newsfirstkannada.com

RCB ವಿರುದ್ಧ ಗೆಲುವು; ಚೆನ್ನೈ ಕ್ಯಾಪ್ಟನ್​ ಆಗಿ ಮೊದಲ ಅನುಭವ ಹಂಚಿಕೊಂಡ ಗಾಯಕ್ವಾಡ್!

Share :

Published March 24, 2024 at 5:29pm

    ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ಗೆದ್ದ ಚೆನ್ನೈ

    ಈ ಬಗ್ಗೆ ಚೆನ್ನೈ ಕ್ಯಾಪ್ಟನ್​​ ಗಾಯಕ್ವಾಡ್​ ಹೇಳಿದ್ದೇನು ಗೊತ್ತಾ?

    ನನಗೆ ಯಾವುದೇ ಒತ್ತಡ ಇಲ್ಲ ಎಂದು ಸಿಎಸ್​ಕೆ ನಾಯಕ

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ಗೆದ್ದ ಬಳಿಕ ಚೆನ್ನೈ ಸೂಪರ್​ ಕಿಂಗ್ಸ್​ ಹೊಸ ಕ್ಯಾಪ್ಟನ್​​ ಋತುರಾಜ್ ಗಾಯಕ್ವಾಡ್ ಮಾತಾಡಿದ್ದಾರೆ. ನಾನು ಸದಾ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಎಂಜಾಯ್​ ಮಾಡುತ್ತೇನೆ. ಇದರಿಂದ ನನ್ನ ಮೇಲೆ ಯಾವುದೇ ಹೆಚ್ಚುವರಿ ಜವಾಬ್ದಾರಿ ಬೀಳುವುದಿಲ್ಲ ಎಂದರು.

ನನಗೆ ಈಗಾಗಲೇ ರಾಜ್ಯ ತಂಡ ಮುನ್ನಡೆಸಿದ ಅನುಭವ ಇದೆ. ನಾನು ಯಾವ ಕ್ಷಣದಲ್ಲೂ ಸಣ್ಣ ಒತ್ತಡಕ್ಕೂ ಸಿಲುಕಲಿಲ್ಲ. ನಾನು ಒತ್ತಡಕ್ಕೆ ಸಿಲುಕಲು ಹೀಗೆ ಸಾಧ್ಯ? ನನ್ನೊಂದಿಗೆ ಮಹಿ ಭಾಯ್​ ಇದ್ದರು. ಹಾಗಾಗಿ ನನಗೆ ಎಲ್ಲವೂ ಸುಲಭ ಆಯ್ತು ಎಂದರು.

ಆರಂಭಿಕ 2-3 ಓವರ್ ಬಿಟ್ಟರೆ ಇಡೀ ಮ್ಯಾಚ್​​ ನಮ್ಮ ಕಂಟ್ರೋಲ್​ನಲ್ಲೇ ಇತ್ತು. ಯಾವಾಗ ಸ್ಪಿನ್ನರ್‌ಗಳು ಬೌಲ್ ಮಾಡಲು ಬಂದರೋ ಆಗ ಪಂದ್ಯದ ಮೇಲೆ ಹಿಡಿತ ಸಾಧಿಸಿದೆವು. ಉತ್ತಮ ಕಮ್‌ಬ್ಯಾಕ್ ಮಾಡಿ ಆರ್​​ಸಿಬಿಗೆ 20 ರನ್​​ ಕಡಿಮೆ ಮಾಡಿದೆವು ಎಂದರು.

ಆರ್​​ಸಿಬಿ ವಿರುದ್ಧ ಗೆಲ್ಲಲು ಇಡೀ ಟೀಮ್​ ಕಾರಣ ಎಂದ ಕ್ಯಾಪ್ಟನ್​​

ಪಂದ್ಯ ಗೆಲ್ಲಲು ಹಲವರು ಕಾರಣ. ಪ್ರತಿಯೊಬ್ಬರೂ ತಮ್ಮ ಪಾತ್ರ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಎಲ್ಲರೂ ಉತ್ತಮ ಬ್ಯಾಟಿಂಗ್ ಮಾಡಿದ್ರು. ಅಗ್ರ ಮೂವರು ಆಟಗಾರರ ಪೈಕಿ ಯಾರಾದ್ರೂ ಒಬ್ಬರು 15 ಓವರ್​ ಬ್ಯಾಟ್​ ಬೀಸಿದ್ರೆ ಸಾಕು ನಮ್ಮದೇ ಗೆಲುವು ಎಂದರು.

ಇದನ್ನೂ ಓದಿ: ಕೈಕೊಟ್ಟ ಮ್ಯಾಕ್ಸಿ, ಕೊಹ್ಲಿ.. ಆರ್​​ಸಿಬಿ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ಕ್ಯಾಪ್ಟನ್​ ಫಾಫ್​​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RCB ವಿರುದ್ಧ ಗೆಲುವು; ಚೆನ್ನೈ ಕ್ಯಾಪ್ಟನ್​ ಆಗಿ ಮೊದಲ ಅನುಭವ ಹಂಚಿಕೊಂಡ ಗಾಯಕ್ವಾಡ್!

https://newsfirstlive.com/wp-content/uploads/2024/03/Gaikwad_Dhoni.jpg

Load More