newsfirstkannada.com

ಮಹತ್ವದ ರಾಜಕೀಯ ಬೆಳವಣಿಗೆ; ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ರಾಜೀನಾಮೆ

Share :

Published June 5, 2024 at 4:40pm

    ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಮೋದಿ ರಾಜೀನಾಮೆ!

    ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನರೇಂದ್ರ ಮೋದಿಯವ್ರು

    ದ್ರೌಪದಿ ಮುರ್ಮುರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಕೆ

ನವದೆಹಲಿ: ಮಹತ್ವದ ರಾಜಕೀಯ ಬೆಳವಣಿಗೆ ಒಂದರಲ್ಲಿ ನರೇಂದ್ರ ಮೋದಿಯವ್ರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಎನ್​​ಡಿಎ ಮೈತ್ರಿಕೂಟದ ನಾಯಕರ ಸಭೆಗೆ ಮುನ್ನ ರಾಷ್ಟ್ರಪತಿ ಭವನಕ್ಕೆ ತೆರಳಿದ ನರೇಂದ್ರ ಮೋದಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ನೀಡಿದ್ರು.

ಮೋದಿ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ. ಜತೆಗೆ ಹೊಸ ಸರ್ಕಾರ ರಚನೆ ಆಗುವವರೆಗೂ ಹಂಗಾಮಿ ಪ್ರಧಾನಿಯಾಗಿ ಮುಂದುವರಿಯಲು ಅವಕಾಶ ನೀಡಿದ್ದಾರೆ.

ಇನ್ನು, ಬಹುನಿರೀಕ್ಷಿತ 2024ರ ಭಾರತೀಯ ಸಾರ್ವತ್ರಿಕ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎಗೆ 293 ಸೀಟು ಬಂದಿವೆ. ಕಾಂಗ್ರೆಸ್​​ ನೇತೃತ್ವದ ಇಂಡಿಯಾ ಅಲಿಯನ್ಸ್​ ಮತ್ತಿತರಿಗೆ 250ಕ್ಕೂ ಹೆಚ್ಚು ಸೀಟುಗಳು ಬಂದಿವೆ. ಅದರಲ್ಲೂ ಬಿಜೆಪಿಗೆ 240 ಸೀಟು ಬಂದಿದ್ದು, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ಭಾರೀ ಹಿನ್ನಡೆ ಆಗಿದೆ.

ಇದನ್ನೂ ಓದಿ: ಬಿಜೆಪಿ ಮೊದಲ ವಿಕೆಟ್​ ಪತನ; ಡಿಸಿಎಂ ಪೋಸ್ಟ್​ಗೆ ದೇವೇಂದ್ರ ಫಡ್ನವೀಸ್​​​ ರಾಜೀನಾಮೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹತ್ವದ ರಾಜಕೀಯ ಬೆಳವಣಿಗೆ; ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ರಾಜೀನಾಮೆ

https://newsfirstlive.com/wp-content/uploads/2024/06/Modi_Murmu.jpg

Load More