Advertisment

ಮಗನ ಮದುವೆಗೆ ಬರುವವರೆಗೆಲ್ಲಾ ಒಂದು ಷರತ್ತು ಹಾಕಿದ ತಂದೆ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

author-image
Veena Gangani
Updated On
ಮಗನ ಮದುವೆಗೆ ಬರುವವರೆಗೆಲ್ಲಾ ಒಂದು ಷರತ್ತು ಹಾಕಿದ ತಂದೆ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
Advertisment
  • ಪ್ರಧಾನಿ ಮೋದಿ ಫೋಟೋ ಇರುವ ಆಮಂತ್ರಣ ಪತ್ರಿಕೆ ಸಖತ್​ ವೈರಲ್​!
  • ವಿನೂತನ ರೀತಿಯಲ್ಲಿ ಬಿಜೆಪಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ ವ್ಯಕ್ತಿ
  • ಬಿಜೆಪಿ ಪಕ್ಷದ ಪರವಾಗಿ ಹೊಸ ಅಭಿಯಾನ ಶುರು ಮಾಡಿಕೊಂಡ ವರ

ಹೈದರಾಬಾದ್: ಮದುವೆ ಅನ್ನೋದು ಏಳೇಳು ಜನ್ಮದ ಅನುಬಂಧ. ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರತಿಯೊಬ್ಬರಿಗೂ ಮದುವೆಯೇ ಜೀವನದ ದೊಡ್ಡ ತಿರುವಾಗಿ ಬಿಡುತ್ತೆ. ಹೊಸದಾಗಿ ಮದುವೆ ಆಗಿರೋ ವಧು ವರರು ಆ ದಿನವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕೆಂದು ಬಯಸುತ್ತಾರೆ. ಹೀಗಾಗಿ ಭಿನ್ನ ವಿಭಿನ್ನವಾಗಿ ತಮ್ಮ ಮದುವೆಯ ಆಮಂತ್ರಣ ಪತ್ರಿಕೆ ಪ್ರಿಂಟ್ ಮಾಡುತ್ತಾರೆ. ವಿಭಿನ್ನವಾಗಿ ಫೋಟೋಶೂಟ್​ ಮಾಡಿಸಿಕೊಳ್ಳುತ್ತಾರೆ. ಅದರಲ್ಲೂ ಅದ್ಧೂರಿಯಾಗಿ ನಡೆಯುವ ಮದುವೆಗೆ ಮುಖ್ಯವಾಗಿ ಬೇಕಾಗಿದ್ದೇ ಆಮಂತ್ರಣ ಪತ್ರಿಕೆ. ದೂರದ ಊರಿನಲ್ಲಿದ್ದವರಿಗೆ ಆಮಂತ್ರಣ ಪತ್ರಿಕೆ ಕೊಟ್ಟು ಮದುವೆಗೆ ಆಹ್ವಾನಿಸುತ್ತಾರೆ.

Advertisment

publive-image

ಹೊಸದಾಗಿ ಮದುವೆಯಾಗುವ ದಂಪತಿಗೆ ಬಂಧು ಮಿತ್ರರು ವಿಶೇಷವಾದ ಉಡುಗೊರೆಗಳನ್ನು ನೀಡುವುದು ವಾಡಿಕೆ. ಸಾಮಾನ್ಯವಾಗಿ ಆಮಂತ್ರಣ ಪತ್ರಿಕೆಯಲ್ಲಿ ದೇವರ ಹೆಸರು, ಬಂಧು ಬಳಗದ ಹೆಸರು, ಸ್ಥಳ ಹೀಗೆ ಮುದ್ರಣ ಮಾಡುವುದನ್ನು ನಾವೆಲ್ಲರೂ ಗಮನಿಸಿರುತ್ತೇವೆ. ಆದರೆ ಇಲ್ಲೋಬ್ಬ ಪ್ರಧಾನಿ ನರೇಂದ್ರ ಮೋದಿ ಅವರ ಅಪ್ಪಟ ಅಭಿಮಾನಿ ಆರತಕ್ಷತೆಯ ಆಮಂತ್ರಣ ಪತ್ರಿಕೆ ವಿಶೇಷವಾಗಿ ಮೋದಿ ಫೋಟೋವನ್ನು ಪ್ರಿಂಟ್​​ ಮಾಡಿದ್ದಾರೆ.

ಇದನ್ನು ಓದಿ:RCB ವಿರುದ್ಧ ಗೆಲುವು; ಚೆನ್ನೈ ಕ್ಯಾಪ್ಟನ್​ ಆಗಿ ಮೊದಲ ಅನುಭವ ಹಂಚಿಕೊಂಡ ಗಾಯಕ್ವಾಡ್! 

ಹೌದು, ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಪರವಾಗಿ ಪ್ರಚಾರ ಮಾಡಲು ನೂತನವಾಗಿ ಪ್ಲಾನ್ ಮಾಡಿಕೊಂಡಿದ್ದಾರೆ. ಸಂಗಾರೆಡ್ಡಿ ಜಿಲ್ಲೆಯ ನರಸಿಂಹ ಪಠಾಣ್ ಎಂಬುವವರು ತಮ್ಮ ಮಗನ ಮದುವೆಯ ಆಮಂತ್ರಣ ಪತ್ರಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನರಸಿಂಹ ಪಠಾಣ್​ ಅವರ ಏಕೈಕ​ ಪುತ್ರ ಸಾಯಿಕುಮಾರ್ ಅವರ ಮದುವೆ ಪತ್ರಿಕೆಗಳಲ್ಲಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಮುದ್ರಿಸಿ 'ನನ್ನ ಮದುವೆಗೆ ನಿಮ್ಮ ಉಡುಗೊರೆ ನರೇಂದ್ರ ಮೋದಿ ಅವರಿಗೆ ಮತ ನೀಡಿ' ಎಂದು ಮೋದಿ ಅವರ ಫೋಟೋವನ್ನು ಪ್ರಿಂಟ್​​ ಮಾಡಿದ್ದಾರೆ.

Advertisment

publive-image

ಜೊತೆಗೆ ಮದುವೆಗೆ ಬರುವವರು ವಿಶೇಷ ಉಡುಗೊರೆಗಳನ್ನು ನೀಡುವ ಅಗತ್ಯವಿಲ್ಲ. ಬಿಜೆಪಿ ಪಕ್ಷಕ್ಕೆ ಮತ ನೀಡಿ ಎಂದು ಬರೆದುಕೊಂಡಿದ್ದಾರೆ. ಈ ಮದುವೆಯ ಪತ್ರಿಕೆಯನ್ನು ಬಿಜೆಪಿ ಪಕ್ಷದ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಸದ್ಯ ಮದುವೆಯ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment