newsfirstkannada.com

ಪ್ರಜ್ವಲ್ ರೇವಣ್ಣನನ್ನು ವಿದೇಶದಿಂದ ಕರೆ ತಂದು ಕಠಿಣಾತಿ ಕಠಿಣ ಶಿಕ್ಷೆ ನೀಡಬೇಕು; ಪ್ರಧಾನಿ ನರೇಂದ್ರ ಮೋದಿ

Share :

Published May 7, 2024 at 9:41am

Update May 7, 2024 at 9:42am

    ಕರ್ನಾಟಕ ರಾಜ್ಯ ಸರ್ಕಾರವೇ ಕ್ರಮ ಕಠಿಣ ಕ್ರಮ ಕೈಗೊಳ್ಳಬೇಕು ಮೋದಿ

    2,979 ಸಾವಿರ ವಿಡಿಯೋಗಳನ್ನು ಒಂದೇ ದಿನ ಮಾಡಿಲ್ಲ ಎಂದ ಪ್ರಧಾನಿ

    ಇದು ಜೆಡಿಎಸ್- ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದಾಗ ಮಾಡಿರುವ ವಿಡಿಯೋ

ಪ್ರಜ್ವಲ್ ರೇವಣ್ಣನನ್ನು ವಿದೇಶದಿಂದ ಕರೆ ತಂದು ಕಠಿಣ ಶಿಕ್ಷೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೊದಲ ಬಾರಿಗೆ ಖಾಸಗಿ ಚಾನಲ್ ಗೆ ನೀಡಿದ ಸಂದರ್ಶನದಲ್ಲಿ ಪ್ರಜ್ವಲ್ ಕೇಸ್ ಬಗ್ಗೆ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ‘ಕಾನೂನು ಸುವ್ಯವಸ್ಥೆ ರಾಜ್ಯಗಳ ವಿಷಯವಾಗಿದೆ. ಪಶ್ಚಿಮ ಬಂಗಾಳ , ಆಂಧ್ರಪ್ರದೇಶ, ಗುಜರಾತ್, ತೆಲಂಗಾಣದಲ್ಲೇ ಆಗಲಿ ಕಾನೂನು ಸುವ್ಯವಸ್ಥೆ ರಾಜ್ಯಗಳ ವಿಷಯವಾಗಿದೆ. ಕರ್ನಾಟಕದಲ್ಲೂ ಕಾನೂನು ಸುವ್ಯವಸ್ಥೆ ರಾಜ್ಯಗಳ ವಿಷಯವಾಗಿದೆ’ ಎಂದು ಹೇಳಿದ್ದಾರೆ.

ಬಳಿಕ ಮಾತು ಮುಂದುವರಿಸಿದ ಅವರು, ‘ಕರ್ನಾಟಕ ರಾಜ್ಯ ಸರ್ಕಾರವೇ ಕ್ರಮ ಕಠಿಣ ಕ್ರಮ ಕೈಗೊಳ್ಳಬೇಕು. ಈ 2,979 ಸಾವಿರ ವಿಡಿಯೋಗಳನ್ನು ಒಂದೇ ದಿನ ಮಾಡಿಲ್ಲ. ಜೆಡಿಎಸ್- ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದಾಗ ರೇಕಾರ್ಡ್​ ಮಾಡಿರುವ ವಿಡಿಯೋ ಇದು. ಆರೋಪಿಯ ಮೇಲೆ ರಾಜ್ಯ ಸರ್ಕಾರ ನಿಗಾ ವಹಿಸಬೇಕಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಾಟ್ಸ್​ಆ್ಯಪ್​ನಲ್ಲಿ ವೋಟ್​ ಮಾಡಿದ ಸ್ಟೇಟಸ್​.. ಪಾಲಿಕೆ ಸದಸ್ಯನ ಮೇಲೆ ಮತದಾನ ನಿಯಮ ಉಲ್ಲಂಘನೆ‌ ಆರೋಪ

ವಿದೇಶಕ್ಕೆ ಹೋಗಲು ಬಿಟ್ಟಿರುವುದು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಗಮನಕ್ಕೆ ವಿಷಯ ತಂದಿಲ್ಲ. ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರಗಳ ಚುನಾವಣೆ ಮುಗಿದ ಮೇಲೆ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರಗಳ ಚುನಾವಣೆ ಮುಗಿದ ಮೇಲೆ ವಿಡಿಯೋ ಬಿಡುಗಡೆ ರಾಜಕೀಯ ಗೇಮ್. ಇದು ಅನುಮಾನಕ್ಕೆ ಕಾರಣವಾಗಿದೆ. ಈ ರೀತಿಯ ರಾಜಕೀಯ ಗೇಮ್ ದೇಶದಲ್ಲಿ ನಿಲ್ಲಬೇಕು. ಪ್ರಜ್ವಲ್ ರೇವಣ್ಣರಂತಹ ಅತ್ಯಾಚಾರಿ ವ್ಯಕ್ತಿಗಳ ಬಗ್ಗೆ ಶೂನ್ಯ ಸಹಿಷ್ಣುತೆ ಹೊಂದಿರಬೇಕು. ಕಠಿಣಾತಿ ಕಠಿಣ ಶಿಕ್ಷೆ ಆಗಲೇಬೇಕು. ಪ್ರಜ್ವಲ್ ರೇವಣ್ಣನನ್ನು‌ ವಿದೇಶದಿಂದ ವಾಪಸ್ಸು ಕರೆ ತರಬೇಕು ಎಂದು ಮೋದಿ ಹೇಳಿದ್ದಾರೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಜ್ವಲ್ ರೇವಣ್ಣನನ್ನು ವಿದೇಶದಿಂದ ಕರೆ ತಂದು ಕಠಿಣಾತಿ ಕಠಿಣ ಶಿಕ್ಷೆ ನೀಡಬೇಕು; ಪ್ರಧಾನಿ ನರೇಂದ್ರ ಮೋದಿ

https://newsfirstlive.com/wp-content/uploads/2024/04/MODI-WARNING.jpg

Load More