newsfirstkannada.com

ಇಂದು 14 ಲೋಕಸಭಾ ಸ್ಥಾನಗಳಿಗೆ ವೋಟಿಂಗ್.. ಕಾಂಗ್ರೆಸ್​- ಬಿಜೆಪಿ ಮಧ್ಯೆ ನೇರ ಹಣಾಹಣಿ; ಕ್ಷೇತ್ರಗಳು ಯಾವ್ಯಾವು?

Share :

Published May 7, 2024 at 6:55am

Update May 7, 2024 at 7:01am

    ದೇಶದ ಮತದಾನದ ಹಬ್ಬಕ್ಕೆ ಎಲ್ಲಾ ಮತಗಟ್ಟೆಗಳಲ್ಲಿ ಭರ್ಜರಿ ಸಿದ್ಧತೆ

    ಇಂದು ಬೆಳಗ್ಗೆ 7ಗಂಟೆಯಿಂದ ಸಂಜೆ 6 ಗಂಟೆವರೆಗೂ ಮತದಾನ

    14ರಲ್ಲಿ 10ಕ್ಕೂ ಹೆಚ್ಚು ಗೆಲ್ಲೋ ವಿಶ್ವಾಸದಲ್ಲಿರೋ ಕಾಂಗ್ರೆಸ್ ಪಡೆ

ದೇಶದಲ್ಲಿ 3ನೇ ಹಂತದ ಹಾಗೂ ಕರ್ನಾಟಕದ 2ನೇ ಹಂತದ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ಉತ್ತರ ಕರ್ನಾಟಕದ ಒಟ್ಟು 14 ಕ್ಷೇತ್ರಗಳಿಗೆ ವೋಟಿಂಗ್ ನಡೆಯುತ್ತಿದ್ದು ಮತದಾರರು ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ಮತದಾನ ಮಾಡಬಹುದು.

ರಾಜ್ಯದಲ್ಲಿಂದು 14 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ವೋಟಿಂಗ್ ನಡೆಯುತ್ತಿರುವ ಕಾರಣ ಎಲ್ಲ ಮತಗಟ್ಟೆಗಲ್ಲಿ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಚುನಾವಣಾ ಕರ್ತವ್ಯಕ್ಕಾಗಿಯೇ 1 ಲಕ್ಷಕ್ಕೂ ಅಧಿಕ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಜನರು ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಲು ಯಾವುದೇ ಆತಂಕ ಬೇಡ. ಏಕೆಂದರೆ ಯಾವುದೇ ಅಹಿತಕರ ನಡೆಯದಂತೆ ಸುಮಾರು 50 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಹೀಗಾಗಿ ಉತ್ತರ ಕರ್ನಾಟಕದಲ್ಲಿ ವೋಟಿಂಗ್ ಸುಗಮವಾಗಿ ನಡೆಯಲಿದೆ.

ಇದನ್ನೂ ಓದಿ: 5 ವರ್ಷದ ಬಾಲಕಿ ಮೇಲೆ ಡೇಂಜರಸ್​ ನಾಯಿಗಳ ಡೆಡ್ಲಿ ಅಟ್ಯಾಕ್; ಆಮೇಲೇನಾಯ್ತು?​

ಇದನ್ನೂ ಓದಿ: 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರುತ್ತಿರೋ ಭಾರತದ ಸುನಿತಾ ವಿಲಿಯಮ್ಸ್; ಏನಿದು ಸ್ಟೋರಿ?

ಉತ್ತರ ಕರ್ನಾಟಕದ ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಾಬಲ್ಯ ಕಡಿಮೆ ಇರುವುದರಿಂದ 14 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ನೇರಾ ನೇರಾ ಫೈಟ್ ಇದೆ. ಜೆಡಿಎಸ್ ಉತ್ತರ ಕರ್ನಾಟಕದ ಯಾವ ಕ್ಷೇತ್ರದಲ್ಲೂ ಅಭ್ಯರ್ಥಿಯನ್ನು ಹಾಕಿಲ್ಲ. ದಳ ಸ್ಪರ್ಧಿಸದ ಹಿನ್ನೆಲೆ ‘ಕೈ’-ಕಮಲದ ನಡುವಿನ ಪೈಪೋಟಿ ತೀವ್ರ ಕುತೂಹಲ ಮೂಡಿಸಿದೆ. ಇತ್ತ ಮತದಾನ ಕ್ಷೇತ್ರಗಳಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕವಾಗಿದ್ದರಿಂದ ಬಿಜೆಪಿಗೆ ಹೆಚ್ಚು ಸ್ಥಾನ ಗೆಲ್ಲೋ ಅವಕಾಶವಿದೆ.

