ಆರೋಗ್ಯಕರ ಜೀವನದ ರಹಸ್ಯ ಬಿಚ್ಚಿಟ್ಟ ಪ್ರಧಾನಿ ನರೇಂದ್ರ ಮೋದಿ
ಪ್ರತಿ ದಿನ ಸಂಜೆ 6 ಗಂಟೆ ಬಳಿಕ ಏನೂ ತಿನ್ನುವುದಿಲ್ಲವಂತೆ ನಮೋ!
ಸಂಸದರ ಜೊತೆ ಊಟ ಮಾಡಿದ ನರೇಂದ್ರ ಮೋದಿ ಹೇಳಿದ್ದೇನು?
ನರೇಂದ್ರ ಮೋದಿ ದೇಶದ ಹೆಮ್ಮೆಯ ಪ್ರಧಾನಿ. ಇಡೀ ವಿಶ್ವವನ್ನೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಧೀಮಂತ ನಾಯಕ. 10 ವರ್ಷಗಳಿಂದ ದಣಿವರಿಯದೇ ದೇಶಕ್ಕಾಗಿ ದುಡಿಯುತ್ತಿರೋ ಮೋದಿಯ ಸಕ್ಸಸನ್ ಮತ್ತೊಂದು ಬಿಗ್ ಸೀಕ್ರೆಟ್ ರಿವೀಲ್ ಆಗಿದೆ.
10 ವರ್ಷಗಳಲ್ಲಿ ಹತ್ತಾರು ದೇಶಗಳಿಗೆ ಭೇಟಿ. ನೂರಾರು ರೋಡ್ ಶೋಗಳಲ್ಲಿ ಭಾಗಿ. ಸಾವಿರಾರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರೋ ಪ್ರಧಾನಿ. ಒಂದು ದಿನವೂ ರಜೆ ಇಲ್ಲ, ರೆಸ್ಟೂ ಇಲ್ಲ, ಆಸ್ಪತ್ರೆ ಸೇರಿದ್ದೇ ಇಲ್ಲ. ನಮೋ ಎನರ್ಜಿಯನ್ನ ದೇಶದ ಜನತೆ ಮಾತ್ರವಲ್ಲ ಇಡೀ ವಿಶ್ವವೇ ಮೆಚ್ಚಿ ಕೊಂಡಾಡಿದೆ. ಇದಕ್ಕೆಲ್ಲ ಮೋದಿಯ ಲೈಫ್ ಸ್ಟೈಲ್ ಕಾರಣ. ಆ ರಹಸ್ಯವನ್ನ ಸ್ವತಃ ಮೋದಿಯೇ ಸಂಸದರ ಮುಂದೆ ಬಿಚ್ಚಿಟ್ಟಿದ್ದಾರೆ.
‘ದಿನಕ್ಕೆ ಕೇವಲ ಮೂರುವರೆ ಗಂಟೆ ಮಾತ್ರ ನಿದ್ರೆ’
ಮೋದಿ ದಿನಕ್ಕೆ ಕೇವಲ ಮೂರುವರೆ ಗಂಟೆ ಮಾತ್ರ ನಿದ್ದೆ ಮಾಡ್ತಾರಂತೆ. ಅಷ್ಟೇ ಅಲ್ಲ ಸಂಜೆ 6 ಗಂಟೆ ಬಳಿಕ ಪಿಎಂ ಏನನ್ನೂ ಸೇವಿಸುವುದಿಲ್ಲವೆಂದು ಖುದ್ದು ಪ್ರಧಾನಿಯೇ ತಮ್ಮ ಲೈಫ್ಸ್ಟೈಲ್ ಅನ್ನ ಸಂಸದರ ಮುಂದೆ ರಿವೀಲ್ ಮಾಡಿದ್ದಾರೆ. ಮೋದಿ ವಿರೋಧ ಪಕ್ಷದ ಸಂಸದರ ಜೊತೆ ಸಂಸತ್ ಕ್ಯಾಂಟೀನ್ನಲ್ಲಿ ಊಟ ಮಾಡಿದ್ರು. ಈ ವೇಳೆ ಪ್ರಧಾನಿ ಅವರ ಆರೋಗ್ಯಕರ ಜೀವನದ ರಹಸ್ಯವನ್ನ ಬಿಚ್ಚಿಟ್ಟಿದ್ದಾರೆ. ದಿನಕ್ಕೆ ಕೇವಲ 3.5 ಗಂಟೆಗಳ ಕಾಲ ತಾವು