/newsfirstlive-kannada/media/post_attachments/wp-content/uploads/2024/07/MODI_RUSSIA_PRESIDENT.jpg)
2019ರ ಬಳಿಕ ಪ್ರಧಾನಿ ಮೋದಿ ಅವರು ರಷ್ಯಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಭಾರತ ಹಾಗೂ ರಷ್ಯಾ ನಡುವೆ 22ನೇ ವಾರ್ಷಿಕ ಶೃಂಗಸಭೆ ನಡೆಯಲಿದ್ದು, 2 ದಿನಗಳ ಕಾಲ ಪ್ರಧಾನಿ ಮೋದಿ ಮಾಸ್ಕೋದಲ್ಲಿ ತಂಗಲಿದ್ದಾರೆ. ಇದರ ಬಳಿಕ ಜುಲೈ 10ರಂದು ಆಸ್ಟ್ರೀಯಾಕ್ಕೆ ಪ್ರಯಾಣ ಬೆಳಸಲಿದ್ದು, 41 ವರ್ಷದ ಬಳಿಕ ಭಾರತದ ಪ್ರಧಾನಿಯೊಬ್ಬರು ಆಸ್ಟ್ರೀಯಾ ಭೇಟಿ ನೀಡಲಿದ್ದಾರೆ.
ಇದನ್ನೂ ಓದಿ: ದರ್ಶನ್ಗೆ ಶನಿ, ರಾಹು ಕಾಟ.. ರಾಜಯೋಗ ಇದೆಯಾ; ಬಂಡೆ ಮಹಾಕಾಳಿ ಪ್ರಧಾನ ಅರ್ಚಕ ನುಡಿದ ಭವಿಷ್ಯ?
ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾದ ಬಳಿಕ ಎರಡನೇ ಬಾರಿಗೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ.. ಇವತ್ತು ಪ್ರಧಾನಿ ಮೋದಿ ರಷ್ಯಾಕ್ಕೆ ತೆರಳಲಿದ್ದು, 2019ರ ನಂತರ ರಷ್ಯಾ ಪ್ರವಾಸ ಕೈಗೊಳ್ಳುತ್ತಿದ್ದಾರೆ.. ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಅಹ್ವಾನದ ಮೇರೆಗೆ ಪ್ರಧಾನಿ ಮೋದಿ ರಷ್ಯಾಕ್ಕೆ ಭೇಟಿ ನೀಡಲಿದ್ದು, ಇಂದು ಮಧ್ಯಾಹ್ನ ರಷ್ಯಾವನ್ನು ತಲುಪಲಿದ್ದಾರೆ.
ಇದನ್ನೂ ಓದಿ:ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ.. ಧಾರಾಕಾರ ಮಳೆ, ಪ್ರವಾಸಿಗರಿಗೆ ಎಚ್ಚರಿಕೆ..!
5 ವರ್ಷಗಳ ಬಳಿಕ ರಷ್ಯಾ ಪ್ರವಾಸ ಕೈಗೊಳ್ಳುತ್ತಿರುವ ಪ್ರಧಾನಿ ಮೋದಿ, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಹಲವು ಮಹತ್ವದ ವಿಚಾರಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರ ಮನೋಭಾವದೊಂದಿಗೆ ಸಾಗಲು ಹೊಸ ಒಡಂಬಡಿಕೆಗೆ ಮೋದಿ ಹಾಗೂ ಪುಟಿನ್ ಸಹಿ ಹಾಕಲಿದ್ದಾರೆ.
ಪ್ರಧಾನಿ ಮೋದಿ ರಷ್ಯಾ ಭೇಟಿ
- ಪ್ರಧಾನಿ ಮೋದಿ ಇವತ್ತು ಮಧ್ಯಾಹ್ನ ಮಾಸ್ಕೋಗೆ ತಲುಪಲಿದ್ದಾರೆ
- ಎರಡು ದಿನಗಳ ಮಾಸ್ಕೋದಲ್ಲಿ ಉಳಿಯುವ ಪ್ರಧಾನಿ ಮೋದಿ
- ಭಾರತ-ರಷ್ಯಾ ನಡುವಿನ 22ನೇ ವಾರ್ಷಿಕ ಶೃಂಗಸಭೆಯಲ್ಲಿ ಭಾಗಿ
- ರಷ್ಯಾ-ಉಕ್ರೇನ್ ಯುದ್ಧ ಶುರುವಾದ ಬಳಿಕ ಮೊದಲ ಭೇಟಿ
- ಉಭಯ ನಾಯಕರು ಮಹತ್ವದ ವಿಷಯಗಳ ಬಗ್ಗೆ ಚರ್ಚೆ
- ಮಾಸ್ಕೊ, ವಿಯೆನ್ನಾದಲ್ಲಿ ಭಾರತೀಯ ಸಮುದಾಯವನ್ನು ಭೇಟಿ
ರಷ್ಯಾ-ಉಕ್ರೇನ್ ನಡುವಿನ ಯುದ್ಧ ಕಡಿಮೆ ಮಾಡಲು ಪ್ರಧಾನಿ ಮೋದಿ ಮಹತ್ವದ ಪಾತ್ರವಹಿಸಿದ್ರು. ಹೀಗಾಗಿ ಮೋದಿ ರಷ್ಯಾ ಭೇಟಿ ಬಗ್ಗೆ ಪಾಶ್ಚಿಮಾತ್ಯ ದೇಶಗಳು ಕುತೂಹಲದಿಂದ ಎದುರು ನೋಡ್ತಿವೆ. ಪ್ರಧಾನಿ ಮೋದಿ ಅವರ ರಷ್ಯಾ ಭೇಟಿಯನ್ನು ಪಶ್ಚಿಮದ ದೇಶಗಳು ವಿರೋಧ ವ್ಯಕ್ತಪಡಿಸಿವೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಇಬ್ಬರು ಯೋಧರು ಹುತಾತ್ಮ.. ಗಡಿಯಲ್ಲಿ ಮತ್ತೆ ಬಾಲ ಬಿಚ್ಚಿದ್ದ ನಾಲ್ವರು ಉಗ್ರರು ಫಿನಿಶ್
5 ವರ್ಷಗಳ ಬಳಿಕ ಭಾರತದ ಪ್ರಧಾನಿ ರಷ್ಯಾಗೆ ಆಗಮಿಸುತ್ತಿದ್ದ ಮೋದಿ ಸ್ವಾಗತಕ್ಕೆ ರಷ್ಯಾದಲ್ಲಿರುವ ಅನಿವಾಸಿ ಭಾರತೀಯರು ಅದ್ಧೂರಿ ಸ್ವಾಗತ ಕೋರಲು ಸಿದ್ಧರಾಗಿದ್ದಾರೆ. ಪ್ರಧಾನಿ ಮೋದಿ ಅವರು 2 ದಿನಗಳ ರಷ್ಯಾ ಪ್ರವಾಸದ ಬಳಿಕ ಜುಲೈ 10 ರಂದು ಆಸ್ಟ್ರೀಯಾಕ್ಕೆ ಪ್ರಯಾಣ ಬೆಳಸಲಿದ್ದಾರೆ. ಮೋದಿ ಪ್ರವಾಸದಿಂದ ಬಗ್ಗೆ ಹಲವು ನಿರೀಕ್ಷೆಗಳು ಗರಿಗೆದರಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