newsfirstkannada.com

ದೇಶದಲ್ಲಿಂದು 3ನೇ ಹಂತದ ಮತದಾನ.. ಯಾವ್ಯಾವ ರಾಜ್ಯ? ಎಷ್ಟು ಕ್ಷೇತ್ರಗಳಲ್ಲಿಂದು ಚುನಾವಣೆ ನಡೆಯುತ್ತಿದೆ ಗೊತ್ತಾ?

Share :

Published May 7, 2024 at 7:27am

    ಕರ್ನಾಟಕದ ಎಷ್ಟು ಕ್ಷೇತ್ರದಲ್ಲಿ ಇಂದು ಮತದಾನ ನಡೆಯುತ್ತಿದೆ ಗೊತ್ತಾ?

    120 ಮಹಿಳೆಯರು ಸೇರಿದಂತೆ 1,300ಕ್ಕೂ ಹೆಚ್ಚು ಅಭ್ಯರ್ಥಿಗಳು ಚುನಾವಣೆಗೆ ಸ್ಫರ್ಧೆ

    ಈ ಪ್ರದೇಶದಲ್ಲಿ ನಡೆಯಬೇಕಾಗಿದ್ದ ಚುನಾವಣೆ ಮೇ25ಕ್ಕೆ ಮುಂದೂಡಲಾಗಿದೆ.. ಯಾಕೆ?

ದೇಶದಲ್ಲಿಂದು 3ನೇ ಹಂತದ ಮತದಾನ ನಡೆಯಲಿಕ್ಕಿದೆ. 10 ರಾಜ್ಯಗಳು, 2 ಕೇಂದ್ರಾಳಿತ ಪ್ರದೇಶಗಳ 93 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್​​-ರಜೌರಿಯ ಚುನಾವಣೆ ಮೇ25ಕ್ಕೆ ಮುಂದೂಡಲಾಗಿದೆ.

ಅಚ್ಚರಿ ಸಂಗತಿ ಎಂದರೆ ಇಂದು ನಡೆಯುತ್ತಿರುವ ಚುನಾವಣೆಯಲ್ಲಿ 120 ಮಹಿಳೆಯರು ಸೇರಿದಂತೆ 1,300ಕ್ಕೂ ಹೆಚ್ಚು ಅಭ್ಯರ್ಥಿ ಸ್ಪರ್ಧಿಸುತ್ತಿದ್ದಾರೆ. ಅಂದಹಾಗೆಯೇ ಗುಜರಾತ್​ನ 26 ಕ್ಷೇತ್ರದಲ್ಲಿ ಇಂದು ಮತದಾನ ನಡೆದರೆ, ಕರ್ನಾಟಕದ 14, ಮಹಾರಾಷ್ಟ್ರದ 11, ಉತ್ತರ ಪ್ರದೇಶ 10, ಮಧ್ಯಪ್ರದೇಶ 8, ಛತ್ತೀಸ್​ಗಢ 7, ಬಿಹಾರ 5, ಅಸ್ಸಾಂ 4, ಪಶ್ಚಿಮ ಬಂಗಾಳ 4, ಗೋವಾ 2 ಮತ್ತು ದಾದ್ರಾ, ನಗರ್​ ಹಾವೆಲಿ ಮತ್ತು ದಿಯು ದಾಮನ್​ನಲ್ಲಿ 2 ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದೆ.

ಇದನ್ನೂ ಓದಿ: ಇಂದು 14 ಲೋಕಸಭಾ ಸ್ಥಾನಗಳಿಗೆ ವೋಟಿಂಗ್.. ಕಾಂಗ್ರೆಸ್​- ಬಿಜೆಪಿ ಮಧ್ಯೆ ನೇರ ಹಣಾಹಣಿ; ಕ್ಷೇತ್ರಗಳು ಯಾವ್ಯಾವು?

ದೇಶದ ಮೂರನೇ ಹಂತದ ಮತದಾನದಲ್ಲಿ ದಿಗ್ಗಜರು ಸ್ಪರ್ಧಿಸುತ್ತಿದ್ದಾರೆ. ಕೇಂದ್ರ ಸಚಿವ ಅಮಿತ್​ ಶಾ, ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ನತ್ತು ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ್​ ಜೋಶಿ ಸ್ಪರ್ಧಿಸುತ್ತಿದ್ದಾರೆ. ಇದಲ್ಲದೆ, ಶರದ್​ ಪವಾರ್​ ಮಗಳು ಸುಪ್ರಿಯಾ ಸುಳೆ, ಅಜಿತ್​ ಪವಾರ್​ ಪತ್ನಿ ಸುನೇತ್ರಾ ಪವಾರ್​ ಈ ಬಾರಿ ಚುನಾವಣೆಯಲ್ಲಿ ಪೈಪೋಟಿ ನೀಡುತ್ತಿದ್ದಾರೆ.

ಇನ್ನು ಸಮಾಜವಾದಿ ಪಕ್ಷದ ಮತ್ತು ಮಾಜಿ ಸಿಎಂ ಅಖಿಲೇಶ್ ಯಾದವ್​ ಪತ್ನಿ ಡಿಂಪಲ್​ ಯಾದವ್​, ಮಾಜಿ ಸಂಸದ ಅಕ್ಷಯ್​ ಯಾದವ್​, ರಾಮ್​ ಗೋಪಾಲ್​ ಯಾದವ್​ ಪುತ್ರ ಆದಿತ್ಯ ಯಾದವ್​, ಶಿಪಪಾಲ್​ ಸಿಂಗ್​ ಅವರ ಪುತ್ರ ಕೂಡ ಸ್ಫರ್ಧಿಸುತ್ತಿದ್ದಾರೆ.

ಮೇ 13 ರಂದು ಮುಂದಿನ ಹಂತದ ಚುನಾವಣೆ ನಡೆಯಲಿದ್ದು, ಜೂನ್ 1 ರಂದು ಕೊನೆಯ ಹಂತದ ಚುನಾವಣೆ ಮುಗಿದ ನಂತರ ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇಶದಲ್ಲಿಂದು 3ನೇ ಹಂತದ ಮತದಾನ.. ಯಾವ್ಯಾವ ರಾಜ್ಯ? ಎಷ್ಟು ಕ್ಷೇತ್ರಗಳಲ್ಲಿಂದು ಚುನಾವಣೆ ನಡೆಯುತ್ತಿದೆ ಗೊತ್ತಾ?

https://newsfirstlive.com/wp-content/uploads/2024/03/VOTING-2.jpg

Load More