ಕಾಂಗ್ರೆಸ್‌-ಬಿಜೆಪಿ ನೇರಾ ನೇರಾ ಫೈಟ್

ಮೈತ್ರಿಯಾಗಿ ಲೋಕಸಭಾ ಕದನದಲ್ಲಿ ಬಿಜೆಪಿ ಸ್ಪರ್ಧಿಸಿದ್ದು 2ನೇ ಹಂತದ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಾಬಲ್ಯವಿಲ್ಲ. ಮತದಾನ ನಡೀತಿರೋ ಬಹುತೇಕ ಕ್ಷೇತ್ರಗಳಲ್ಲಿ ಲಿಂಗಾಯತ ಮತಗಳೇ ಹೆಚ್ಚು ಇವೆ. ಹೀಗಾಗಿ ಬಿಜೆಪಿಗೆ ಹೆಚ್ಚು ಸ್ಥಾನ ಗೆಲ್ಲೋ ಅವಕಾಶ ಇದೆ. ಆದರೆ 14ರಲ್ಲಿ 10ಕ್ಕೂ ಹೆಚ್ಚು ಕ್ಷೇತ್ರಗಳನ್ನ ಕಾಂಗ್ರೆಸ್ ಪಡೆ ಗೆಲ್ಲಲು ವಿಶ್ವಾಸ ವ್ಯಕ್ತಪಡಿಸಿದೆ. ಗ್ಯಾರಂಟಿಯಿಂದಾಗಿ ಹೆಚ್ಚು ಮಹಿಳೆಯರ ಮತಗಳು ಸಿಗುತ್ತಾವೆ ಎನ್ನುವ ನಿರೀಕ್ಷೆ ಕಾಂಗ್ರೆಸ್ ಇದೆ. ಸಚಿವರ ಕುಟುಂಬಸ್ಥರು ಕಣದಲ್ಲಿರೋದ್ರಿಂದ ಲಾಭವಾಗುತ್ತೆ ಎಂಬ ಲೆಕ್ಕಾಚಾರ ಕೂಡ ಮಾಡಲಾಗಿದೆ. ಹೀಗಾಗಿ ದೋಸ್ತಿಯಲ್ಲಿ ಜೆಡಿಎಸ್​ ಸ್ಪರ್ಧಿಸದಿದ್ದರೂ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್‌-ಬಿಜೆಪಿ ಮಧ್ಯೆ ನೇರ ಹಣಾಹಣಿ ಮಾತ್ರ ಇದೆ.

ಇದನ್ನೂ ಓದಿ: ಲಾಯರ್ ಸಿಡಿಸಿರೋ ಬಾಂಬ್​​ಗೆ ಕಾಂಗ್ರೆಸ್​ ಕೋಟೆಯಲ್ಲಿ ನಡುಕ.. DCM ಬಗ್ಗೆ ದೇವರಾಜೇಗೌಡ ಗಂಭೀರ ಆರೋಪ 

14 ಕ್ಷೇತ್ರಗಳಲ್ಲಿ ಕಾಂಗ್ರೆಸ್​- ಬಿಜೆಪಿ ನೇರಾ ಜಿದ್ದಾಜಿದ್ದಿ

ಚಿಕ್ಕೋಡಿ

  • ಅಣ್ಣಾಸಾಹೇಬ್‌ ಜೊಲ್ಲೆ (ಎನ್​ಡಿಎ)
  • ಪ್ರಿಯಾಂಕಾ ಜಾರಕಿಹೊಳಿ (ಕಾಂಗ್ರೆಸ್)

ಬೆಳಗಾವಿ

  • ಜಗದೀಶ್‌ ಶೆಟ್ಟರ್‌ (ಎನ್​ಡಿಎ)
  • ಮೃಣಾಲ್ ಹೆಬ್ಬಾಳ್ಕರ್ (ಕಾಂಗ್ರೆಸ್)

