newsfirstkannada.com

ಧ್ಯಾನಕ್ಕೆ ಕೂತ ಪ್ರಧಾನಿ ಮೋದಿ.. ‘ನವ ಭಾರತದ ನವೋದಯ’ ಎಂದು ಬಿಜೆಪಿ ಬಣ್ಣನೆ..! Photos

Share :

Published May 31, 2024 at 1:25pm

Update May 31, 2024 at 1:26pm

  ಕನ್ಯಾಕುಮಾರಿಯಲ್ಲಿ ಪ್ರಧಾನಿ ಮೋದಿ 45 ಗಂಟೆ ಧ್ಯಾನ

  ನೆಲ, ಜಲ ಮತ್ತು ಗಾಳಿ.. ಎಲ್ಲಾ ಮಾರ್ಗದಿಂದಲೂ ಮೋದಿಗೆ ಭದ್ರತೆ

  ನಾಳೆವರೆಗೂ ಧ್ಯಾನದಲ್ಲಿ ಮುಳುಗಲಿದ್ದಾರೆ ಪ್ರಧಾನಿ ಮೋದಿ

ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್ ಸ್ಮಾರಕದಲ್ಲಿ (Vivekananda Rock Memorial) ಪ್ರಧಾನಿ ಮೋದಿ 45 ಗಂಟೆಗಳ ಕಾಲ ಧ್ಯಾನಸ್ಥರಾಗಿದ್ದಾರೆ. ಇದಕ್ಕಾಗಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪ್ರಧಾನಿ ಮೋದಿಯನ್ನು ನೆಲ, ಜಲ ಮತ್ತು ಗಾಳಿಯಿಂದ ರಕ್ಷಿಸಲಾಗುತ್ತಿದೆ.

ಭೂಮಿಯಲ್ಲಿ ಪ್ರಧಾನಿಯವರ ಭದ್ರತೆಗೆ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದೆ. ಸಮುದ್ರದಲ್ಲಿ ಭಾರತೀಯ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ. ಆಕಾಶದಲ್ಲಿ ವಾಯು ದಳದ ಸಹಾಯದಿಂದ ಕಣ್ಗಾವಲು ಇಡಲಾಗಿದೆ. ಜೊತೆಗೆ ಎಸ್​ಪಿಜಿ ಪಡೆ ಕೂಡ ಎಂದಿನಂತೆ ಕಾವಲು ಕಾಯುತ್ತಿದೆ.

ಇದನ್ನೂ ಓದಿ:ಕನ್ಯಾಕುಮಾರಿಯಲ್ಲಿ ನಮೋ ತಪಸ್ಸು.. 45 ಗಂಟೆಗಳ ಧ್ಯಾನದ ಅವಧಿಯಲ್ಲಿ ಮೋದಿ ಏನು ಸೇವನೆ ಮಾಡುತ್ತಾರೆ..?

ನಿನ್ನೆ ಕನ್ಯಾಕುಮಾರಿ ತಲುಪಿರುವ ಮೋದಿ ಭಗವತಿ ಅಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ನಂತರ ದೋಣಿ ಮೂಲಕ ರಾಕ್ ಸ್ಮಾರಕ ತಲುಪಿದರು. ಧೋತಿ ಮತ್ತು ಬಿಳಿ ಶಾಲು ಧರಿಸಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ ಧ್ಯಾನ ಮಂಟಪದಲ್ಲಿ ಧ್ಯಾನ ಮಾಡಲು ಪ್ರಾರಂಭಿಸಿದ್ದಾರೆ. ತಪಸ್ಸಿಗೆ ಕೂತಿರೋ ಮೋದಿ ಜೂನ್‌ 1ರವರೆಗೂ ಧ್ಯಾನದಲ್ಲಿ ಮಗ್ನರಾಗಲಿದ್ದಾರೆ.

ಹಗಲು ರಾತ್ರಿ ಎನ್ನದೇ ಸುಮಾರು 45 ಗಂಟೆಗಳ ಕಾಲ ಧ್ಯಾನ ಮಾಡಲಿದ್ದಾರೆ. ಈ ಮಧ್ಯೆ ಸ್ವಾಮಿ ವಿವೇಕಾನಂದರು ಧ್ಯಾನಸ್ಥರಾಗಿದ್ದ ಸ್ಥಳದಲ್ಲಿಯೇ ಮೋದಿ ಮಹಾ ತಪಸ್ಸು ಮಾಡ್ತಿದ್ದಾರೆ ಅನ್ನೋದೇ ವಿಶೇಷ. ಧ್ಯಾನದ ಅವಧಿಯಲ್ಲಿ ಮೋದಿ ಅವರು ದ್ರವರೂಪದ ಆಹಾರ ಮಾತ್ರ ಸೇವನೆ ಮಾಡಲಿದ್ದಾರೆ. ಅಂದರೆ ಎಳೆನೀರು, ಗ್ರೇಪ್ಸ್​ ಜ್ಯೂಸ್ ಸೇರಿದಂತೆ ಇತರೆ ದ್ರವರೂಪದ ಆಹಾರ ಮಾತ್ರ ಸೇವನೆ ಮಾಡಲಿದ್ದಾರೆ ಎಂದು ವರದಿಗಳು ಹೇಳಿವೆ.

ಮೋದಿ ಅವರ ಈ ಧ್ಯಾನವನ್ನು ಕರ್ನಾಟಕ ಬಿಜೆಪಿಯು ನವ ಭಾರತದ ನವೋದಯ ಎಂದು ಬಣ್ಣಿಸಿದೆ. ಜೊತೆಗೆ ಕಾಯಕಯೋಗಿ… ಭರವಸೆಯೂ ನಿನ್ನಲ್ಲೇ..ಎಂದು ಕೂಡ ಹೇಳಿದೆ.

ಇದನ್ನೂ ಓದಿ:ಪಾಪಿ ಗಂಡ.. ಹೆಂಡತಿಯ ತಲೆಗೆ ಸ್ಕ್ರೂಡ್ರೈವರ್​ನಿಂದ 20 ಬಾರಿ ಚುಚ್ಚಿಚುಚ್ಚಿ ಸಾಯಿಸಿದ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಧ್ಯಾನಕ್ಕೆ ಕೂತ ಪ್ರಧಾನಿ ಮೋದಿ.. ‘ನವ ಭಾರತದ ನವೋದಯ’ ಎಂದು ಬಿಜೆಪಿ ಬಣ್ಣನೆ..! Photos

https://newsfirstlive.com/wp-content/uploads/2024/05/MODI-14.jpg

Load More