ನಿದ್ರೆ ಮಾಡೋದಾಗಿ ಹೇಳಿರುವ ಮೋದಿ, ಸಂಜೆ 6 ಗಂಟೆಯ ಬಳಿಕ ಏನೂ ತಿನ್ನುವುದಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ ಆರೋಗ್ಯಕರ ಜೀವನಕ್ಕಾಗಿ ಯೋಗ ಮಾಡುವ ನಮೋ ಆಗಾಗ ಉಪವಾಸಗಳನ್ನು ಮಾಡುವ ವಿಷಯವನ್ನೂ ಸಂಸದರ ಮುಂದೆ ತೆರೆದಿಟ್ಟಿದ್ದಾರೆ. ಪ್ರಧಾನಿ ಜೊತೆ ಸಮಯ ಕಳೆದ ಬಳಿಕ ಸಂಸದ ಎಲ್. ಮುರುಗನ್ ನಮೋ ಲೈಫ್ಸ್ಟೈಲ್ ಕೇಳಿ ಅಚ್ಚರಿ ವ್ಯಕ್ತಪಡಿಸಿದ್ರು.
8 ಸಂಸದರಿಗೆ ತುಂಬಾ ವಿಶೇಷವಾದ ದಿನ. ನಮಗೆಲ್ಲ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಊಟ ಮಾಡೋ ಅವಕಾಶ ಸಿಕ್ಕಿತ್ತು. ಸರ್ ಕೇವಲ ಮೂರುವರೆ ಗಂಟೆಗಳ ಅಷ್ಟೇ ಮಲಗೋದಾಗಿ ಹೇಳಿದ್ರು. ಅಷ್ಟೇ ಅಲ್ಲ 6 ಗಂಟೆ ಬಳಿಕ ಏನನ್ನೂ ಸೇವಿಸೋಲ್ಲ ಅಂತ ಸರ್ ಹೇಳಿದ್ರು. ನಮಗೆ ನಮ್ಮ ಪ್ರಧಾನ ಮಂತ್ರಿಗಳ ಜೊತೆ ಕಾಲ ಕಳೆಯಲು, ಅವ್ರಿಂದ ಹಲವು ಅಂಶ ಕಲಿಯಲು ಒಳ್ಳೆಯ ಸಮಯ ಸಿಕ್ಕಿತು.
– ಎಲ್. ಮುರುಗನ್, ಸಂಸದ
45 ನಿಮಿಷಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಜೊತೆ ಸಮಯ ಕಳೆದಿದ್ದಕ್ಕೆ ಸಂಸದರು ಸಂತಸಗೊಂಡಿದ್ದಾರೆ. ಬರೀ ಬಿಜೆಪಿ ಸಂಸದರಷ್ಟೇ ಅಲ್ಲ, ಎಲ್ಲಾ ಪಕ್ಷದ 8 ಸಂಸದರ ಜೊತೆ ಪ್ರಧಾನಿ ಸಮಯ ಕಳೆದ್ರು. ದೇಶದ ಪ್ರಧಾನಿಯಾಗಿ ಅಲ್ಲ, ಸಾಮಾನ್ಯ ವ್ಯಕ್ತಿಯಂತೆ ನಮ್ಮ ಜೊತೆ ಕುಳಿತು ಹೊಸ ಸಂಸತ್ನ ಕ್ಯಾಂಟೀನ್ನಲ್ಲಿ ಊಟ ಮಾಡಿದ್ರು ಎಂದು ಮುರುಗನ್ ಪ್ರಧಾನಿಯನ್ನ ಹಾಡಿ ಹೊಗಳಿದ್ರು. ದಣಿವರೆಯದ ದೇಶದ ದೊರೆಯ ಲೈಫ್ಸ್ಟೈಲ್ ಕೇಳಿ ಸಂಸದರು ಅಚ್ಚರಿಗೊಂಡಿದ್ದಷ್ಟೇ ಅಲ್ಲ, ಅವರಿಂದ ಪ್ರೇರೇಪಿತರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