ಬಾಗಲಕೋಟೆ

  • ಪಿ.ಸಿ ಗದ್ದಿಗೌಡರ್‌ (ಎನ್​ಡಿಎ)
  • ಸಂಯುಕ್ತಾ ಪಾಟೀಲ್ (ಕಾಂಗ್ರೆಸ್)

ವಿಜಯಪುರ (SC)

  • ರಮೇಶ್‌ ಜಿಗಜಿಣಗಿ (ಎನ್​ಡಿಎ)
  • ಪ್ರೊ.ರಾಜು ಆಲಗೂರ್ (ಕಾಂಗ್ರೆಸ್)

ಕಲಬುರಗಿ (SC)

  • ಡಾ ಉಮೇಶ್‌ ಜಾಧವ್ (ಎನ್​ಡಿಎ)
  • ರಾಧಾಕೃಷ್ಣ ದೊಡ್ಡಮನಿ (ಕಾಂಗ್ರೆಸ್)

ರಾಯಚೂರು (ST)

  • ರಾಜಾ ಅಮರೇಶ್ವರ ನಾಯಕ (ಎನ್​ಡಿಎ)
  • ಜಿ.ಕುಮಾರ ನಾಯಕ (ಕಾಂಗ್ರೆಸ್)

ಬೀದರ್

  • ಭಗವಂತ್‌ ಖೂಬಾ (ಎನ್​ಡಿಎ)
  • ಸಾಗರ್ ಖಂಡ್ರೆ (ಕಾಂಗ್ರೆಸ್)

ಕೊಪ್ಪಳ

  • ಡಾ. ಬಸವರಾಜ್‌ ಕ್ಯಾವಟೂರು (ಎನ್​ಡಿಎ)
  • ಕೆ. ರಾಜಶೇಖರ ಹಿಟ್ನಾಳ (ಕಾಂಗ್ರೆಸ್)

ಬಳ್ಳಾರಿ (ST)

  • ಶ್ರೀರಾಮುಲು (ಎನ್​ಡಿಎ)
  • ಈ.ತುಕಾರಾಂ (ಕಾಂಗ್ರೆಸ್)

ಹಾವೇರಿ

  • ಬಸವರಾಜ ಬೊಮ್ಮಾಯಿ (ಎನ್​ಡಿಎ)
  • ಆನಂದಸ್ವಾಮಿ ಗಡ್ಡದೇವರಮಠ (ಕಾಂಗ್ರೆಸ್)

ಧಾರವಾಡ

  • ಪ್ರಲ್ಹಾದ್‌ ಜೋಶಿ (ಎನ್​ಡಿಎ)
  • ವಿನೋದ್‌ ಅಸೂಟಿ (ಕಾಂಗ್ರೆಸ್)

ಉತ್ತರ ಕನ್ನಡ

  • ವಿಶ್ವೇಶ್ವರ ಹೆಗಡೆ ಕಾಗೇರಿ (ಎನ್​ಡಿಎ)
  • ಅಂಜಲಿ ನಿಂಬಾಳ್ಕರ್‌ (ಕಾಂಗ್ರೆಸ್)

ದಾವಣಗೆರೆ

  • ಗಾಯತ್ರಿ ಸಿದ್ದೇಶ್ವರ್‌ (ಎನ್​ಡಿಎ)
  • ಪ್ರಭಾ ಮಲ್ಲಿಕಾರ್ಜುನ್ (ಕಾಂಗ್ರೆಸ್)

ಶಿವಮೊಗ್ಗ

  • ಬಿ.ವೈ ರಾಘವೇಂದ್ರ (ಎನ್​ಡಿಎ)
  • ಗೀತಾ ಶಿವರಾಜ್​ಕುಮಾರ್ (ಕಾಂಗ್ರೆಸ್)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು 14 ಲೋಕಸಭಾ ಸ್ಥಾನಗಳಿಗೆ ವೋಟಿಂಗ್.. ಕಾಂಗ್ರೆಸ್​- ಬಿಜೆಪಿ ಮಧ್ಯೆ ನೇರ ಹಣಾಹಣಿ; ಕ್ಷೇತ್ರಗಳು ಯಾವ್ಯಾವು?

https://newsfirstlive.com/wp-content/uploads/2023/10/ELECTION.jpg

Load More