರುದ್ಧ ಸಂತ್ರಸ್ತನ ಆರೋಪಗಳೇನು?
ಇಂತಹ ನಂಬಿಕೆಯಿಂದಾಗಿಯೇ ಈಗಾಗಲೇ ಹೂತಿದ್ದ 8 ರಿಂದ 10 ಶವಗಳನ್ನ ಜನರು ಹೊರ ತೆಗೆದು ಸುಟ್ಟಿದ್ದಾರೆ. ಶವಗಳನ್ನು ಹೊರ ತೆಗೆಯುತ್ತಿರುವ ವಿಡಿಯೋಗಳು ಎಲ್ಲಡೆ ವೈರಲ್ ಆಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