ಕಾಶಿಯಲ್ಲಿ ಪಾನ್​ ಬೀಡ ಮೇಲೆ ಹೂಡಿಕೆ ಮಾಡಿ; ವಿಶ್ವ ಉದ್ಯಮಿಗಳಿಗೆ ಪ್ರಧಾನಿ ಮೋದಿ ಆಫರ್​​

author-image
Gopal Kulkarni
Updated On
ಕಾಶಿಯಲ್ಲಿ ಪಾನ್​ ಬೀಡ ಮೇಲೆ ಹೂಡಿಕೆ ಮಾಡಿ; ವಿಶ್ವ ಉದ್ಯಮಿಗಳಿಗೆ ಪ್ರಧಾನಿ ಮೋದಿ ಆಫರ್​​
Advertisment
  • ನೀವು ಪಾನ್ ಪ್ರಿಯರೇ ಆಗಿದ್ದಲ್ಲಿ ನನ್ನ ಕ್ಷೇತ್ರ ವಾರಾಣಸಿಯಲ್ಲಿ ಹೂಡಿಕೆ ಮಾಡಿ
  • ಕಾಶಿಯಲ್ಲಿ ಪಾನ್ ಉದ್ಯಮದಲ್ಲಿ ಹೂಡಿಕೆ ಮಾಡುವಂತೆ ಪ್ರಧಾನಿ ಆಹ್ವಾನ
  • ಸಿಂಗಾಪೂರ್​ನಲ್ಲಿ ನಡೆದ ಸಮಿತಿಯಲ್ಲಿ ಹೂಡಿಕೆದಾರರಿಗೆ ಪ್ರಧಾನಿ ಮೋದಿ ಕರೆ

ಪ್ರಧಾನಿ ನರೇಂದ್ರ ಮೋದಿ ಕಾಶಿಯಲ್ಲಿ ಹೂಡಿಕೆ ಮಾಡುವಂತೆ ವಿಶ್ವದ ಎಲ್ಲಾ ಉದ್ಯಮಿಗಳಿಗೆ ಕರೆ ನೀಡಿದ್ದಾರೆ. ನೀವು ನಿಜಕ್ಕೂ ಪಾನ್ ಇಷ್ಟಪಡುವವರೇ ಆಗಿದ್ದರೆ ನನ್ನ ಲೋಕಸಭಾ ಕ್ಷೇತ್ರವಾದ ಕಾಶಿಯಲ್ಲಿ ಹೂಡಿಕೆ ಮಾಡಿ. ಕಾಶಿಗೂ ಹಾಗೂ ವಿಳ್ಯದೆಲೆಯ ಪಾನ್​ಗೂ ಒಂದು ಬಿಡಿಸಲಾಗದ ಪರಂಪರೆ ಹಿಂದಿನಿಂದಲೂ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಶಾಲೆಗೆ ನಾನ್​​ ವೆಜ್​ ತಂದ ಆರೋಪ; ಶಾಲೆಯಿಂದ ವಿದ್ಯಾರ್ಥಿಯನ್ನೇ ಹೊರಹಾಕಿದ ಪ್ರಿನ್ಸಿಪಾಲ್​​

ಸಿಂಗಾಪೂರ್​ನಲ್ಲಿ ಉದ್ಯಮಿ ನಾಯಕರ ಸಮಿತಿಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಪಾನ್ ಬಗ್ಗೆ ಎಲ್ಲಿಯೇ ಯಾವಗಲೇ ಚರ್ಚೆಯಾಗಲಿ ಅದು ಬನಾರಸ್​ ಪಾನ್ ಉಲ್ಲೇಖವಿಲ್ಲದೆ ಅದು ಮುಗಿಯುವುದಿಲ್ಲ. ನಾನು ವಾರಾಣಿಸಿಯ ಸಂಸದ, ನೀವು ನಿಜಕ್ಕೂ ಪಾನ್​ ಪ್ರಿಯರೇ ಆಗಿದ್ದರೆ ನನ್ನ ಕ್ಷೇತ್ರವಾದ ವಾರಾಣಸಿಯಲ್ಲಿ ಹೂಡಿಕೆ ಮಾಡಿ ಎಂದು ಉದ್ಯಮಿಗಳಿಗೆ ಕರೆ ಕೊಟ್ಟಿದ್ದಾರೆ.

ಇದನ್ನೂ ಓದಿ:ಬೇಡುವವರೇ ಲಕ್ಷಾಧೀಶ್ವರರು.. ಭಾರತದ ಟಾಪ್​ 5 ಭಿಕ್ಷುಕರು ಯಾರು? ಅವರ ನಿತ್ಯ ಸಂಪಾದನೆ ಎಷ್ಟು ಗೊತ್ತಾ?
ಹಿಂದೂಗಳ ಪವಿತ್ರ ನಗರಿಯಾದ ವಾರಾಣಸಿಯಲ್ಲಿ ಪಾನ್ ತನ್ನದೇ ಆದ ವಿಶೇಷ ಗುರುತನ್ನು ಪರಂಪರಾನುಗಾತವಾಗಿ ಉಳಿಸಿಕೊಂಡು ಬಂದಿದೆ. ಅಲ್ಲಿ ನಡೆಯುವ ಪ್ರತಿ ಮದುವೆಯೂ ಬನಾರಸ್ ಪಾನ್ ಇಲ್ಲದೇ ಸಂಪೂರ್ಣಗೊಳ್ಳುವುದಿಲ್ಲ. ಹೀಗಾಗಿ ನೀವು ಪಾನ್ ಇಷ್ಟಪಡುವವರಾಗಿದ್ದರೆ., ಬನಾರಸ್​ ನಿಮಗೆ ಹೂಡಿಕೆಗೆ ತಕ್ಕ ಸ್ಥಳ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment